ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಟೋಕನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು ಈಗ ಜುಲೈತಿಂಗಳಲ್ಲಿ ಮೆಟ್ರೋ ಟೋಕನ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸರ್ಕಾರ ಹೇಳಿದೆ
ಬೆಂಗಳೂರು, ಜೂ, ೨೨;ಕೊರೊನಾ ಒಂದನೇ ಅಲೆಯಿಂದ ಮೆಟ್ರೋ ಪ್ರಯಾಣಿಕರಿಗೆ ಟೋಕನ್ ವ್ಯವಸ್ಥೆ ಇಲ್ಲದೆ ಸಂಚಾರಕ್ಕೆ ತೊಂದರೆಯಾಗಿದ್ದು ಮುಂದಿನ ಮಾರ್ಗಸೂಚಿ ಅನ್ವಯ ಬಹುತೇಕ ಅಥವ ಜುಲೈ ಒಂದರಿಂದ ಟೋಕನ್ ವ್ಯವಸ್ಥೆಯನ್ನು ಕಲ್ಪಿಸುವ ಸಾದ್ಯತೆಗಳಿವೆ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷದ ಲಾಕ್ ಡೌನ್ ನಂತರ ಕೇವಲ ಮೆಟ್ರೋ ಕಾರ್ಡ್ ದಾರರಿಗೆ ಮಾತ್ರ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ಟೋಕನ್ ವ್ಯವಸ್ಥೆ ಇಲ್ಲದೆ ಸಂಚಾರಕ್ಕೆ ತೊಂದರೆಯಾಗಿತ್ತು ಆದರೆ ಈ ಬಾರಿ ಮಾರ್ಗಸೂಚಿಯ ಅನ್ವಯ ಮುಂದಿನ ಜುಲೈ ಹೊತ್ತಿಗೆ ಟೋಕನ್ ವ್ಯವಸ್ಥೆ ಕಲ್ಪಿಸುವ ಕುರಿತು ಸರ್ಕಾರ ನಿರ್ಧರಿಸಲಿದೆ.
ಲಾಕ್ ಡೌನ್ ನಂತರ ಮೆಟ್ರೋ ಪ್ರಯಾಣ
ಲಾಕ್ಡೌನ್ ಬಳಿಕ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಸೋಮವಾರ ಆರಂಭವಾಗಿದೆ. ಮೊದಲ ದಿನ ೨೪,೬೦೨ ಜನರು ಸಂಚಾರವನ್ನು ನಡೆಸಿದ್ದಾರೆ.
ಪ್ರಸ್ತುತ ಬೆಳಗ್ಗೆ ೭ ರಿಂದ ೧೧ ಮತ್ತು ಮಧ್ಯಾಹ್ನ ೩ ರಿಂದ ೬ ಗಂಟೆಯ ತನಕ ಮಾತ್ರ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಅಲ್ಲದೇ ಸ್ಮಾರ್ಟ್ ಕಾರ್ಡ್ ಇರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಬೇಕು. ಟೋಕನ್ ಪಡೆದು ಪ್ರಯಾಣಿಸಲು ಅವಕಾಶವಿಲ್ಲ.
ಕೋವಿಡ್ ಮೊದಲ ಅಲೆ ಲಾಕ್ಡೌನ್ ಬಳಿಕ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಸಂಚಾರ ನಡೆಸಲು ಅವಕಾಶ ನೀಡಿದೆ. ರೈಲು ನಿಲ್ದಾಣದಲ್ಲಿ ಜಾರಿಯಲ್ಲಿದ್ದ ಟೋಕನ್ ವ್ಯವಸ್ಥೆ ರದ್ದು ಮಾಡಿದೆ. ಇದರಿಂದಾಗಿ ಹಲವಾರು ಜನರಿಗೆ ತೊಂದರೆಯಾಗುತ್ತಿದೆ.
ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಬಿಎಂಆರ್ಸಿಎಲ್ ಮತ್ತೆ ಟೋಕನ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಜೂನ್ ೨೮ರಿಂದ ಅಥವ ಜುಲೈ ೧ರಿಂದಲೇ ಟೋಕನ್ ವ್ಯವಸ್ಥೆ ಪುನರ್ ಪರಿಚಯಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ.
ಜಯನಗರ ಮೆಟ್ರೋ ನಿಲ್ದಾಣಕ್ಕೆ ಎಚ್.ಎಸ್ ದೊರೆಸ್ವಾಮಿ ಹೆಸರನ್ನಿಡಲು ಆಗ್ರಹಜಯನಗರ ಮೆಟ್ರೋ ನಿಲ್ದಾಣಕ್ಕೆ ಎಚ್.ಎಸ್ ದೊರೆಸ್ವಾಮಿ ಹೆಸರನ್ನಿಡಲು ಆಗ್ರಹ
ಟೋಕನ್ ವ್ಯವಸ್ಥೆ ರದ್ದುಗೊಂಡ ಬಳಿಕ ಬೇರೆ ಊರುಗಳಿಂದ ಬರುವವರು, ತುರ್ತಾಗಿ ಸಂಚಾರ ನಡೆಸಲು ಮೆಟ್ರೋ ಏರುವವರು ಸೇರಿದಂತೆ ಹಲವಾರು ಜನರಿಗೆ ತೊಂದರೆ ಉಂಟಾಗಿತ್ತು. ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋದಲ್ಲಿ ಮತ್ತೆ ಟೋಕನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ಪ್ರಯಾಣಿಕರ ಸಂಖ್ಯೆ ಕುಸಿತ
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಮೆಟ್ರೋ ಸೇವೆ ಪುನಃ ಆರಂಭವಾಯಿತು. ಆಗ ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಲು ಅನುಮತಿ ನೀಡಲಾಯಿತು. ಪ್ರತಿದಿನ ಮೆಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ೫೦ ಸಾವಿರದಿಂದ ಆರಂಭವಾಗಿ ಫೆಬ್ರವರಿ ಮತ್ತು ಮಾರ್ಚ್ ವೇಳೆಗೆ ೧.೫ ಲಕ್ಷಕ್ಕೆ ಮುಟ್ಟಿತು. ಆದರೆ ಕೋವಿಡ್ ಪರಿಸ್ಥಿತಿಗೂ ಮೊದಲು ಪ್ರತಿದಿನ ೪.೫ ಲಕ್ಷ ಜನರು ಪ್ರತಿದಿನ ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದರು.