ಅಪ್ಪಂದಿರ ದಿನವನ್ನು ವಿಶೇಷವಾಗಿ ಸಂಭ್ರಿಸಿದ ಗೂಗಲ್

Share

ಇಂದು ಅಪ್ಪಂದಿರ ದಿನಾಚರಣೆ ಈ ಸಂದರ್ಭದಲ್ಲಿ ಗೂಬಲ್ ಇದನ್ನು ವಿಶೇಷವಾಗಿ ಸಂಭ್ರಮಿಸಿದೆ. ಬಣ್ಣ ಬಣ್ಣದ ಅಲಂಕಾರದ ಜತೆ ಡೂಡಲ್ ಮೂಲಕ ಅಪ್ಪಂದಿರ ದಿನದ ಶುಭಾಶಯ ತಿಳಿಸಿದೆ.
ಡೂಡಲ್‌ನೊಂದಿಗೆ ವಿಶೇಷವಾಗಿ ‘ಅಪ್ಪಂದಿರ ದಿನದ ಶುಭಾಶಯಗಳು’! ಎಂದು ಸಂದೇಶ ಸಾರುವ ಮೂಲಕ ಗೂಗಲ್ ಶುಭಕೋರಿದೆ. ಅನಿಮೇಟೆಡ್? ಡೂಡಲ್ ರಚಿಸುವ ಮೂಲಕ ಗೂಗಲ್ ಶುಭಾಶಯ ತಿಳಿಸಿದೆ
ಕೊರೊನಾ ವೈರಸ್ ಹಾವಳಿಯಿಂದಾಗಿ ಕಳೆದ ವರ್ಷದಂತೆಯೇ ಈ ವರ್ಷವೂ ಕೂಡಾ ಹೆಚ್ಚು ವಿಜೃಂಭಣೆಯಿಂದ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿಲ್ಲ. ಹೆಚ್ಚಿನ ಜನರು ಗ್ರೀಟಿಂಗ್ ಕೊಡುವ ಮೂಲಕ ತನ್ನ ಪ್ರೀತಿಯನ್ನು ಅಪ್ಪಂದಿರ ಬಳಿ ಹಂಚಿಕೊಂಡಿದ್ದಾರೆ. ಕೇಕ್ ತಯಾರಿಸಿ ಅಪ್ಪನಿಗೆ ಸಿಹಿ ತಿನ್ನಿಸುವ ಮೂಲಕ ಈ ದಿನವನ್ನು ಆಚರಿಸುತ್ತಿದ್ದಾರೆ. ಅಪ್ಪನೊಂದಿಗೆ ಈ ದಿನವನ್ನು ಸಂತೋಷದಿಂದ ಕಳೆಯಲು ನಿರ್ಧರಿಸಿದ್ದಾರೆ
ಇಷ್ಟು ವರ್ಷ ನಮ್ಮನ್ನು ಸಾಕಿ-ಸಲುಹಿ, ಜೀವನದ ಕಷ್ಟ ನೋವುಗಳನ್ನು ಎದುರಿಸುವ ಶಕ್ತಿ ಕೊಟ್ಟು, ಬಿದ್ದಾಗ ಕಣ್ಣೊರಿಸಿ ಧೈರ್ಯ ತುಂಬಿ, ಗೆದ್ದಾಗ ಬೆನ್ನಿನ ಮೇಲೆ ಹೊತ್ತು ಮಗನ ಸಾಧನೆಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಅಪ್ಪನಿಗೆ ಇಂದು ಧನ್ಯವಾದ ಹೇಳಲೇ ಬೇಕು. ಈ ದಿನವನ್ನು ಅಪ್ಪನಿಗಾಗಿ ಮೀಸಲಿಡಲೇಬೇಕು.

Girl in a jacket
error: Content is protected !!