ಸ್ವಾಮಿ- ಒಡೆಯ

Share

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ             ‌‌‌

ಸಿದ್ಧಸೂಕ್ತಿ :
ಸ್ವಾಮಿ- ಒಡೆಯ
ಸ್ವಾಮಿ=ಒಡೆಯ. ಈ ಸ್ವತ್ತಿಗೆ ಈತ ಸ್ವಾಮಿ, ಆ ಸ್ವತ್ತಿಗೆ ಆತ ಒಡೆಯ. ಸ್ವಾಮಿ =ಯಜಮಾನ. ನಾಯಿಗಿರುವ ಸ್ವಾಮಿನಿಷ್ಠೆ ಕೂಲಿಗನಿಗಿಲ್ಲ! ಸ್ವಾಮಿ =ಗಂಡ. ಪಾರ್ವತೀ ಲಕ್ಷ್ಮೀ ಸರಸ್ವತಿಯರು ತಮ್ಮ ಪತಿದೇವರ ಪಾದಗಳಿಗೆ ನಮಸ್ಕರಿಸಿ”ಸ್ವಾಮಿ, ಆಶೀರ್ವದಿಸಿ” ಎನ್ನುವರಂತೆ. ಸುಸಂಸ್ಕೃತ ಭಾರತೀಯ ನಾರಿ ಪತಿ ಹೆಸರ ನೇರ ಹೇಳಳು! ಒತ್ತಾಶೆಗೆ ಹೇಳಬೇಕೆಂದಾಗ ಒಡಪು ಬಳಸುವುದುಂಟು! ಸ್ವಾಮಿ =ಅಧಿಕಾರಿ,ನ್ಯಾಯಾಧೀಶ, ಮಂತ್ರಿ ಇತ್ಯಾದಿ. ವಕೀಲ ವಾದಿಸುವಾಗ,ನ್ಯಾಯಾಧೀಶನಿಗೆ, ದೂರುದಾರ ದೂರು ನೀಡುವಾಗ ಅಧಿಕಾರಿಗೆ, ಜನಸಾಮಾನ್ಯ ಮಂತ್ರಿ ಇತ್ಯಾದಿಗಳಿಗೆ “ಸ್ವಾಮಿ! “ಎನ್ನುವನು. ಸ್ವಾಮಿ =ಜಂಗಮ, ಆರಾಧ್ಯ, ಹಿರೇಮಠ ಚಿಕ್ಕಮಠ ಮಠಪತಿ ಉಪಹೆಸರಿನವ. ಸ್ವಾಮಿ =ಸಂನ್ಯಾಸಿ, ಮಠಾಧಿಪತಿ. ಎಲ್ಲ ಕಡೆ ಸ್ವಾಮಿ ಪದ ಗೌರವಾಸ್ಪದ! ಸಂನ್ಯಾಸಿಗೆ ಹೆಚ್ಚು ಗೌರವ!! ಅದಕ್ಕೇ “ಸ್ವಾಮೀಜಿ!”. ಸಂನ್ಯಾಸಿಯ ಈ ಗೌರವ ಪಡೆಯಲು ಮಡದಿ ಮಕ್ಕಳೊಂದಿಗೆ ಇರುವ ಸಂಸಾರಿಕರು, ಜ್ಯೋತಿಷಿಗಳು ಕಾವಿ ಜಟೆ ಗಡ್ಡ ರುದ್ರಾಕ್ಷಿ ಕಟ್ಟಿಗೆ ಪಾದುಕೆ ಧರಿಸಿ, ಆ ಋಷಿ ಈ ಋಷಿ ಎಂದು ಸಂನ್ಯಾಸಿಯಂತೆ ಬಿಂಬಿಸಿಕೊಳ್ಳುವರು! ರೈತಮುಖಂಡನ ಹೆಸರೊಂದು ಹೀಗಿತ್ತು:ವೀರೇಶ ಸೊಬರದಮಠ ಸ್ವಾಮಿಗಳು! ಗೌರವ ಪಡೆಯಲು ಸ್ವಾಮಿ ಪಟ್ಟಕ್ಕೆ ಪೈಪೋಟಿ!” ಕಳ್ಳ ಸ್ವಾಮಿ” ಎಂದಾಗ ಬೊಟ್ಟು ಮಾಡುವುದು ಸಂನ್ಯಾಸಿಯ ಕಡೆ! ಯಾವ ನ್ಯಾಯ ಸ್ವಾಮಿ?

Girl in a jacket
error: Content is protected !!