ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’

Share

 

ತುರುವನೂರು ಮಂಜುನಾಥ

ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’

ಈ ಬದುಕಿನಲ್ಲಿ ಮನುಷ್ಯ ತನಿಗರಿವಿಲ್ಲದೆ ಮಾನವೀಯತೆಯನ್ನು ಕಳೆದುಕೊಂಡು ಸಂಬಂಧಗಳ ಬಂಧಿಯೂ ಆಗದೆ,ಬೆಂಕಿಯಂತೆ ಬೆಸೆಯುವ ‘ಮನಸುಮನಗಳ ಅನಿಷ್ಟತೆತೆಗೆ ಸಾಗುವ ಬುದ್ದಿಗಳಿಗೆ ಬಂಧಿಯಾದಾಗಲೇ ಮನುಷ್ಯತ್ವವನ್ನು ಸುಟ್ಟು ಅನಿಷ್ಟತೆತೆಯನ್ನು ಹೆಗಲಮೇಲೇರಿಕೊಂಡು ಸಾಗುತ್ತಿದ್ದಾನೆ.
ಹೌದು ಇಂಥ ಬಿರುಸಿನಿಂದ ಸಾಗುವ ತಾಂತ್ರಿಕ ಯುಗದಲ್ಲಿ,ತಂತ್ರಗರಿಕೆಯಲ್ಲೇ ತನ್ನೆಲ್ಲ ಮಾನವ ಸಂಬಂಧಗಳನ್ನು ಬೆಸದು ಯಾಂತ್ರಿಕವಾಗಿ ಸಾಗುತ್ತಿದಾನೆ. ಹಾಗಾಗಿಯೇ ಆಚೀಚಿನ ಸಂಬಂಧ ಮನುಸಗಳ ಮಾನವೀಯತೆಗಳಿಗೆ ಬೆಲೆಯಿಲ್ಲದೆ ಸೊಗಲಾಡಿ ಜೀವಗಳು ಜಗಜ್ಜಾಹಿರವಾಗಿ ಬಿಂಬಿತವಾಗುತ್ತಿವೆ.


ಇಂತದ್ದೊಂದು ‘ಅನಾಮಿಕ ಜೀವಗಳ ಮಧ್ಯೆ ಮನುಷ್ಯ ಮನುಷ್ಯತ್ವದೊಂದಿಗೆ ಬದುಕಿತ್ತಿದಾನಯೇ ನರೆ-ಹೊರೆಯವರನ್ನು ಬಡ ಜೀವಗಳ ಬಗ್ಗೆ ಕಾಣುವ ನೋಟಗಳನ್ನು ತನ್ನ ಅಂತರಾಳದಲ್ಲಿ ಕಂಡು ತನ್ನ ತುಮುಲಗಳನ್ನು ಲೇಖಕ ಮೊಗ್ಗಳ್ಳಿ ಗಣೇಶ್ ತನ್ನ ಆಂತರಿಕ ಮನಸ್ಸನಿ ಒಳನೋಟಗಳನ್ನು ಕವಿತೆಯನ್ನಾಗಿಸಿದ್ದಾರೆ.
ಕತ್ತಲು ಬದುಕಿನ ಅಮಾಯಕ ಜೀವಗಳ ಬಗ್ಗೆ ಈಗಾಗಲೇ ೮೦-೯೦ರ ದಶಕದಲ್ಲಿ ಬಂಡಾಯ-ದಲಿತ ಸಾಹಿತ್ಯದ ಮೂಲಕ ಕವಿಗಳು ಕ್ರಾಂತಿಯನ್ನೇ ಮಾಡಿದ್ದವು ಆ ಸದ್ದು ಈಗ ಮರೆಯಾದರೂ, ಅದೇ ಜಾಡಿನ ಮಾನವೀಯತೆಗಳ ಸಾಹಿತ್ಯವಂತೂ ಇನ್ನೂ ತನ್ಮಯತೆಯನ್ನು ಕಳೆದುಕೊಂಡಿಲ್ಲ.
ಅಂದರೆ ಇನ್ನೂ ಆ ಸಾಲಿನ ಸಾಹಿತಿಗಳು ತಮ್ಮ ಕೃಷಿಯಲ್ಲಿ ಧ್ವನಿಸುತ್ತಿದ್ದಾರೆ ಆದರೆ ಲಯ ಸ್ವಲ್ಪ ಬದಲಾಗಿದೆ, ಯುಗಧರ್ಮವೆ ಹಾಗೆ ಕಲಾನುಕಾಲಕ್ಕೆ ಬದಲಾಗುತ್ತಾ ಆಯಾ ಸಾಮಾಜಿಕ ಬದುಕಿನ ಮುಖದೊಂದಿಗೆ ಛಾಪು ಮೂಡಿಸಬೇಕಾಗುತ್ತದೆ.ಅದೇ ಸಾಮಾಜಿಕ ಬದುಕಿನ ಮಾನವೀಯತೆ, ಮನುಷ್ಯ ಸಂಬಂಧಗಳು .ಅಂತ ಬದುಕಿನ ಮಾನವ ಸಂಬಂಧಗಳ ಮಾನವೀಯ ಮುಖಗಳು ಇಲ್ಲಿ ಬಿಂಬಿಸಿದ್ದಾರೆ ಮೊಗಳ್ಳಿ ಗಣೇಶ್ ಅವರು.
ಇಂದಿನ ಕನ್ನಡ ಕಾವ್ಯ ಲೋಕದಲ್ಲಿ ಬೇರೊಂದು ದಾರಿಯ ಮೂಲಕ ತನ್ನ ಲಯವನ್ನು ಸ್ಪರ್ಷಿಸಿದ್ದಾರೆ, ಹಾಗೆಯೇ ಇಲ್ಲಿನ ಕವನಗಳು ನಿಜಕ್ಕೂ ಕಾವ್ಯಸಕ್ತರಿಗೆ ಹೊಸತನವೊಂದು ಮೂಡದೇ ಇರಲಾರದು
ಮೊಗಳ್ಳಿ ಗಣೇಶ್ ಅವರ ಕಾವ್ಯ ಗುಣದ ವಿಶೇಷವೇ ಹಾಗೆ ಬದುಕನ್ನು ಒಟ್ಟಾಗಿಸಿ ಬಿಡಾರದಲ್ಲಿ ಕೂಡಿಸಿ ಅದನ್ನು ಆರೈಕೆ ಮಾಡಲು ಮಾನವೀಯ ಸಂಬಂಧಗಳ ಸೂಕ್ಷತೆಯನ್ನು ಸಾಕಾರಗೊಳಿಸುತ್ತಾರೆ
ಯಾಕೆ ಕಟದಿರುವೆ
ಇಂಥ ಶಿಲ್ಪದ ಮಾಯಾಮುಖ
ಯಾಕೆ ಕೆತ್ತಿರುವೆ
ಇಂಥ ಕಲ್ಲಿನ ಭೀಭತ್ಸಮುಖ
‘ಪ್ರತಿರೂಪ’ ಎಂಬ ಕವನದಲ್ಲಿ ಇಂಥ ಸಮರ್ಥ ಸಾಲುಗಳನ್ನು ಎಣೆಯುತ್ತಾ ಹೋಗುತ್ತಾರೆ ಪ್ರಕೃತಿಗೆ ತನ್ನ ಪ್ರಶ್ನೆಯನ್ನು ಹಾಕುತ್ತಾ ಮುನಷ್ಯ ಮಾನವೀಯ ಸಂಬಂಧದ ನೆಲೆಗಳನ್ನು ಸೃಷ್ಟಿಸುವ ಕುರಿತು ಮಾನವನನ್ನು ಯಾಕೆ ಹುಟ್ಟಿಸಿದ್ದಿಯಾ? ಮೇಲು-ಕೀಳು ಎಂಬ ಭಾವಗಳ ತೆರದು ಅಹಂಭಾವಗಳಿಗೆ ಏಕೆ ಒತ್ತು ನೀಡಿದೆ ಬದುಕಿನ ಈ ಜೀವಗಳ ಜೀತ್ವನೀತಿ ನೆಡುಗೆ ಅಡ್ಡಿಯಾದೆ-ಎಂಬ ಭಾವಗಳನ್ನು ಅಭಿವ್ಯಕ್ತಿಸುತ್ತಾರೆ, ಇದೆ ಕವನವನ್ನು ಮುಂದುವರದಸುತ್ತಾ
ಯಾಕೆ ಮೂಡಿಸಬೇಕು
ತನ್ನ ರೂಪವ ತಾನೇ ಕಂಡು ಕಂಡೂ
ವಿಶ್ವಾಸವಿಲ್ಲವೇನೂ ಮೃಗದ ನೆನಪಲ್ಲಿ
ಮನುಷ್ಯ ಮನುಷ್ಯನಲ್ಲವೆಂದು’
ಅದೇ ಪ್ರಕೃತಿಯನ್ನು ಮತ್ತೇ ಪ್ರಶ್ನಿಸುತ್ತಾರೆ, ಮಾನವೀಯ ಸಂಬಂಧಗಳಲ್ಲಿ ವಿಶ್ವಾಸ ಮತ್ತು ಮಾನವೀಯ ನೆಲೆಗಳನ್ನು ಮೃದ ರೂಪದಲ್ಲಿ ಎಂಬ ಈ ಮಾತು ನಿಜಕ್ಕೂ ಕೆಳಸ್ತರದ ಬದುಕಿನ ಮಾನವೀಯ ಅಂತಃಕರಣವನ್ನು ಕೀಳರಿಮೆಯನ್ನು ತೊರೆದು ಹಾಕುವ ಭಾವಗಳು ಇಲ್ಲಿ ನೋವಾಗಿ ಪರಿಣಮಿಸುತ್ತವೆ .ಅಂತ ಸ್ತರಗಳ ಹಾದಿಯ್ನು ಪ್ರಶ್ನಸುತ್ತಾ ಆ ಬದುಕಿಗೆ ಬೆಳಕು ನೀಡುವ ಮಾನವೀಯ ನೆಲೆಗಳತ್ತ ಸಾಗುತ್ತದೆ, ಹಾಗಾಗಿ ಇಲ್ಲಿಯ ಈ ಕವಿತೆ ಸಾಲುಗಳ ಭಾವನಾತ್ಮಕ ನುಡಿಗಳು ಎಲ್ಲರನ್ನು ಎಚ್ಚರಿಸುತ್ತವೆ:


ಮೊಗಳ್ಳಿ ಗಣೇಶ ಅವರ ಕಾವ್ಯದ ವಸ್ತುಗಳ ನಿಜಕ್ಕೂ ಬದುಕಿನ ನೆಲೆ ಹುಡುಕುವ ಆಂತರಿಕ ಮಾನವತ್ವದ ಮಾನವೀಯ ಮೌಲ್ಯಗಳೇ ಆದೇ ಹಾದಿಯಲ್ಲಿ ಸಾಗಿರುವ ಅವರು ‘ಕಲ್ಲು-ಮುಳ್ಳು,ಕರಿ ಜೀವಗಳ ಕಪ್ಪ ಛಾಯೆಗಳ ಚಂದ್ರಮನ ಬೆಳದಿಂಗಳ ಗಾಳಿ ತಾಗಿಸುವ ಸಾಂಗ್ವಯೆ ಕವನ ಸಾಲುಗಳು ಮಾವನೀಯ ನೆರಳದಲ್ಲಿ ಅರಳುತ್ತವೆ.
ಮೊಗಳ್ಳಿ ಗಣೇಶ್ ಅವರು ಅಗಾದವಾಗಿ ಪ್ರೀತಿಸುವುದು ಹಳ್ಳಿ ಬದುಕನ್ನು ಅಲ್ಲಿನ ಕೆಳಸ್ತರದ ಬದುಕನ್ನು ಹಾಗೂ ಅಲ್ಲಿನ ಜನಪದ ಸತ್ವವನ್ನು ಆ ದೇಸಿ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವದೇ ಅವರ ಆಶಯ ಹಾಗಾಗಿಯೇ ಅವರ ಸಾಹಿತ್ಯದಲ್ಲಿ ಬಹುತೇಕ ಹಳ್ಳಿಯ ಅಸ್ಪ್ರಶ್ಯತೆ ಜನಾಂಗದ ಕುರಿತು ಅಲ್ಲಿಯ ನೋವುಗಳು ಅವರಿಗಾದ ಅನ್ಯಾಯ, ಅದರ ವಿರುದ್ಧ ಬಂಡೇಳುತ್ತಾರೆ ಸಹಜ,ಸಹನೆ ಸಂಯಮದ ಸಾಮರ್ಥ್ಯದ ಸಮಾನತೆಗೆ ಸೌಜನ್ಯವಾಗಿಯೇ ಉತ್ತರವನ್ನು ಹುಡುಕುತ್ತಾ ತೆರಳುತ್ತಾರೆ ಇದು ಅವರ ಸಾಹಿತ್ಯ ಶೋಧನೆ.
ಮೊಗಳ್ಳಿ ಗಣೇಶ್ ಕಳೆದ ೨ ದಶಕಗಳಿಂದ ಇದೇ ಹುಡುಕಾಟದ ಶೋಧನೆಯಲಿ ಈಗ ಮಾನವೀಯ ನೆಲೆ ಸಂಬಂಧಗಳ ಪರಿಶೋಧನೆಗೂ ತೊಡಗಿದ್ದಾರೆ. ಅವರ ೨೦ ವರ್ಷದ ಚಿಂತನೆ ಈಗ ಮತ್ತಷ್ಟು ಪ್ರಖರಗೊಂಡಿದೆ ಆ ಮೂಲಕ ಮಾನವ ಸಂಬಂಧಗಳ ಬಗ್ಗೆ ಶಕ್ತಿಗೊಳಿಸುತ್ತಾರೆ.
ಅದೇ ದಾಟಿಯಲ್ಲಿ ದೇವಸ್ಮಶಾನ ಕೂಡ ಕಾವ್ಯಲೋಕದ ವಿಶಿಷ್ಟತೆಯನ್ನು ಪಡೆದು ಕೊಂಡಿದೆ. ಪದ್ಯ ಗದ್ಯಗಳೆರಡರಲ್ಲೂಈ ಕಾಲದ ತನ್ಮತೆಯನ್ನು ಅನನ್ಯವಾಗಿಸಿದೆ.
‘ದೇವಸ್ಮಶಾನ ಕವನದ ಆಶಯ ಹೊಸ ಕಾವ್ಯದ ಮೀಮಾಂಸೆಯಂತಿದೆ. ಹಂಪಿ ಗತಕಾಲದ ವೈಭವವನ್ನು ಅಂದಿನ ಸಾಮ್ರಾಜ್ಯ ನಾಶದ ಹೆಣಗಳ ರಾಶಿಯ ಸ್ಮಶಾನವನ್ನು ಇಂದಿನ ಸಾಮಾಜಿಕ ಬದುಕಿಗೆ ತಳುಕು ಹಾಕಿದ್ದಾರೆ. ಪ್ರಸ್ತುತ ರಾಜಕೀಯ ಸಾಮಾಜಿಕ ಮತ್ತು ಜನತಂತ್ರದ ವ್ಯವಸ್ಥೆಯ ಬಗ್ಗೆ ಪರಾಮರ್ಶಿಸಿದ್ದಾರೆ. ಕೆಳಸ್ತರದ ಬದುಕಿನ ಹಾದಿಗೆ ಮುಳ್ಳಾಗಿಸುವ ಆ ವ್ಯವಸ್ಥೆಯ ಅನಾವರಣವನ್ನು ಪ್ರಸ್ತುತ ಅನಿಷ್ಟತೆಯ ಸೆರಗಿಗೆ ಕುಸುರಿ ಹಾಕಿ ಸಮೀಕರಿಸಿದ್ದಾರೆ ಹಾಗಾಗಿಈ ವಿಶಿಷ್ಟ ಗದ್ಯ ಕಾವ್ಯಲೋಕದ ಹೊಸತನಕ್ಕೆ ನಾಂದಿ ಹಾಡುತ್ತದೆ.
ಗತ ಇತಿಹಾಸದ ದಿಬ್ಬದಲ್ಲಿ ಮಹಾನವಮಿಯರೂಪದಲ್ಲಿ
ಈಗಲೂ ರಕ್ತದ ಕಲೆಗಳಿವೆ ನೆತ್ತರ ಹೀರುವ ಪೀಪಾಸಿಗಳ ಸಂಚುಗಳಿವೆ
ಕಾರಿರುಳ ನಿಧಿಗಳಲ್ಲ ವಾಮಾಚಾರದ ನಿಗೂಢ ಹೆಜ್ಜೆಗಳಿವೆ
ಕೋವಿಕಣ್ಣಿನ ಮದ್ದು ಗುಂಟಿನ ಭಯೋತ್ಪಾದಕತಾಣಗಳಿವೆ’
ಗತಕಾಲದ ಇತಿಹಾಸದಲ್ಲಿ ಅಂದರೆ ರಾಜಕಾಲದಲ್ಲಿ ಇದ್ದ ಎಲ್ಲಾ ಈ ರೀತಿಯ ರಾಜತಾಂತ್ರಿಕ ಬದುಕು ಅವರ ಸಂಚು ಕಳ್ಳ ಕಣ್ಣಿನ ನೆರಳುಗಳು ಈಗಲೂ ಇವೆ ಅದೇ ಹಾದಿಯಲ್ಲಿ ಈ ಮಾನವನು ಸಾಗುತ್ತಿದ್ದಾನೆ ಇದೆಲ್ಲದ್ದಕೂ ಇತಿಹಾಸವೇ ಮೂಲ ರೂಪ ಅವರು ಹಾಕಿಕೊಟ್ಟ ಹೆಜ್ಜೆ ಸದ್ದು ಮಾತ್ರ ನಿಂತಿಲ್ಲ ಎಂಬ ಈ ಸಾಲುಗಳು ಇತಿಹಾಸದಲ್ಲಿ ಆಗಿ ಹೋದ ಮೇಲ್ವರ್ಗದ ಆಂತರ್ಯದ ತಂತ್ರವನ್ನು ಇಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಇಲ್ಲಿ ‘ಹಂಪಿ’ ಕೇವಲ ಒಂದು ಸಂಕೇತ ಮಾತ್ರ ಇತಿಹಾಸದ ಈ ಸಂಕೇತದ ಮೂಲಕ ರಾಜರು ಹಾಕಿದ ಬುನಾದಿ ಮೇಲಸ್ತರದವರು ಹಾಕಿದ ಬಲವಾದ ಜೀವದ ಬದುಕಿನ ಮೇಲು-ಕೀಳು ಈ ಎಲ್ಲವೂ ಇಂದು ಮಾನವತೀಯತೆಯನ್ನು ಕಳೆದುಕೊಂಡಿದೆ ಈ ಹಾದಿ ಇನ್ನೂ ಸವೆದಿಲ್ಲ ಆ ಬದುಕಿನ ನೋಟ ಇನ್ನೂ ಕೀರ್ತಿಸುತ್ತಿದೆ, ಆ ಮನುಷ್ಯತ್ವದ ಬೇರುಗಳ ಸಡಿಲಗೊಂಡರು ಪೂರ್ತಿಯಾಗಿ ಕಳಚಿಲ್ಲ ಮಾನವೀಯ ಮೌಲ್ಯಗಳ ಹೊಸತನದ ಹಾಗೆಯೂ ಮೀರುತ್ತದೆ ಹಾಗಾಗಿ ಬದುಕಿನ ಸಮೀಕರಣದಲ್ಲಿ ಜೀವತತ್ವಗಳ ಉದ್ದಾರಕ್ಕೆ ಹೊಸ ಮಾನವೀಯ ಸಿದ್ದಾಂತಗಳ ಸದ್ದು ಮಾಡಬೇಕು ಎಂಬ ಆಶಯ ಲೇಖಕರದಾಗಿದರೂ ಎಲ್ಲೋ ಒಂದು ಕಡೆ ಆ-ಈ ಬದುಕಿನಲ್ಲಾದ ಆ ಕರಾಳ ನೆನಪುಗಳನ್ನು ಇಲ್ಲಿ ಸ್ಮರಿಸುತ್ತಾರೆ ಹಾಗಯೇ ಈ ವರ್ತಮಾನದಲ್ಲಿ ಕತ್ತಲ ಬದುಕಿನ ಜೀವ ಜಂತುಗಳ ಉಂಡ ಅಸಿವೆಯನ್ನು ಸಾರುತ್ತಾ ಹೊಸ ಬದುಕು ಮಾವನೀತೆಗಳ ಅನಾವರಣಗೋಳಿಸಲು ಮುಂದಾಗಿದ್ದಾರೆ.

ಈ ಇಡೀ ಕವನದಲ್ಲಿ ಮಾನವೀಯತೆಯೆ ಎಲ್ಲಾ ಆಯಾಮಗಳನ್ನು ಸಮಗ್ರ ಬಿಂಬಿಸುತ್ತಾ ಕೊನೆಯ ಪದ್ಯದಲ್ಲಿ ಜಗದ ನಿಯಮಕ್ಕೆ ಬಿಟ್ಟಿದ್ದಾರೆ.
ಸೃಷ್ಠಿ ಸಮಯದಲ್ಲಿ ಚಿಗುರುವನವ ಇತಿಹಾಸದ ಶಕೆ
ಭವ್ಯ ಮಾವನೀತೆಯ ದಿವ್ಯ ಆಕಾಶದ ದೇವ
ಹರಿಯುವದೇ ತುಂಗೆ -ಭದ್ರೆ ಸಾಗುವುದೇ ಜಗದ
ಅನಂತತೆಯಲ್ಲಿ ಎಲ್ಲರೆಲ್ಲರ ನಿರಂಕುಶ ಮಾನಷಯಾತ್ರೆ
ಇತಿಹಾಸದಲ್ಲಿ ಮಾನವೀಯ ಅನಿಷ್ಟಕೊಂಡಿಯನು ಸಾಗರದಲ್ಲಿ ಬಿಟ್ಟು ಆಧುನಿಕ ಬದುಕಿನ ಮಾನವೀಯ ಆರ್ಥದ ಜೀವಕ್ಕೆ ನಾವೀನ್ಯತೆ ತರುತ್ತದೆಯೇ ಸಮಾಜ ಎಂಬ ಕಟ್ಟಳೆಯ ಕೂದಲೆಳೆಯ ಗಾಂಭೀರ್ಯತೆಯನ್ನು ಕಟ್ಟುತ್ತಾರೆ. ಈ ಅದ್ಬುತ ಸಾಲು ಕಾವ್ಯದಲ್ಲಿ ಬಳಸಿರುವ ಪದಪುಂಜ ನಿಜಕ್ಕೂ ಕನ್ನಡ ಕಾವ್ಯದಲ್ಲಿ ಹೊಸತನ ಮೂಡಿಸುವ ಹೊಸ ಕಾವ್ಯ ಲೋಕದ ಒಂದು ತಾತ್ವಿಕ ನೆಲೆಯ ಅನಾವರಣ.
ಹೀಗೆ ಈ ಕವನ ಸಂಕಲನದಲ್ಲಿ ದೇಶಿಯತೆಯ ವಾಸನೆಯನೊಂದಿಗೆ ವಾಸ್ತವ ಬದುಕಿನ ನೆಲೆಗಟ್ಟಿನಲ್ಲಿ ಮನುಷ್ಯರ ಅಂತರಾಳದ ಭಾವಗಳಿಗೆ ಕೊಂಡಿಯಾಗಿ ಮಾವನೀಯ ನೆಲೆಗಳನ್ನು ಹುಡುಕಾಡುತ್ತಿದ್ದಾರೆ.
ವೈವಿವಿದ್ಯಮಯದಲ್ಲಿ ತನ್ನ ಧ್ವನಿಯಲ್ಲಿ ಕಟ್ಟಿರುವ ಈ ಆಂತರ್ಯದ ಕವನ ಸಾಲುಗಳು ಕಾವ್ಯಪ್ರಿಯರಿಗೆ ಹಿತವನ್ನುಂಟು ಮಾಡುತ್ತವೆ ಅಲ್ಲದೆ ಚಿಂತನೆಗೆ ಪ್ರೇರಣೆ ನೀಡುತ್ತವೆ ಅದೇ ಅಲ್ಲವೇ ಕವಿಯ ಆಶಯ

Girl in a jacket
error: Content is protected !!