ವಿಜಯನಗರ, ಜು,04;ವೃದ್ದನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಾಜಿ ಸಚಿವ ಪರಮೇಶ್ವರ್ ನಸಯಕ್ ಸಹೋದರನನ್ನು ಬಂಧಿಸಲಾಗಿದೆ.
ಜೂನ್ 29ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಕ್ಷ್ಮೀಪುರ ತಾಂಡದಲ್ಲಿ ಮನೆಯ ಜಾಗದ ಕ್ಷುಲ್ಲಕ ವಿಚಾರವಾಗಿ ಶರಣ ನಾಯ್ಕ ಮೇಲೆ ಪಿ. ಟಿ. ಶಿವಾಜಿ ನಾಯ್ಕ ಹಲ್ಲೆ ಮಾಡಿದ್ದರು.
ಹಲ್ಲೆಯಿಂದಾಗಿ ಗಾಯಗೊಂಡಿದ್ದ ಶರಣ ನಾಯ್ಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಾಣಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಹಲ್ಲೆಗೊಳಗಾದ ಶರಣಾ ನಾಯ್ಕ ಸಂಬಂಧಿಕರಾದ ಶ್ರೀದೇವಿ ಎಂಬುವರು ದೂರು ದಾಖಲಿಸಿದ್ದರು.
ದೂರು ದಾಖಲಿಸದ ನಂತರ ಅರಸೀಕೆರೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಐಪಿಸಿ ಸೆಕ್ಷನ್ 323, 324, 504, 506, 509 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಶಾಸಕ ಪಿ. ಟಿ. ಪರಮೇಶ್ವರ್ ನಾಯ್ಕ ಸಹೋದರ ಶಿವಾಜಿ ನಾಯ್ಕ ಹಲ್ಲೆ ಸಹೋದರ ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ. ದೂರು, ಪ್ರತಿ ದೂರು ದಾಖಲಾದ ಹಿನ್ನಲೆಯಲ್ಲಿ ಎರಡು ಕಡೆಯವರನ್ನು ಪೊಲೀಸರು ಬಂಧಿಸಿದ್ದಾರೆ.
ಪಿ. ಟಿ. ಶಿವಾಜಿ ನಾಯ್ಕ ಆತನ ಪತ್ನಿ ಕುಮಾರಿ ಬಾಯಿ, ಮಗ ರಾಹುಲ್ ಬಂಧಿಸಲಾಗಿದೆ. ಇತ್ತ ಹಲ್ಲೆಗೊಳಗಾದ ಜಗದೀಶ್, ಆತನ ಪತ್ನಿ ಶ್ರೀದೇವಿ, ಜಗದೀಶ್ ಅಣ್ಣ ಶಿವಕುಮಾರ್ ಬಂಧಿಸಲಾಗಿದೆ. ನಿನ್ನೆ ಪ್ರತಿ ದೂರು ದಾಖಲಾಗುತ್ತಿದ್ದಂತೆ 6 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರಿಸಿದರ