ನವದೆಹಲಿ,ಜೂ, ೦೫: ಸದ್ಯ ದೇಶದಲ್ಲಿ ದಿನ ದಿನ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು ಒಂದು ರೀತಿ ನಿಟ್ಟುಸಿರು ಬಿಟ್ಟಂತಾಗಿದೆ.ಕಳೆದ ೨೪ ಗಂಟೆಯಲ್ಲಿ ೧,೨೦,೫೨೯ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ೩,೩೮೦ ಮಂದಿ ಮೃತಪಟ್ಟಿದ್ದು, ಶುಕ್ರವಾರ ಒಂದೇ ದಿನ ೧,೯೭,೮೯೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಹಾಗೆಯೇ ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ೨,೮೬,೯೪,೮೭೯ಕ್ಕೆ ಏರಿಕೆಯಾಗಿದ್ದು, ಇದುವರೆಗೆ ದೇಶದಲ್ಲಿ ಒಟ್ಟು ೨,೬೭,೯೫,೫೪೯ ಮಂದಿ ಗುಣಮುಖರಾಗಿದ್ದಾರೆ. ಹೊಸ ಸೋಂಕಿತರ ಭಾರೀ ಇಳಿಕೆ ಕಾಣುತ್ತಿರುವುದು ದೇಶದ ಜನರಲ್ಲಿ ನೆಮ್ಮದಿ ತರಿಸಿದ್ದು, ಆದಷ್ಟು ಬೇಗ ಕೊರೊನಾ ಸೋಂಕು ಮಾಯವಾಗಿ ಸಹಜ ಜನಜೀವನಕ್ಕೆ ಕಾಯುತ್ತಿದ್ದಾರೆ.
ಇಲ್ಲಿಯವರೆಗೆ ೩,೪೪,೦೮೨ ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಹಾಗೂ ದೇಶದಲ್ಲಿ ಇನ್ನೂ ೧೫,೫೫,೨೪೮ ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇದುವರೆಗೆ ದೇಶದ ೨೨,೭೮,೬೦,೩೧೭ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಇಳಿಮುಖಕಾಣುತ್ತಿರುವ ಕೋವಿಡ್-೧೯
Share