ಪರಿಸರ ಮತ್ತು ಮಾನವ ಕಾಳಜಿ

Share

ಜಗತ್ತಿಗೆ ಮತ್ತೊಂದು ಪರಿಸರ ದಿನ ಬಂದಿದೆ. ಗಿಡ ನೆಡುತ್ತೇವೆ, ಫೋಟೊ ತೆಗೆಸಿಕೊಳ್ಳುತ್ತೇವೆ. ನೆಟ್ಟ ಗಿಡ ನಾಳೆ ಚಿಗುರೊಡೆಯಿತೋ ಇಲ್ಲವೋ ಎಂದು ನೋಡುವ ವ್ಯವಧಾನ ನಮಗಿಲ್ಲ. ಮುಂದಿನ ವರ್ಷ ಅದೇ ಗುಂಡಿಯಲ್ಲಿ ಮತ್ತೆ ಗಿಡ ನೆಡುತ್ತೇವೆ. ಕಳೆದ ವರ್ಷ ನೆಟ್ಟ ಗಿಡ ಅದೃಷ್ಟವಶಾತ್‌ ದೊಡ್ಡದಾಗಿದ್ದರೆ, ಈ ಬಾರಿ ಸ್ವಲ್ಪ ಆಚೆಗೆ ಇನ್ನೊಂದು ಗಿಡ ನೆಟ್ಟರಾಯಿತು ಎಂಬ ಸಮಾಧಾನ.

ಪರಿಸರ ಅಂದರೆ ಇಷ್ಟೇನಾ? ಗಿಡ ನೆಟ್ಟ ಪ್ರಮಾಣಕ್ಕಿಂತ, ಬೆಳೆದ ಮರಗಳ ಮಾರಣಹೋಮ ಅದೆಷ್ಟೋ ದೊಡ್ಡ ಪ್ರಮಾಣದಲ್ಲಿ ನಡೆದಿದೆಯಲ್ಲವೇ? ಯಾರದೋ ಮೇಲಿನ ಸಿಟ್ಟಿಗೆ ಕಾಡಿಗೆ ಬೆಂಕಿ ಹಚ್ಚುತ್ತಿರುವುದು ನಿಜವಲ್ಲವೇ? ಕಾಡುಗಳಲ್ಲಿ ಬೆಳೆದು ನಿಂತ ಮರಗಳು ಸದ್ದಿಲ್ಲದೆ ಮಿಲ್ಲುಗಳಾಚೆ ಸಾಗುತ್ತಿರುವುದು ಸುಳ್ಳೇ? ಬೃಹತ್‌ ಯೋಜನೆಗಳಿಗಾಗಿ ಕಾಡುಗಳು ಬಟಾ ಬಯಲಾಗುತ್ತಿವೆಯಲ್ಲ? ಇಂತಹ ಪ್ರಶ್ನೆಗಳು ಎದುರಾದಾಗ ನೆನಪಾಗುವುದು

ನಮ್ಮ ಸುತ್ತಲಿರುವ ಸಸ್ಯ, ಪ್ರಾಣಗಳ ಮೇಲೆ ಪರಿಣಾಮ ಬೀರುವ ಎಲ್ಲ ಬಾಹ್ಯಾಕಾರಣಗಳ ಒಟ್ಟು ರೂಪವೇ ಈ ಪರಿಸರ. ಪರಿಸರ ಮತ್ತು ಜೀವಿಗಳ ಮಧ್ಯ ಒಂದಲ್ಲ ಒಂದು ರೀತಿಯಿಂದ ಪೈಪೋಟಿ ನಡೆಯುತ್ತಲೇ ಇರುತ್ತದೆ. ಈ ದೃಷ್ಟಿಯಿಂದ ಒಂದು ಪ್ರದೇಶದ ಜೀವ ಸಮುದಾಯ, ನೀರು, ನೆಲ, ಉಷ್ಣತೆ, ಬೆಳಕು, ಆಹಾರ ಒದುಗುವಿಕೆ ಇತ್ಯಾದಿ ಎಲ್ಲವೂ ಪರಿಸರದ ವ್ಯಾಪ್ತಿಗೆ ಬರುತ್ತವೆ. ಪರಿಸರಕ್ಕೆ ಅನುಗುಣವಾಗಿ ಜೀವಿಗಳು ಬದುಕುವುದನ್ನು ಕಲಿತಿರುತ್ತವೆ ಅವುಗಳ ಜೀವನ ಶೈಲಿಯಲ್ಲೂ ವಿವಿಧ ರೀತಿಯ ಹೊಂದಾಣಕೆಗಳಲ್ಲಿ ವೈವಿಧ್ಯತೆ ಕಾಣುತ್ತೇವೆ. ಪರಿಸರಕ್ಕೆ ತಕ್ಕಂತೆ ಜೀವಿಗಳು ತಮ್ಮ ದೇಹರಚನೆ, ಸಂತಾನೋತ್ಪತ್ತಿ, ಬೆಳವಣಗೆ, ಆತ್ಮರಕ್ಷಣೆ, ವರ್ತನೆಗಳಲ್ಲಿ ಹೊಂದಾಣಕೆ ಮಾಡಿಕೊಂಡು ಬದುಕುತಿರುತ್ತವೆ. ಆದರೇ ಪರಿಸರದಲ್ಲಿಯ ಏರುಪೇರು ಕಂಡುಬಂದಾಗ ಅಲ್ಲಿ ಬದುಕಲಾಗದೇ ಆಹಾರ, ನೀರು, ವಾಸಸ್ಥಳ ಹುಡುಕಿಕೊಂಡು ವಲಸೆ ಹೋಗಲು ಪ್ರಾರಂಭಿಸುತ್ತವೆ. ಇದು ಮಾನವನಿಗೂ ಹೊರತಾಗಿಲ್ಲ.

ಮಾನವನು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶಮಾಡುತ್ತಿದ್ದಾನೆ. ಇದರಲ್ಲಿ ಮುಖ್ಯವಾಗಿ ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯ, ಶಬ್ಧಮಾಲಿನ್ಯ ಇದರಿಂದಾಗಿ ಅತಿವೃಷ್ಟಿ ಅನಾವೃಷ್ಟಿಗಳು ಸಂಭವಿಸುತ್ತಿದ್ದು ಜನರು ಅತಿಯಾದ ಮಳೆ, ಅತಿಯಾದ ಬರ, ಸಮುದ್ರ ಮಟ್ಟದಲ್ಲಿ ಏರಿಕೆ, ನದಿ ಪ್ರವಾಹಗಳು, ಒಣಗಿದ ನದಿಗಳು, ಬರಿದಾಗುವ ಕಾಡುಗಳು, ಭೂತಾಪಮಾನ ಏರಿಕೆ, ಅತಿಯಾದ ಚಳಿ, ಅತಿಯಾದ ಶಾಖ, ಚಂಡಮಾರುತಗಳಂತಹ ಹತ್ತು ಹಲವಾರು ಪರಿಸ್ಥಿತಿಗಳನ್ನು ಎದುರಿಸುತ್ತಿವೆ. ಗಿಡ -ಮರಗಳ ಕಡಿಯುವಿಕೆಯಿಂದ ಇಂಗಾಲದ ಡೈಆಕ್ಸೈಡ್ ಹೊರಸೊಸುವಿಕೆ ಹೆಚ್ಚಳದಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದಾಗಿ ಶಹರಗಳಲ್ಲಿ ಉಸಿರಾಡಲು ಶುದ್ಧವಾದ ಗಾಳೀ ಸಿಗುವುದೇ ಕಷ್ಟವಾಗಿದೆ.ಅತಿಯಾದ ವಾಹನಗಳ ಬಳಕೆಯಿಂದ ಶಬ್ದಮಾಲಿನ್ಯ. ಒಟ್ಟಿನಲ್ಲಿ ಪರಿಸರ ಮಾಲಿನ್ಯದಿಂದ ಇತ್ತಿಚ್ಛಿಗೆ ಭೂಕಂಪ, ಭೂಕುಸಿತಗಳು ಪ್ರಾರಂಭವಾಗಿವೆ. ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶ ಮಾಡುತ್ತ ಹೋದರೆ ಒಂದು ದಿನ ಭೂಮಿಯು ಕೋಪಗೊಂಡು ವಿನಾಶ ಹೊಂದುವ ಸಮಯ ದೂರವಿಲ್ಲ.

ಭರವಸೆ, ಕನಸು ಇಲ್ಲದಿದ್ದರೆ, ನಾಳೆ ಇಲ್ಲ. ಮಾನವನು ಕಲ್ಪಿಸಲೂ ಅಸಾಧ್ಯವೆನಿಸಿದ ಅನೇಕ ಸಂಗತಿಗಳನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾನೆ. ಇಂಥಾದ್ದರಲ್ಲಿ ನಾವೇ ಹುಟ್ಟುಹಾಕಿದ ಸಮಸ್ಯೆಗಳನ್ನು ಮೀರಿ ನಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ ಇದೆ ಎಂಬ ನಿಲುವಿನೊಂದಿಗೆ ಮುಂದಿನ ಹೆಜ್ಜೆಯನ್ನು ನಾವೆಲ್ಲರೂ ಸೇರಿ ಇಡೋಣ ಎಂದು ನಿಮ್ಮಲ್ಲಿ ನನ್ನ ನಿವೇದನೆ. ನಮ್ಮ ಸುತ್ತಮುತ್ತಲೂ ಏನಿದೆ, ಏನು ನಡೆಯುತ್ತಿದೆ ಎಂಬುದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎಚ್ಚರದಿಂದ ಗಮನಿಸಿ ಜಾಗೃತರಾಗುವುದು ಮೊತ್ತಮೊದಲ ಹೆಜ್ಜೆ. ಇವೆಲ್ಲದರಲ್ಲಿ ಪರಿಸರದ ಹಿತಾಸಕ್ತಿಯನ್ನು ಕಾಪಾಡುವ ಅಂಶಗಳನ್ನು ಎತ್ತಿಹಿಡಿದು, ಪರಿಸರವನ್ನು ಕಡೆಗಣಿಸುವ ಅಂಶಗಳನ್ನು ಕೆಳತಳ್ಳುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು ಎಂಬ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಂಡು “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ” ಹಾಗಾಗಿ ಮಕ್ಕಳಲ್ಲಿ ಪರಿಸರ ಸೌರಕ್ಷಣೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಹಾಗೆ ಪ್ರತಿಯೊಬ್ಬರು ಒಂದಲ್ಲಾ ಒಂದು ಗಿಡವನ್ನು ನೆಟ್ಟು ತಮ್ಮ ಹಾಗೂ ಸುತ್ತಮುತ್ತಲಿನ ಪರಿಸರ ರಕ್ಷಿಸಬೇಕು.

ಪರಿಸರ ಅವನತಿಯಿಂದ ದಿನೇದಿನೇ ಸುತ್ತಮುತ್ತಲಿನ ವಾತಾವರಣದಲ್ಲಿ ಏರುಪೇರುಗಳು ಅವಘಡಗಳು ಸಂಭವಿಸುತ್ತಿರುವದು ನಾವು ಗಮನಿಸುತ್ತಿರುವದು ಎಲ್ಲರಿಗೂ ತಿಳಿದ ವಿಷಯ. ಇಂತಹ ಗಂಭೀರ ವಿಷಯಗಳ ಬಗ್ಗೆ ಎಲ್ಲರಲ್ಲಿಯೂ ಅರಿವು ಮೂಡಿಸುವ ಉದ್ದೇಶದಿಂದ ಯುನೈಟೆಡ್ ನ್ಯಾಷನಲ್ ಎನ್ವರ್ಮೆಂಟ್ ಪ್ರೋಗ್ರಾಮ್ ಎಂಬ ಸಂಸ್ಥೆಯು 1973 ರ ಜೂನ್ 5 ರಂದು “ವಿಶ್ವ ಪರಿಸರ ದಿನಾಚರಣೆ” ಆಚರಿಸಬೇಕೆಂದು ವಿಶ್ವದಾದ್ಯಂತ ಕರೇ ನೀಡಿತು.
ಪರಿಸರವನ್ನು ಸಂರಕ್ಷಣೆ ಮಾಡುಲು ಶಾಲೆ, ಕಾಲೇಜು, ಸ್ವಸಹಾಯ ಸಂಘಗಳು ಇತ್ಯಾದಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ವಾಯುಗುಣ ಬದಲಾವಣೆ, ಭೂತಾಪಮಾನ ಏರಿಕೆ, ಪ್ರಕೃತಿ ವಿಕೋಪ ಮತ್ತು ತ್ಯಾಜ್ಯಗಳು, ಇವುಗಳನ್ನೆಲ್ಲಾ ಹೇಗಾದರೂ ಮಾಡಿ ತಡೆಯಬೇಕಾದರೆ ವಿದ್ಯಾರ್ಥಿಗಳು ಸಂಘ-ಸಂಸ್ಥೆಗಳು ಶ್ರಮಿಸಿದರೆ ಮಾತ್ರ ಸಾಧ್ಯ. ಆದಷ್ಟು ವಿದ್ಯುತ್ ಬಳಕೆ ಕಡಿಮೆ ಮಾಡಬೇಕು, ನೀರು ಪೋಲಾಗದಂತೆ ಮಿತವಾಗಿ ಬಳಸಬೇಕು, ಪೆಟ್ರೊಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು ಅಗತ್ಯವಿದೆ.

ಸರ್ಕಾರ ಕಾರ್ಖಾನೆಗಳಿಗೆ ಕನಿಷ್ಠ 5 ರಿಂದ 10 ಎಕ್ಕರೆ ಭೂಮಿಯಲ್ಲಿ ಗಿಡಮರಗಳು ಬೆಳೆಸುವುದಾದರೆ ಕಾರ್ಖಾನೆ ತೆಗೆಯಲು ಅನುಮತಿ ಕೊಡಬೇಕು. ಸೌರಶಕ್ತಿಯನ್ನು ಉಪಯೋಗಿಸಬೇಕು. ಅರಣ್ಯನಾಶ ಮಾಡಬಾರದು. ಹಸಿರು ಸಸ್ಯ ಬೆಳೆಸುವುದು ಈ ನಿಯಮಗಳು ಪಾಲಿಸಿದವರಿಗೆ ಮಾತ್ರ ಅನುಮತಿ ಕೊಡಬೇಕು.

ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ತಾನಾಗಿಯೇ ಬದಲಾಗುತ್ತಾ ಹೋಗುತ್ತದೆ. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಪಾಠ ಬೋಧನೆಯ ಜೊತೆ ಜೊತೆ ನೈತಿಕತೆ ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಕುರಿತು ತಿಳುವಳಿಕೆ ನೀಡುತ್ತಿರಬೇಕು, ಶಾಲೆಯೆಂದರೆ ಒಂದು ಸಣ್ಣ ತೋಟವಾಗಿ ನೋಡುಗರಿಗೆ ಕಾಣಬೇಕು.ಆದರೆ ಇದು ಹೇಳಿದಷ್ಟು ಸುಲಭವಲ್ಲ, ಯಾಕೆಂದರೆ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ದೆಸೆಯಿಂದ ಇಂದಿನ ಮಾನವನ ಜೀವನ ಮಾನವನು ಮೊದಲು ತನ್ನ ಬಗ್ಗೆ ಯೋಚಿಸುವುದನ್ನು ಕಲಿಯುತ್ತಿದ್ದಾನೆ ಹೀಗೆ ಮುಂದುವರೆದರೆ ಮುಂದೊಂದು ದಿನ ನೀರು ಖರೀದಿಸಿ ಕುಡಿದಂತೆ ವಾಯು ಸಹ ಖರೀದಿಸಿ ಶ್ವಾಸವಾಡುವ ಪರಿಸ್ಥಿತಿ ಬಂದೊದಗುವುದು. ಕೆಲವೊಮ್ಮೆ ಇದು ಮನುಷ್ಯನ ಉದಾಸೀನತೆ, ತಿಳಿಗೇಡಿತನ ಎಂದು ಕಂಡುಬಂದರೆ ಅನೇಕ ಸಲ ಇದರಲ್ಲಿ ಜನಸಾಮಾನ್ಯನ ದೈನಂದಿನ ಆದ್ಯತೆ, ಅನಿವಾರ್ಯತೆ ಹಾಗೂ ಅಸಹಾಯಕತೆಗಳು ಎದ್ದುಕಾಣುತ್ತವೆ. ಹೀಗಿರುವಾಗ ಬಹುಪಾಲು ಜನರಿಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮ ಕಣ್ಣಮುಂದೆಯೇ ತಮ್ಮ ನಿತ್ಯ ಉಪಜೀವನಕ್ಕೆ ತೆರೆಮರೆಯಲ್ಲಿ ನಿಸರ್ಗ ಹಾಳಾಗುತ್ತಲೇ ಇದೆ. ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಕಟು ಸತ್ಯ.

ಮಾನವನು ಕಲ್ಪಿಸಲೂ ಅಸಾಧ್ಯವಾದ ವಿಕೋಪಗಳು, ರೋಗಗಳು, ವೈರಸ್ಗಳು ಜನರ ಮನೋಸ್ತಯ್ರ್ಯ ಕುಗ್ಗಿಸುವಂತ ಭಯಂಕರ ಸಂಧರ್ಭಗಳು ಬಂದೊದಗಿದೆ. ಅನೇಕ ಸಂಗತಿಗಳಲ್ಲಿ ಜನರು ನಿರಾಶ್ರೀತರಾಗಿ ಬೀದಿ ಬೀದಿ ಸುತ್ತಾಡುತಿದ್ದರೆ ಇನ್ನು ಕೆಲವೊಮ್ಮೆ ಹೊಟ್ಟೆಗಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ. ಇಂಥದ್ದರಲ್ಲಿ ನಾವೇ ಹುಟ್ಟುಹಾಕಿದ ಸಮಸ್ಯೆಗಳನ್ನು ಮೀರಿ ನಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಹೇಗೆ ಸಾಧ್ಯ? ಇದನೆಲ್ಲ ಮನಗೊಂಡು ನಾವು ನೀವುಗಳು ಮಂದಿನ ಹೆಜ್ಜೆಯನ್ನು ಪರಿಸರ ಪ್ರೇಮಿಗಳಾಗಿ, ಪ್ರಕೃತಿಯನ್ನುದೇವರೆಂದು ಗಿಡಮರಗಳನ್ನು ಉಳಿಸಿ ಬೆಳಿಸಿದಾಗ ಮಾತ್ರ ಉತ್ತಮ ಭವಿಷ್ಯ ನಿಮಿಸಲು ಖಂಡಿತಾ ಸಾಧ್ಯ ಇದೆ ಎಂಬ ನಿಲುವಿನೊಂದಿಗೆ ಮುಂದಿನ ಹೆಜ್ಜೆ ಇಡೋಣ ಎಂದು ಹೇಳುತ್ತಾ ನಮ್ಮ ಸುತ್ತಮುತ್ತಲೂ ಏನಿದೆ, ಏನು ನಡೆಯುತ್ತಿದೆ ಎಂಬುದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎಚ್ಚರದಿಂದ ಗಮನಿಸಿ ಜಾಗೃತರಾಗುವುದು

ಮೊತ್ತಮೊದಲ ಹೆಜ್ಜೆ. ಇವೆಲ್ಲದರಲ್ಲಿ ಪರಿಸರದ ಹಿತಾಸಕ್ತಿಯನ್ನು ಕಾಪಾಡುವ ಅಂಶಗಳನ್ನು ಎತ್ತಿಹಿಡಿದು, ಪರಿಸರವನ್ನು ಕಡೆಗಣಿಸುವ ಅಂಶಗಳನ್ನು ಕೆಳತಳ್ಳುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತ ನಮ್ಮ ಮೊದಲ ಹೆಜ್ಜೆಯನ್ನು ಇಡೋಣ.

Girl in a jacket
error: Content is protected !!