ಹಕ್ಕು ಪತ್ರಕ್ಕಾಗಿ ನಿಲ್ಲದ ಹೋರಾಟ

Share

ರಾಮನಗರ ಜೂ 19: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಈರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಅನ್ ಲಾಕ್ ನಂತರ  ಧರಣಿ ಮತ್ತೆ ಮುಂದುವರೆದಿದೆ.

2006 ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಸುಮಾರು ಎಂಟು ವರ್ಷಗಳಿಂದ ಅರಣ್ಯ ಭೂಮಿ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಾ ಬಂದಿರುವ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಈರುಳಿಗ ಸಮಾಜದ 24 ಕುಟುಂಬಗಳಿಗೆ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಒಕ್ಕಲೆಬ್ಬಿಸಿದ ಜಮೀನು ನೀಡದೆ ಅರಣ್ಯ ಇಲಾಖೆ ಕಾನೂನು ಗಾಳಿಗೆ ತೂರಿ ನಮಗೆ ಅನ್ಯಾಯ ಮಾಡುತ್ತಿದೆ.
ನ್ಯಾಯಯುತವಾಗಿ ಸಲ್ಲಬೇಕಿರುವ ಹಕ್ಕುಪತ್ರ ಅರಣ್ಯ ಇಲಾಖೆಯ ದ್ವಂದ್ವ ನಿಲುವಿನಿಂದ ದಕ್ಕುತ್ತಿಲ್ಲ ಹಲವಾರು ಭಾರಿ ಪ್ರತಿಭಟನೆ ನಡೆಸಿದರೂ ನಮಗೆ ಪದೇ ಪದೇ ಅನ್ಯಾಯವಾಗುತ್ತಲೇ ಇದೆ ಹಕ್ಕುಪತ್ರ ನೀಡುವವರೆಗೂ ನಾವು ಅರಣ್ಯಬಿಟ್ಟು ಕದಲುವುದಿಲ್ಲ ಇದು ನಮ್ಮ ಕೊನೆ ಹೋರಾಟವಾಗಿದ್ದು ಹಕ್ಕುಪತ್ರ ನಮ್ಮ ಕೈಗೆ ಸಿಗುವವರೆಗೂ ಅರಣ್ಯಬಿಟ್ಟು ಕದಲುವುದಿಲ್ಲ ಎಂದು ಮಕ್ಕಳು ಸಂಸಾರ ಸಮೇತ ಸ್ಥಳದಲ್ಲೇ ಅಡುಗೆ ಮಾಡಿ ಕಳೆದ ಮೂರು ತಿಂಗಳಿಂದ ಅರಣ್ಯದಲ್ಲೇ ಟೆಂಟ್ ಹಾಕಿ ಪ್ರತಿಭಟನೆ ಕೈಗೊಂಡಿದ್ದರು.
ಕೋವಿಡ್ ಎರಡನೇ ಅಲೆ ಹೆಚ್ಚಿದ ಪರಿಣಾಮ ಸರ್ಕಾರ ಲಾಕ್‍ಡೌನ್ ಘೋಷಿಸಿದ ಪರಿಣಾಮ ಸೊಂಕು ಹರಡುವ ಭೀತಿಯಿಂದ ಜನರ ಜೀವದ ದೃಷ್ಟಿಯಿಂದ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿತ್ತು ಆದರೆ ಕರೋನಾ ಅಲೆ ಕಡಿಮೆಯಾದರೂ ಅಧಿಕಾರಿಗಳು ಮಾತ್ರ ನಮ್ಮ ಮನವಿ ಪರಿಗಣಿಸದಂತೆ ಕಾಣುತ್ತಿಲ್ಲ 115 ದಿನ ಪ್ರತಿಭಟನೆ ನಡೆಸಿ ಪ್ರತಿದಿನ ಕಛೇರಿ ಅಲೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಈ ಕಾರಣದಿಂದ ಮತ್ತೆ ಅರಣ್ಯದಲ್ಲೇ ಇಂದಿನಿಂದ ಕೋವಿಡ್ ನಿಯಮ ಪಾಲಿಸಿ ಪ್ರತಿಭಟನೆ ಮುಂದುವರೆಸುತ್ತೇವೆ ಎನ್ನುತ್ತಾರೆ ಪ್ರತಿಭಟನಾ ನಿರತೆ ಲಕ್ಷ್ಮಮ್ಮ.
ಪ್ರತಿಭಟನೆಯಲ್ಲಿ ಜೆ.ಎನ್. ಶಿವರಾಜು, ದೇವಯ್ಯ, ನವಣಯ್ಯ, ಮಹದೇವಮ್ಮ, ಶಿವಮಾದಮ್ಮ, ಈರಮ್ಮ, ಮಾದಮ್ಮ ಮುಂತಾದವರಿದ್ದರು.

Girl in a jacket
error: Content is protected !!