G.k.hegade,shikarripura
ಶಿಕಾರಿಪುರ,ಜೂ,೦೯:ಕೊ ರೋ ನಾ ಮಹಾಮಾರಿ ಎರಡು ವರ್ಷ ಗಳಿಂದ ಜನರ ಜೀವ .ಜೀವನವನ್ನು ಕಿತ್ತುತಿನ್ನುತಿದೆs ಈ ಸಂದರ್ಭದಲ್ಲೂ ಕಂದಾಯ ಹಾಗೂ ಕಾಲಿ ನಿವೇಶನದ ತೆರಿಗೆಗಳು ಎರಡು ಪಟ್ಟು ಆಗಿದ್ದು ಸಾರ್ವಜನಿಕರು ಪುರಸಭೆ ಶಾಪ ಹಾಕುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗಗಳು ನಡೆಯುತ್ತಿದೆ.
ಸರ್ಕಾರ ತೆರಿಗೆ ಜಾಸ್ತಿ ಮಾಡುವುದು ಅನಿವಾರ್ಯ ಆದರೆ ಈ ಕೆಟ್ಟ ಪರಿಸ್ಥಿಯಲ್ಲಿ ಮಾಡುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರ ವಾದ .ಕೆಲವು ಜನರಿಗೆ ಕಂದಾಯ ಜಾಸ್ತಿ ಯಾಗಿರುವುದು ತಿಳಿದೇ ಇಲ್ಲ ಕಟ್ಟಲು ಹೋದವರಿಗೆ ಮಾತ್ರ ವಿಚಾರ ತಿಳಿದಿದೆ .ಕಾಲಿ ಜಾಗಕ್ಕೆ ನಲವತ್ತು ರೂಪಾಯಿ ಇದ್ದದ್ದು ನಾಲ್ಕುನೂರು ಎಂಬತ್ತು ರೂಪಾಯಿಗಳು ಹೀಗೆ ಅವರವರ ತೆರಿಗೆಗಳ ಆದಾರದ ಮೇಲೆ ದುಪಟ್ಟು ಆಗಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸರ್ಕಾರ ಮನಸು ಮಾಡಿ ಏನಾದರೂ ಜನರ ಬಗ್ಗೆ ಕರುಣೆ ತೋರಿ ರಿಯಾತಿ ಮಾಡುವುದು ಈ ಸಂದರ್ಭಕ್ಕೆ ಸೂಕ್ತ ಎನ್ನುವುದು ವಿಚಾರವಂತ ಹಾಗುಕಂದಾಯ ಕಟ್ಟುವವರ ಬೇಡಿಕೆ ಸರ್ಕಾರ ಈ ಕೂಡಲೇ ಪರಿಶೀಲನೆ ಮಾಡಬೇಕು ಅಲ್ಲದೆ ಕೊರೊನಾ ಹತೋಟಿಗೆ ಬಂದಾಗ ಪರಿಸ್ಥಿತಿ ಸುಸ್ಥಿಗೆ ಬಂದಾಗ ತೆರಿಗೆ ಹೆಚ್ಚು ಮಾಡಿದರೂ ಯಾರ ವಿರೋಧವೂ ಇಲ್ಲ ಎನ್ನುವುದು ಹಲವರ ವಾದವಾಗಿದೆ.