ರೋಷನ್ ಬೇಗ್ ಆಸ್ತಿ ಜಪ್ತಿ‌ಮಾಡಿದ ಸರ್ಕಾರ

Share

ಬೆಂಗಳೂರು,ಜು,07:  ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ 2020ರ ನವೆಂಬರ್ 22 ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಆ ನಂತರ ಜಾಮೀನು ಪಡೆದು ಹೊರಗೆ ಬಂದಿದ್ದರು.

ಪ್ರಮುಖ ಆರೋಪಿ ಮನ್ಸೂರ್​ ಅಲಿಖಾನ್​ನಿಂದ ಅಕ್ರಮವಾಗಿ ಹಣ ಪಡೆದಿದ್ದಾರೆ ಎನ್ನುವುದು ಸಾಬೀತಾದ ನಂತರ ಇವರ ಆಸ್ತಿ ಮುಟ್ಟುಗೋಲಿಗೆ ನ್ಯಾಯಲಯ ಆದೇಶಿಸಿತ್ತು.

ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ರೋಷನ್ ಬೇಗ್  ಅವರ ಆಸ್ತಿಯನ್ನು   ಸರ್ಕಾರ  ಜಪ್ತಿ ಮಾಡಿದೆ. ಪ್ರಸ್ತುತ ರೋಷನ್ ಬೇಗ್ ಗೆ ಸೇರಿದ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್ ಜಪ್ತಿ ಮಾಡಲಾಗಿದ್ದು ಎಷ್ಟು ಪ್ರಮಾಣದ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ ಎನ್ನುವುದು ತಿಳಿಯಬೇಕಿದೆ. ಈ ಪ್ರಕರಣದ ಕುರಿತು  ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ವಾದ ಮಂಡಿಸಿದ್ದರು.

ಈ ವೇಳೆ ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಲಯ ಮಾಜಿ ಸಚಿವ ಎಂದು ಆಸ್ತಿ ಜಪ್ತಿ ಮಾಡಲು ವಿಳಂಬ ಮಾಡಿದ್ದೀರಿ. ಅರ್ಧ ಡಜನ್ ಆದೇಶ ನೀಡಿದ ನಂತರ ಜಪ್ತಿ ಮಾಡಲು ಮುಂದಾಗಿದ್ದೀರಿ.

Girl in a jacket
error: Content is protected !!