ಡಿಸೆಂಬರ್‌ವರೆಗೂ ಜಿಪಂ,ತಾಪಂ ಚುನಾವಣೆ ಇಲ್ಲ-ಈಶ್ವರಪ್ಪ

Share

ದಾವಣಗೆರೆ,ಜೂ,೧೯: ಕೊನಾನಾ ಆತಂಕದ ಹಿನ್ನೆಲಯಲ್ಲಿ ಡಿಸೆಂಬರ್ ವರೆಗೂ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ನಡೆಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಸೋಮವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು
ಟೆಂಡರ್ ಆರೋಪ ಮುಗಿದು ಹೋಗಿರೋದು. ಇಲಾಖೆಯ ಕಾರ್ಯದರ್ಶಿಗಳು, ಮುಖ್ಯಮಂತ್ರಿ ಸ್ಪಷ್ಟನೆ ನೀಡಿಯಾಗಿದೆ. ಮತ್ತೆ ಕೇಳಬೇಡಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
.ಎಲ್ಲ ಬಡವರಿಗೆ ಉಚಿತ ಪಡಿತರ, ಎಲ್ಲರಿಗೂ ಉಚಿತ ಲಸಿಕೆ ನೀಡುವ ಪ್ರಧಾನಿ ಮೋದಿ ಅವರ ಹೆಜ್ಜೆಯನ್ನು ಸ್ವಾಗತಿಸಿದ್ದೇವೆ. ಅದೇ ರೀತಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾಕ್ಕೆ ಬಲಿಯಾದವರಿಗೆ ೧ ಲಕ್ಷ ಘೋಷಣೆ ಮಾಡಿರುವುದು ದೇಶದಲ್ಲಿ ಮಾದರಿಯಾದುದು. ಅದಕ್ಕೂ ಅಭಿನಂದನೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

Girl in a jacket
error: Content is protected !!