ಒಲಿದರೆ ನಾರಿ,ಮುನಿದರೆ ಮಾರಿ

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

‌‌‌                 ಸಿದ್ಧಸೂಕ್ತಿ :
ಒಲಿದರೆ ನಾರಿ, ಮುನಿದರೆ ಮಾರಿ.
ಒಲಿದರೆ ಸ್ತ್ರೀ ತಾಯಿ ಸಹೋದರಿ ಹೆಂಡತಿ ಮಗಳು ಸೊಸೆ ಅತ್ತೆ! ತಿರುಗಿಬಿದ್ದರೆ ಸರ್ವನಾಶಕಿ! ದೇಹ ದುರ್ಬಲೆ, ಮನೋಹೃದಯ ಸುಕೋಮಲೆ! ಪ್ರೀತಿ ದಯೆ ಕರುಣೆ ತಾಳ್ಮೆ ತ್ಯಾಗ ಗುಣಮಹಾಸಾಗರೆ! ಆದರ್ಶ ಹೆಣ್ಣು ಎಲ್ಲರ ಕಣ್ಣು ಬೆಳಕು ಬೇಕು! ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ=ಪೂಜ್ಯ ನಾರಿಯರಿರುವಲ್ಲಿ ದೇವತೆಗಳಿರುವರು. ಗೃಹಿಣೀ ಗೃಹಮುಚ್ಯತೇ=ಮಡದಿಯೇ ಮನೆ.ಸ್ತ್ರೀ ಇಲ್ಲದ ಮನೆ ಕಳೆಗಟ್ಟದು. ಸಂತಾನದಾನ ಮಗುಪೋಷಣೆ ಮನೆ ಪಾತ್ರೆ ಬಟ್ಟೆ ಶುಚಿ, ಅಡುಗೆ, ಅತ್ತೆ ಮಾವ ಗಂಡ ಮಕ್ಕಳ ಸೇವೆ, ಅತಿಥಿ ಸತ್ಕಾರ, ಎಲ್ಲಕ್ಕೂ ಸೈ ಮಹಿಳೆ!ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ಸಮಾನ! ಮಹಿಳೆ ತನ್ನತನವನರಿತು ನಡೆದರೆ ಬಲು ಚೆನ್ನ!ತನಗೆ ತನ್ನವರಿಗೂ ಕೀರ್ತಿ! ಸುಸಂಸ್ಕೃತಿ ತುಂಬಿ ಸೂಸಿ ಬೆಳಗುವುದು! ಕೆಟ್ಟರೆ ಸರ್ವನಾಶ! ಮನೆ ಮಠ ರಾಜಕಾರಣ ಸಮಾಜ ಛಿದ್ರ! ಮಹಿಳೆ ಶಕ್ತಿ! ಕೆರಳಿದರೆ ಸಿಂಹಿಣಿ! ಚಾಮುಂಡಿ ನಿದರ್ಶನ! ಸ್ತ್ರೀ ಕೆರಳದಂತೆ, ಸಹನೆಯ ಕಟ್ಟೆ ಒಡೆಯದಂತೆ ನಡೆಯುವುದು ಪುರುಷ ಹೊಣೆ!
ನಾರಿಯರೊಲುಮೆ ಎಲ್ಲರಿಗಿರಲಿ, ನೆಮ್ಮದಿ ಬಾಳು ತುಳುಕುತಲಿರಲಿ.

Girl in a jacket
error: Content is protected !!