ಒಂಬತ್ತು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

Share

ಬೆಂಗಳೂರು, ಜು,15:ಭ್ರಷ ಅಧಿಕಾರಿಗಳಿಗೆ ಸಿಂಹಸ್ವಪ್ನವಾದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಒಂಬತ್ತ ಅಧಿಕಾರಿಗಳ ಮನೆ ,ಕಚೇರಿ ಮೇಲೆ ದಾಳಿ ನಡೆಸಿ ಅಪಾರ ಆಸ್ತಿ ದಾಖಲೆಗಳನ್ನು ಪತ್ತೆ ಹಚ್ಚಿದೆ.

ಬೆಂಗಳೂರು, ಕೋಲಾರ, ಮಂಗಳೂರು ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ನೀಡಿದೆ. ಅಧಿಕಾರಿಗಳ ಮನೆ,ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ ಎಸಿಬಿ ತಂಡ ಪರಿಶೀಲನೆಯಲ್ಲಿ ತೊಡಗಿವೆ.

ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ಮಾಹಿತಿ ಈ ರೀತಿ ಇದ್ದು ಜಿ.ಶ್ರೀಧರ್, ಕಾರ್ಯಪಾಲಕ ಅಭಿಯಂತರ,‌ ನಗರಾಭಿವೃದ್ಧಿ ವಿಭಾಗ ಜಿಲ್ಲಾಧಿಕಾರಿ ಕಚೇರಿ ಮಂಗಳೂರು, ಕೃಷ್ಣ ಎಸ್​, ಹೆಬ್ಸೂರು, ಇಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಉಡುಪಿ,ಆರ್.ಪಿ ಕುಲಕರ್ಣಿ, ಸಿಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ, ಹೆಚ್.ಆರ್ ಕೃಷ್ಣಪ್ಪ, ಸಹಾಯಕ ನಿರ್ದೇಶಕ, ಮಾಲೂರು ನಗರ ಯೋಜನಾ ಪ್ರಾಧಿಕಾರ ಕೋಲಾರ, ಸುರೇಶ್ ಮೋಹ್ರೆ, ಜೆಇ ಪಿಆರ್​ಇ ಬೀದರ್, ವೆಂಕಟೇಶ್ ಟಿ, ಡಿಸಿಎಫ್​ ಸಾಮಾಜಿಕ ಅರಣ್ಯ ಮಂಡ್ಯ, ಸಿದ್ದರಾಮ ಮಲ್ಲಿಕಾರ್ಜುನ್, ಎಇಇ, ಹೆಸ್ಕಾಂ ವಿಜಯಪುರ
,ಎ.ಕೃಷ್ಣಮೂರ್ತಿ, ಹಿರಿಯ ಮೋಟಾರು ನಿರೀಕ್ಷಕರು ಕೋರಮಂಗಲ, ಎ.ಎನ್.ವಿಜಯ್ ಕುಮಾರ್, ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಬಳ್ಳಾರಿ ಇವರ ಮನೆಯಲ್ಲಿ ಚಿನ್ನಾಭರಣ,ನಗದು ಮಹತ್ವದ ದಾಖಲೆಗಳು ಸಿಕ್ಕಿವೆ.

ಅಪಾರ ನಗದು ಸೇರಿದಂತೆ ಮಹತ್ವದ ದಾಖಲೆಗಳು ಸಿಕ್ಕಿದ್ದು ಪರಿಶೀಲನೆಯಲ್ಲಿ ತೊಡಗಿದೆ.

Girl in a jacket
error: Content is protected !!