ಆರೋಗ್ಯವೇ ಭಾಗ್ಯ

Share

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

ಸಿದ್ಧಸೂಕ್ತಿ :
ಆರೋಗ್ಯವೇ ಭಾಗ್ಯ.
ಆರೋಗ್ಯ ಬದುಕ ಬುನಾದಿ. ದೀರ್ಘ ಬಾಳು. ಅದಿರೆ ಸಾಧ್ಯ ಸಾಧನೆ ಸಿದ್ಧಿ! ಇಲ್ಲದಿರೆ ಪರಪೀಡೆ, ಭುವಿಗೆ ಭಾರ! ಹಣ ಆಸ್ತಿ ಹೆಣ್ಣು ಗಂಡು ಮಕ್ಕಳು ಮಿತ್ರ ಭಾಂಧವರಿಗಾಗಿ ಎಲ್ಲ ಎನ್ನುವೆವು. ಆರೋಗ್ಯ ತಪ್ಪಿದಾಗ ಕೈಬಿಟ್ಟು ಎಲ್ಲವನು ಮಾರಿ, ಸಾಲ ಮಾಡಿ, ವಿದೇಶದಲಿ ಚಿಕಿತ್ಸೆ! ಬೆಲೆ ಕಟ್ಟದ ಕಣ್ಣು ಕಿವಿ ನಾಲಿಗೆ ಮೆದುಳು ರಕ್ತ ಹೃದಯ ಕಿಡ್ನಿ ಶ್ವಾಸನಾಳ ನಿರ್ಮಿಸಿದ ಅಗೋಚರ ಶಕ್ತಿ ಭಗವಂತ ಇಲ್ಲೆನ್ನುವೆವು! ತಿನ್ನಬಾರದ್ದನ್ನು ತಿಂದು, ಕುಡಿಯಬಾರದ್ದನ್ನು ಕುಡಿದು, ಆಡಬಾರದ್ದನ್ನು ಆಡಿ, ಮಾಡಬಾರದ್ದನ್ನು ಮಾಡಿ, ಆರೋಗ್ಯಕ್ಕೆ ಬೆಂಕಿ ಹಚ್ಚಿ, ಮಣ್ಣು ಮುಕ್ಕುವೆವು! ಮಾನಸಿಕ ಬೌದ್ಧಿಕ ದೈಹಿಕ ಆರೋಗ್ಯ ರಕ್ಷಣೆ ಎಲ್ಲರ ಹೊಣೆ. ವ್ಯಕ್ತಿಯದ್ದಷ್ಟೇ ಅಲ್ಲ, ಸಮಾಜದ ಆರೋಗ್ಯವೂ ಮುಖ್ಯ. ಊರಿಗೆ ಬೆಂಕಿ ಬಿದ್ದರೆ ತನ್ನ ಮನೆ ಸುಡದೇ? ನೆನಪಿರಲಿ ಕೊರೋನಾ! ಶಬ್ದ ಜಲ ವಾಯು ಪರಿಸರ ಮಾಲಿನ್ಯ ಕೂಡದು! ಅಶುಚಿ ಅಕ್ರಮ ಸೇವನೆ-ನಡೆ ಅತಿಚಿಂತೆ ಅತಿನಿದ್ರೆ ನಿದ್ರಾಭಾವ ಅನಾರೋಗ್ಯ!ಧ್ಯಾನ ಜಪ ಯೋಗ ಪ್ರಾಣಾಯಾಮಾದಿ ಆರೋಗ್ಯ!
ಸರಿ ಸರಿ ಬದುಕೋಣ, ನೂರು ವರ್ಷ ಸುಖಿಸೋಣ!!

Girl in a jacket
error: Content is protected !!