ಕುತೂಹಲ ಕೆರಳಿಸಿದ ವಿಶ್ವನಾಥ್,ಯತ್ನಾಳ್ ಭೇಟಿ

Share

ಬೆಂಗಳೂರು,ಜು,೦೫:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾಗಬೇಕು ಎಂದು ಒತ್ತಾಯಿಸುತ್ತಿರುವ ಇಬ್ಬರು ಬಿಜೆಪಿ ನಾಯಕರಾದ ಎಚ್.ವಿಶ್ವನಾಥ್ ಮತ್ತು ಬಸವರಾಜ್ ಪಾಟೀಲ್ ಯತ್ನಾಳ್ ಅವರು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.


ಸುಮಾರು ಹೊತ್ತು ಈ ಉಭಯನಾಯಕರು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದ್ದು ಮುಂದಿನ ಬೆಳವಣಿಗೆಗಳಿಗೆ ಕಾರಣ ಮತ್ತು ತಂತ್ರಗಳ ಕುರಿತು ಚರ್ಚಿಸಿದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ಇಬ್ಬರ ಭೇಟಿ ಕುತೂಹಲ ಕೆರಳಿಸಿದೆ.
ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸುತ್ತೂರು ಮಠಕ್ಕೆ ಹೋಗಿದ್ರಾ? ಎಂದು ವಿಶ್ವನಾಥ್ ಕೇಳಿದ್ದಕ್ಕೆ; ‘ಈ ಹಿಂದೆ ಸಾಕಷ್ಟು ಬಾರಿ ಹೋಗಿದ್ದೆ. ಈ ಬಾರಿ ಹೋಗಿಲ್ಲ. ಎಲ್ಲರಿಗಿಂತ ಸ್ವಲ್ಪ ಡಿಫರೆಂಟ್ ಇರಬೇಕಲ್ವಾ..?’ ಎಂದು ಬಸನಗೌಡ ಪ್ರತಿಕ್ರಿಯಿಸಿದರು. ಚಾಮುಂಡಿ ಬೆಟ್ಟ, ನಂಜನಗೂಡು, ದೇವನೂರು ಮಠ, ಹೊಸ ಮಠಕ್ಕೆ ಭೇಟಿ ನೀಡಿದ್ದ ಯತ್ನಾಳ ವಿಶ್ವನಾಥ್ ಜೊತೆ ಉಭಯ ಕುಶಲೋಪರಿ ಹಂಚಿಕೊಂಡರು. ನಂತರ ಇಬ್ಬರೂ ಕೊಠಡಿಯೊಂದರಲ್ಲಿ ಗೋಪ್ಯ ಮಾತುಕತೆ ನಡೆಸಿದರು.

Girl in a jacket
error: Content is protected !!