ರಾಮನಗರ ಜು 13: ಬೆಲೆ ಕುಸಿತದಿಂದ ಕಂಗೆಟ್ಟ ರೈತರು ರಾಮನಗರದ ಎಂಪಿಎಂಸಿ ಬಳಿಯ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೊಮೊಟೊ ಸುರಿದು ಸೋಮವಾರ ರೈತರು ಪ್ರತಿಭಟನೆ ನಡೆಸಿದರು.
ನಗರದ ಎಪಿಎಂಸಿ ಎದುರು ಬೆಂಗಳೂರು ಮೈಸೂರು ರಾಷ್ಟ್ರೀಯ ತಡೆದ ರೈತರು ತಾವು ಬೆಳೆದ ಟೊಮೊಟೊವನ್ನು ರಸ್ತೆ ಸುರಿದ ಕೇಂದ್ರ ಹಾಗೂ ರಾಜ್ಯ ಸರಕಾಗಳ ವಿರುದ್ಧ ಧಿಕ್ಕಾರ ಕೂಗಿದರು. ಬೆಳೆ ಇಳಿಕೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಪಟ್ಟಣದ ರೈತ ಸುಜೀವನ್ ಕುಮಾರ್ ಮಾತನಾಡಿ, ರೈತ ಟೊಮೊಟೊ ಬೆಳೆ ಬೆಳೆಯಲು 52ಸಾವಿರ ರೂಪಾಯಿವ ವ್ಯಯಿಸಿದ್ದೇನೆ. ಆದರೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿಗೆ 3ರೂಪಾಯಿ ಮಾರಾಟವಾಗುತ್ತಿದೆ. ಸಂಪೂರ್ಣ ನಷ್ಟವಾಗಿದೆ. ಒಂದು ಕ್ರೇಟ್‍ನಲ್ಲಿ 24 ಕೆಜಿಯಷ್ಟು ಟೊಮೊಟೊ ಇರಲಿದ್ದು, ಒಂದು ಕ್ರೇಟ್ ಟೊಮೊಟೊ ಅನ್ನು 100ರಿಂದ 120ರೂ ವ್ಯಾಪಾರಸ್ಥರು ಕೇಳುತ್ತಿದ್ದಾರೆ ಎಂದು ಹೇಳಿದರು.
ಕಳೆದ 5 ದಿನಗಳ ಹಿಂದೆ ಟೊಮೊಟೊ ಮಾರಾಟಕ್ಕೆಂದು ಎಪಿಎಂಸಿಗೆ ತೆಗೆದುಕೊಂಡು ಬಂದಿದ್ದೇನೆ. ಇನ್ನು ಸಹ ವ್ಯಾಪಾರವಾಗಿಲ್ಲ. ಮಾರುಕಟ್ಟೆಯ ದಲ್ಲಾಳಿಗಳು ಸಹ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಶೇ.10ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ. ಇನ್ನು ಟೊಮೊಟೊವನ್ನು ಲಾಲ್‍ಬಾಗ್ ಸೊಸೈಟಿಯ ಮೂಲಕವೂ ಮಾರಾಟ ಮಾಡಿದ್ದೇವೆ. ಜು.2ರಂದು ನೀಡಿದ್ದೇವೆ. ಅವರು ಸಹ ಬೆಳೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 250 ಗ್ರಾಂ ತೂಗುವ ಬೆಳೆಯನ್ನು ಮಾತ್ರ ಮಾರಾಟಕ್ಕೆ ಪರಿಗಣ ಸಿದ್ದರು. ಆದರೂ, ಈ ತನಕ ಮಾತ್ರ ಸೊಸೈಟಿಯಿಂದಲೂ ಹಣ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್‍ನಿಂದ ಸಾಲ ಪಡೆದು ಟೊಮೊಟೊ ಬೆಳೆದಿದ್ದೇನೆ. 2 ಲಕ್ಷದ ತನಕ ನಷ್ಟ ಸಂಭವಿಸಿದೆ. ಹಾಗಾಗಿ ಈ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ನೀಡಿದ್ದೇನೆ. ಆದರೂ, ಸಮಸ್ಯೆ ಮಾತ್ರ ಪರಿಹಾರ ಆಗಿಲ್ಲ. ಹಾಗಾಗಿ ಬೆಳೆದ ಬೆಳೆಯನ್ನು ರಸ್ತೆಗೆ ಸುರಿದ ಆಕ್ರೋಶ ವ್ಯಕ್ತಪಡಿದ್ದೇವೆ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸೇರಿ ಬೆಳೆಗೆ ಮೌಲ್ಯವರ್ಧನೆ ಮಾಡುವ ಉದ್ದಮೆಯನ್ನು ಎಪಿಎಂಸಿ ಮೂಲಕ ತಾಲೂಕು ವ್ಯವಸಾಯೋತ್ನಪ್ಪ ಮಾರುಕಟ್ಟೆ ಮುಖಾಂತರ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಸುಧೀಂದ್ರ, ರಮೇಶ್, ರಾಮಯ್ಯ, ಕಾಂತರಾಜು, ಜಯ ಕುಮಾರ್ ಸೇರಿದಂತೆ ಹಲವರು ಇದ್ದರು.