ಕೊರೊನಾ ಉಲ್ಬಣಕ್ಕೆ ಸರ್ಕಾರದ ಗೊಂದಲವೇ ಕಾರಣ:ಅಮಥ್ರ್ಯಸೇನ್

Share

ಮುಂಬೈ,ಜೂ.೫: ಇಷ್ಟೊಂದು ದೊಡ್ಡ ಮಟ್ಟದ ಕೊರೊನಾ ಉಲ್ಬಣಕ್ಕೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಗೊಂದಲವೇ ಕಾರಣ ಎಂದು ಎಂದು ನೋಬಲ್ ಪ್ರಶಸ್ತಿ ಪುರಸ್ಕೃತ ಆರ್ಥಶಾಸ್ತ್ರಜ್ಞ ಅಮಥ್ರ್ಯಸೇನ್ ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರ ಸೇವಾ ದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಫಾರ್ಮಾ ಉದ್ಯಮ ಸಾಕಷ್ಟು ಅಭಿವೃದ್ಧಿ ಹೊಂದಿದೆ.ಇರುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಕೊರೊನಾ ಸೋಂಕನ್ನು ಹೋಗಲಾಡಿಸಬಹುದಾಗಿತ್ತು. ಅದಕ್ಕೆ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಎರಡನೆ ಅಲೆ ಕಾಣಿಸಿಕೊಂಡಾಗ ಒಂದು ದಿನದಲ್ಲೇ ೪ ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದು, ೪೫೦೦ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಲು ಆರಂಭದ ವಿಜಯೋತ್ಸವಗಳೇ ಕಾರಣ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟಲು ಭಾರತ ಸರ್ಕಾರ ತನ್ನ ಸಾಮಥ್ರ್ಯ ತೋರ್ಪಡಿಸಲು ವಿಫಲವಾದದ್ದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎನ್ನುವುದು ಸೇನ್ ಅಭಿಪ್ರಾಯವಾಗಿದೆ.

Girl in a jacket
error: Content is protected !!