ದೇಶದಲ್ಲಿ ಹೆಚ್ಚುತ್ತಿರುವ ಡೆಲ್ಟಾ ಪ್ಲೆಸ್ ಕೊರೊನಾ ಸಂಖ್ಯೆ

Share

ನವದೆಹಲಿ,ಜೀ,25: ಕೊರೊನಾ ಮೂರನೇ ಅಲೆ ಆರಂಭದ ಮುನ್ನವೇ ಡೆಲ್ಟಾ ಪ್ಲೆಸ್ ಕೋವಿಡ್ ಸಂಖ್ಯೆ ಜಾಸ್ತಿಯಾಗುತ್ತಿದೆ.

45,000 ಮಾದರಿಗಳ ಪೈಕಿ 48 ‘ಡೆಲ್ಟಾ ಪ್ಲಸ್’ ಕೋವಿಡ್ ರೂಪಾಂತರ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 20 ಪ್ರಕರಣಗಳು ಎಂದು ವರದಿಯಾಗಿದೆ ಎಂದು ಕೇಂದ್ರ ತಿಳಿಸಿದೆ.

ತಮಿಳುನಾಡಿನಲ್ಲಿ ಒಂಬತ್ತು, ಮಧ್ಯಪ್ರದೇಶದಲ್ಲಿ ಏಳು, ಕೇರಳದಲ್ಲಿ ಮೂರು, ಪಂಜಾಬ್ ಮತ್ತು ಗುಜರಾತ್‌ನಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿವೆ. ಇನ್ನು ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ, ಜಮ್ಮು ಮತ್ತು ಕರ್ನಾಟಕದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
ಭಾರತದಲ್ಲಿ 90 ಪ್ರತಿಶತ ಕೋವಿಡ್ 19 ಪ್ರಕರಣಗಳು ಬಿ .1.617.2 (ಡೆಲ್ಟಾ) ರೂಪಾಂತರಿ. ಮಹಾರಾಷ್ಟ್ರ, ದೆಹಲಿ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ನ 174 ಜಿಲ್ಲೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಡೆಲ್ಟಾ ರೂಪಾಂತರಗಳೊಂದಿಗೆ ಕೊರೋನಾ ಪ್ರಕರಣಗಳ ಪ್ರಮಾಣವು 2021ರ ಮೇ ತಿಂಗಳಲ್ಲಿ ಶೇಕಡಾ 10.31ರಷ್ಟಿದಿದ್ದು, 2021ರ ಜೂನ್ 20ರವರೆಗೆ 51ಕ್ಕೆ ಏರಿತ್ತು ಎಂದು ಅದು ಹೇಳಿದೆ.

ಕೊರೋನಾ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ SARS-CoV-2 ರೂಪಾಂತರಗಳಾದ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾಗಳ ವಿರುದ್ಧ ಕಾರ್ಯನಿರ್ವಹಿಸುತ್ತವೆ ಎಂದು ಸರ್ಕಾರ ಪ್ರತಿಪಾದಿಸಿತು.

75 ಜಿಲ್ಲೆಗಳು ಇನ್ನೂ ಶೇಕಡಾ 10ಕ್ಕಿಂತ ಸಕಾರಾತ್ಮಕ ಪ್ರಮಾಣ ಇದ್ದು ಇನ್ನು 92 ಜಿಲ್ಲೆಗಳಲ್ಲಿ ಶೇಕಡಾ 5-10ರೊಳಗೆ ಸಕಾರಾತ್ಮಕ ಪ್ರಮಾಣ ಇದ್ದು ಕೊರೋನಾ ಎರಡನೇ ಅಲೆ ಇನ್ನೂ ದೇಶದಲ್ಲಿ ಮುಗಿದಿಲ್ಲ ಕೇಂದ್ರ ಸರ್ಕಾರ ಹೇಳಿದೆ.

Girl in a jacket
error: Content is protected !!