ಎಲ್ಲಾ ದಿನಗಳಲ್ಲೂ ಜೋಗದ ಸಿರಿವೈಭವಕ್ಕೆ ಅವಕಾಶ;ಯೋಗೇಶ್ವರ್

Share

ಬೆಂಗಳೂರು ,ಜೂ. 25: ವಿಶ್ವವಿಖ್ಯಾತ ​ ಜೋಗದ ಸಿರಿಯ ವೈಭವವನ್ನು ಇನ್ನೂ ವರ್ಷದ ಎಲ್ಲಾ ದಿನಗಳಲ್ಲೂ ನೋಡುವ ಯೋಜನೆ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರವಾಸಿ ತಾಣಗಳನ್ನು ನೋಡಲು ಕೇರಳ, ಮಹಾರಾಷ್ಟ್ರದಿಂದ ಎಲ್ಲಾ ಕಡೆ ಜನರ ಬರುತ್ತಾರೆ. ಪ್ರವಾಸೋದ್ಯಮದಿಂದ ರಾಜ್ಯಕ್ಕೆ 18 ರಷ್ಟು ಜಿಡಿಪಿ ಬರುತ್ತಿದೆ. ಜಿಡಿಪಿಯಲ್ಲಿ ನಾವು ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದೇವೆ. ಇನ್ಮುಂದೆ ಇನ್ನಷ್ಟು ಪ್ರವಾಸೋದ್ಯಮ ಇಲಾಖೆ ಬಲಿಷ್ಠಗೊಳಿಸುತ್ತೇವೆ ಎಂದರು.

ಪ್ರವಾಸಿ ಗೈಡ್ ಗಳಿಗೆ ಪರಿಹಾರ
ಲಾಕ್​ಡೌನ್​ನಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಈಗ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಲವು ರಿಯಾಯ್ತಿ ನೀಡಲಾಗಿದೆ. ರೆಸಾರ್ಟ್,ಮನರಂಜನೆ ಪಾರ್ಕ್ ಗೆ 50ರಷ್ಟು ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಪ್ರವಾಸಿ ಗೈಡ್ ಗಳಿಗೆ ಸಾಕಷ್ಟು ಆರ್ಥಿಕ ನಷ್ಟವಾಗಿದ್ದು, ಅದಕ್ಕಾಗಿ ಪರಿಹಾರದ ಹಣ ನೀಡುತ್ತೇವೆ. ಅವರ ಬ್ಯಾಂಕ್ ಅಕೌಂಟ್ ಗೆ ಬಿಡುಗಡೆ ಮಾಡುತ್ತೇವೆ. ಮೋಟಾರು ವಾಹನ ತೆರಿಗೆಯಲ್ಲೂ ವಿನಾಯ್ತಿ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಲಾಕ್​ಡೌನ್​ ನಿಂದ ಪ್ರವಾಸೋದ್ಯಮದ ಕೆಲದ ಚಟುವಟಿಕೆ ಸ್ಥಗಿತಗೊಂಡಿತ್ತು. ಲಾಕ್​ಡೌನ್​ ಬಳಿಕ ಪ್ರವಾಸೋದ್ಯಮದ ಬಾಗಿಲು ಈಗ ತೆರೆಯುತ್ತಿದ್ದೇವೆ. ಮುಂದಿನ ವಾರದಿಂದ ಬಹುತೇಕ ಎಲ್ಲವೂ ಪ್ರಾರಂಭ ಮಾಡುತ್ತೇವೆ ಜಂಗಲ್ ಲಾಡ್ಜ್ ಹೊಟೇಲ್ ಗಳನ್ನ ಪ್ರಾರಂಭಿಸುತ್ತೇವೆ. ಇರುವ ರೆಸಾರ್ಟ್,ಹೊಟೇಲ್ ಗಳನ್ನ ಬಳಸಿಕೊಳ್ಳುತ್ತೇವೆ. ಹೆಲಿ ಟೂರಿಸಂ ಮಾಡುವ ಉದ್ದೇಶವೂ ಇದೆ. ಇಲಾಖೆಗೆ ಕ್ರೀಯಾಶೀಲತೆಯನ್ನ ತಂದಿದ್ದೇವೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ಇಟ್ಟಿಲ್ಲ. ವಾರ್ಷಿಕ 1000 ಕೋಟಿ ಅನುದಾನ ನಮಗೆ ಬೇಕಿದೆ. ಈಗ ಆರ್ಥಿಕ ಇಲಾಖೆ ಕೊಡುವುದಾಗಿ ಹೇಳಿದೆ ಎಂದರು.
ಜಲಾಶಯಗಳ ನೀರನ್ನ ವಿದ್ಯುತ್,ವ್ಯವಸಾಯಕ್ಕೆ ಉಪಯೋಗವಾಗುತ್ತಿತ್ತು. ಇನ್ಮುಂದೆ ಪಿಪಿಎ ಮಾದರಿಯಲ್ಲಿ ಜಲಕ್ರೀಡೆಗೆ ಅವಕಾಶ ಮಾಡಿಕೊಂಡು, ಪ್ರವಾಸೋದ್ಯಮಕ್ಕೂ ಬಳಸಿಕೊಳ್ತೇವೆ. ಮೊದಲು ನೀರಿನ ಹಕ್ಕನ್ನ ಕೊಡ್ತಿರಲಿಲ್ಲ. ಆದರೆ, ಈಗ ಅಲ್ಲಿಯೂ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುತ್ತೇವೆ ಎಂದರು.

ಇದೇ ವೇಳೆ ನಾಯಕತ್ವ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು, ನಮ್ಮ‌ನೋವು ನಾಲ್ಕು‌ಗೋಡೆಗಳ ಮಧ್ಯೆ ಹೇಳಿದ್ದೇವೆ. ನಾವು ಎಕ್ಸಾಮ್ ಬರೆದಿದ್ದೇವೆ. ರಿಸಲ್ಟ್ ಗೋಸ್ಕರ ಕಾಯುತ್ತಿದ್ದೇವೆ. ಅರುಣ್ ಸಿಂಗ್ ಬಂದಾಗ ಎಕ್ಸಾಮ್ ಬರೆದಿದ್ದೆವು. ಆ ರಿಸಲ್ಟ್ ಬರಬೇಕಲ್ಲ, ಬಂದಾಗ ನೋಡೋಣ. ಮುಖ್ಯಮಂತ್ರಿ ಬಗ್ಗೆ ನನಗೆ ಗೌರವವಿದೆ. ಅವರು ಇನ್ನೂ ಎರಡು ವರ್ಷ ಇರಲಿ,ತಪ್ಪೇನು ಇಲ್ಲ. ನಮ್ಮ ನೋವು,ಸಮಸ್ಯೆ ಮೊದಲೇ ಹೇಳಿದ್ದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸಬೇಕು. ಇದನ್ನ ನಾವು ಎಲ್ಲಿ ಹೇಳಬೇಕು ಹೇಳಿದ್ದೇವೆ. ಅವರು ಇದರ ಬಗ್ಗೆ ನಿರ್ಧಾರ ಮಾಡುತ್ತಾರೆ. ನಮ್ಮ ಹಿರಿಯರು ತೀರ್ಮಾನ ಮಾಡುತ್ತೇವೆ ಅಂದಿದ್ದಾರೆ. ಅವರ ನಿರ್ಧಾರದ ಕಡೆ ನೋಡ್ತಿದ್ದೇವೆ

ಇದೇ ವೇಳೆ ಜಿಲ್ಲಾ ಉಸ್ತುವಾರಿ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಯಾವುದೇ ಉಸ್ತುವಾರಿ ಕೊಟ್ಟಿಲ್ಲ. ಕೋಲಾರಕ್ಕೆ ಅರವಿಂದ ಲಿಂಬಾವಳಿ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

Girl in a jacket
error: Content is protected !!