ಕೊರೊನಾ ಪ್ಯಾಕೇಜ್:ಮೊದಲ ಹಂತದ ಕಂತಿನ ೭೪೯.೫೫ ಕೋಟಿ ರೂ ಬಿಡುಗಡೆ

Share

ಬೆಂಗಳೂರು ,ಜೂ,೦೫: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ ಘೋಷಣೆ ಮಾಡಿದ್ದ ಆರ್ಥಿಕ ಪ್ಯಾಕೇಜ್‌ನ ಮೊದಲ ಕಂತಿನ ೭೪೯.೫೫ ಕೋಟಿ ರೂಗಳ ಮೊತ್ತದ ಹಣವನ್ನು ಇಂದು ಬಿಡುಗಡೆ ಮಾಡಲಾಗಿದೆ.
ಗೃಹ ಕಚೇರಿ ಕೃಷ್ಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಾಧನವನ್ನು ನೇರವಾಗಿ ಅವರುಗಳ ಬ್ಯಾಂಕ್‌ಖಾತೆಗಳಿಗೆ ಜಮಾ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ , ಖಾತೆಗೆ ಕಟ್ಟಡ ಕಾರ್ಮಿಕರಿಗೆ ತಲಾ ೩ ಸಾವಿರ ರೂ ಹಾಗೂ ಅಸಂಘಟಿತ ಕಾರ್ಮಿಕರಿಗೆ ತಲಾ ೨ ಸಾವಿರ ರೂ ಪರಿಹಾರ ವಿತರಣೆಯಾಗಲಿದೆ. ಕಾರ್ಮಿಕ ಇಲಾಖೆಯು ಇಂದು ೩.೫ ಲಕ್ಷ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ಪರಿಹಾರ ವಿತರಣೆ ಮಾಡಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಎಂ.ಯಡಿಯೂರಪ್ಪ ಅವರು
ನಾವು ಏನು ಪ್ಯಾಕೇಜ್ ಘೋಷಣೆ ಮಾಡಿದ್ದೇವೋ ಅದರಂತೆ ಈಗಾಗಲೇ ಹಣಕಾಸಿನ ವರ್ಗಾವಣೆ ಕೆಲಸ ಆರಂಭ ಆಗಿದೆ.ಇಂದು ವಿವಿಧ ವಲಯಗಳಿಗೆ ೨೪ ಲಕ್ಷ ಕಾರ್ಮಿಕರಿಗೆ ೭೪೯ ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.ಮಾಧ್ಯಮಗಳಲ್ಲಿ ಯಾವಾಗ ಹಣ ಬಿಡುಗಡೆ ಎಂದು ಕೇಳುತ್ತಿದ್ದರು.ಇವತ್ತು ಕಟ್ಟಡ ಕಾರ್ಮಿಕರಿಗೆ ತಲಾ ೩ ಸಾವಿರ ಹಣ ಸೇರಿದಂತೆ ಒಟ್ಟು ೨೫ ಲಕ್ಷ ಕಾರ್ಮಿಕರಿಗೆ ಹಣ ಬಿಡುಗಡೆ ಆಗಿದೆ.
ಇದೇ ರೀತಿ ೪ ಲಕ್ಷ ಜನರಿಗೆ ಇಂದು ೧೦ ಕೋಟಿ ಹಣವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು. ಅಸಂಘಟಿತ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ಆ?ಯಪ್ ಬಿಡುಗಡೆ ಮಾಡಲಾಗಿದೆ ಎಂದರು.ಜೂನ್ ೧೪ ರ ಬಳಿಕ ಲಾಕ್ ಡೌನ್ ಸಡಿಲಿಕೆ ವಿಚಾರವಾಗಿ ಪ್ರತಿಕ್ರಿಯೆಸಿದ ಸಿಎಂ ಯಡಿಯೂರಪ್ಪ ಅವರು ಪಾಸಿಟಿವ್ ದರ ಶೇಕಡಾ ೫ಕ್ಕೆ ಬಂದ ಲಾಕ್ ಡೌನ್ ಸಡಿಲಿಕೆ ಬಗ್ಗೆ ನಿರ್ಧಾರ ಮಾಡುವುದಾಗಿ ಸ್ಪಷ್ಟಪಡಿಸಿದರು.
ಯಾವ ಯಾವ ಜಿಲ್ಲೆ ಗಳಲ್ಲಿ ಶೇಕಡಾ ೫ಕ್ಕೆ ಬರುತ್ತದಯೋ ಅಲ್ಲಿ ಸಡಿಲಿಕೆ ನಿರ್ಧಾರ ಮಾಡುತ್ತೇವೆ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಪುನರುಚ್ಚರಿಸಿದರು.ಲಾಕ್ ಡೌನ್ ಮುಗಿಯುವ ಇನ್ನೂ ಮೂರು ನಾಲ್ಕು ದಿನಗಳು ಇರುವಾಗ ಕುಳಿತು ನಿರ್ಧಾರ ಮಾಡುತ್ತೇವೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಮನವಿ ಮಾಡಿದರು.
ಅವರು ಕೂಡ ಜುಲೈ ನಲ್ಲಿ ಪರೀಕ್ಷೆ ಮಾಡಬೇಕುಎಂದಿದ್ದಾರೆ.ಕೆಲವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲವನ್ನೂ ಗಮನಿಸಿದ್ದೇನೆಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಸಿ.ಎಂ ಮಾಹಿತಿ ನೀಡಿದರು.ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಸಂಬಂಧಿಸಿದಂತೆ ರಾಜ್ಯದಿಂದ ಸುಂಕ ವಿನಾಯ್ತಿಯ ಪ್ರಸ್ತಾಪ ಇಲ್ಲ.ಅಂತಹ ಯಾವುದೇ ವಿಚಾರ ನಮ್ಮ ಮುಂದೆ ಇಲ್ಲ ಸ್ಪಷ್ಟಪಡಿಸಿದರು.

ಮೈಸೂರಲ್ಲಿ ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಮುಖ್ಯ ಕಾರ್ಯದರ್ಶಿಗಳು ಮೈಸೂರಿಗೆ ಹೋಗಿ, ವಿಚಾರಣೆ ಮಾಡಿ ಬಂದಿದ್ದಾರೆ.ಅವರು ಬೆಳಿಗ್ಗೆ ನನಗೂ ವಿಚಾರಣೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆಸಂಜೆ ಈ ಬಗ್ಗೆ ಕುಳಿತು ಸೂಕ್ತ ಕ್ರಮ ಮಾಡುತ್ತೇವೆ ಎಂದು ಹೇಳಿದರು.ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಕಾರ್ಮಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ. ಕಲ್ಪನಾ, ಇ- ಆಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಕಾರ್ಮಿಕ ಆಯುಕ್ತ ಅಕ್ರಮ್ ಪಾಷಾ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Girl in a jacket
error: Content is protected !!