ಧರ್ಮಸ್ಥಳ, ಜು,13:ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಇಂದು ಬೆಳಿಗ್ಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಅಂತಾರಾಷ್ಟ್ರೀಯ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಮತ್ತು ಸಂಸ್ಕೃತ ಗುರುಕುಲದ ಬಗ್ಗೆ ಹಾಗೂ ಚೇರಂಬಾಣೆಯ ಶ್ರೀ ಸಿದ್ಧಾರೂಢಾಶ್ರಮದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಸಿದ್ಧಸೂಕ್ತಿಯ ಮೊದಲ ಭಾಗವನ್ನು ಅರ್ಪಿಸಲಾಯಿತು. ಡಾ ವೀರೇಂದ್ರ ಹೆಗ್ಗಡೆ ಅವರು ಡಾ ಆರೂಢಭಾರತೀ ಸ್ವಾಮೀಜಿಯವರ ಕಾರ್ಯಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ
ಚಿತ್ರ ನಿರ್ದೇಶಕ ರಾಜಾ ರವಿಶಂಕರ್, ಖ್ಯಾತ ಯಕ್ಷಗಾನ ಕಲಾವಿದ ನಿತ್ಯಾನಂದ ನಾಯಕ್, ಕಾಸ್ಟೂಮ್ ಚಂದ್ರು, ಆಂಜನಪ್ಪ ಮೊದಲಾದವರು ಉಪಸ್ಥಿತರಿದ್ದರು.