ಮೈಸೂರು,ಜೂ.೧೨: ಮೈಸೂರು ಜಿಲ್ಲಾಧಿಕಾರಿಯಾಗಿ ಮರು ನೇಮಕ ಮಾಡಬೇಕು ಎನ್ನುವ ಆನ್ಲೈನ್ ಸಹಿಸಂಗ್ರಹಣೆ ನಡೆಯುತ್ತಿದೆ.
ಹೌದು ಚೇಂಜ್ ಆರ್ಗ್ ಎಂಬ ಈ ಆನ್ಲೈನ್ ಬ್ರಿಂಗ್ ಬ್ಯಾಂಕ್ ರೋಹಿಣಿ ಎಂಬ ಸಹಿ ಸಂಗ್ರಹ ಅಭಿಯಾನ ಸಾಮಾಜಿಕ ಜಾಲಗಣಗಳಲಿ ಆರಂಭವಾಗಿದ್ದು ಸರಿ ಸುಮಾರು ೨೭೦೦೦ ಕ್ಕೂ ಹೆಚ್ಚು ಮಂದಿ ಸಹಿ ಮಾಡಿದ್ದಾರೆ.
ರೋಹಿಣಿ ಸಿಂಧೂರಿಯವರು ಖಡಕ್ ಅಧಿಕಾರಿಯಾಗಿದ್ದು, ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಅದಕ್ಕಾಗಿ ಅವರು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಇದೀಗ ಅವರನ್ನು ವರ್ಗಾವಣೆ ಮಾಡಿರುವುದು ಅವರ ಅಭಿಮಾನಿಗಳನ್ನು ಕೆರಳಿಸಿದ್ದು ಸಿಂಧೂರಿ ಅವರನ್ನು ವಾಪಸು ಕರೆ ತರುವ ಪಯತ್ನವನ್ನು ಮಾಡುತ್ತಿದಗದಾರೆ. ಅಭಿಮಾನಿಗಳ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ಕೊಡುವುದೊ ಕಾದುನೋಡಬೇಕು.
ಮೈಸೂರು ಜಿಲ್ಲಾಧಿಕಾರಿಯಾಗಿ ಸಿಂಧೂರಿ ಮರುನೇಮಕಕ್ಕೆ ಸಹಿ ಅಭಿಯಾನ
Share