ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಎಲ್ಲಾರ ಮನೆ ದೋಸೆ ತೂತು!
ಮನೆ ಯಾರದಾದರೇನು?, ಮಠಕುಟೀರವಾದರೇನು?, ಅಲ್ಲಿ ಮಾಡಿದ ದೋಸೆ ತೂತು! ತೂತಿಲ್ಲದ ದೋಸೆ ಎಲ್ಲಿ? ಕಂಚಿಗೆ ಹೋದರೂ ಮಂಚಕ್ಕೆ ಕಾಲು ನಾಲ್ಕು. ಮೂರೆರಡೈದು ಕಾಲುಳ್ಳದ್ದು ಮಂಚವೆನಿಸದು. ಭಾರತ ಅಮೆರಿಕ ಮತ್ತೊಂದಿರಲಿ, ಹಿಂದು ಮುಸ್ಲಿಂ ಕ್ರೈಸ್ತ ಮತ್ತೊಬ್ಬನಿರಲಿ, ಬಡವ ಶ್ರೀಮಂತನಿರಲಿ, ಸಂಸಾರದಲ್ಲಿ ಜಗಳ ವೈಮನಸ್ಸು ಇದ್ದದ್ದೇ. ಹೆಚ್ಚು ಕಡಿಮೆ, ಹಿಂದೆ ಮುಂದೆ ಇರಬಹುದು. ಇಂಥ ಸಂದರ್ಭದಲ್ಲಿ ಒಬ್ಬರು ಮತ್ತೊಬ್ಬರಿಗೆ ತಿಳಿ ಹೇಳಿ ಕೂಡಿಸಬೇಕು. ಅವಕಾಶ ಸಿಕ್ಕಿತೆಂದು ದುರುಪಯೋಗಪಡಿಸಿಕೊಂಡರೆ, ಉರಿವಾಗ್ನಿಗೆ ತುಪ್ಪ ಸುರಿದರೆ, ನಾಳೆ ತನಗೇ ಈ ಗತಿ ತಿರುವು ಮುರುವು! ಒಂದು ಸಂಸಾರದ ಓರೆ ಕೋರೆಗಳನ್ನೆತ್ತಿ ಆಡಿಕೊಂಡರೆ, ಎರಗುವುದು “ಸಾಕು ಬಾಯ್ಮುಚ್ಚು. ನೀನೇನು ಸಾಚಾನಾ? ಕಂಡಿದಿನಿ ನಿನ್ನ ಸಂಸಾರನೂ. ಬಾಯಿ ಬಿಡಲಾ?… ಎಲ್ಲಾರ ಮನೆ ದೋಸೆ ತೂತು!” ಮಾತು!
ಭೂಮಿಯು ನಮ್ಮ ಬದುಕಿನ ಹಂಚು, ಸಂಸಾರವೆಂಬುದು ತೂತಿನ ದೋಸೆ!!