ಸ್ಕೂಲ್ ಮಾಸ್ಟರ್, ಶ್ರೀಕೃಷ್ಣದೇವರಾಯ, ಕಿತ್ತೂರುಚೆನ್ನಮ್ಮ ಮೊದಲಾದ ಮಹೋನ್ನತ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಅಭಿನಯಿಸಿದ ಬಿ.ಆರ್.ಪಂತುಲುತಮ್ಮ‘ಪದ್ಮಿನಿ ಪಿಕ್ಚರ್ಸ್‘ ಲಾಂಛನದಲ್ಲಿತೆರೆಗೆತಂದ ಮೊದಲ ಕನ್ನಡಚಿತ್ರ ‘ಮೊದಲ ತೇದಿ‘.ಮೊದಲ ಬಾರಿಗೆಕನ್ನಡಚಿತ್ರವೊಂದರಲ್ಲಿ ತಮಿಳಿನ ಖ್ಯಾತ ನಟ ಶಿವಾಜಿಗಣೇಶನ್ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದು ಈ ಚಿತ್ರದ ವಿಶೇಷವಾಗಿತ್ತು.ಚಿ.ಸದಾಶಿವಯ್ಯನವರು ಈ ಚಿತ್ರದ ಮೂಲಕ ಸಾಹಿತಿಯಾಗಿಚಿತ್ರರಂಗ ಪ್ರವೇಶಿಸಿದರು.ಕನ್ನಡಕ್ಕೆ ಮಧುರ ಗೀತೆಗಳನ್ನು ನೀಡಿದ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ ಮೊದಲ ಚಿತ್ರವೂ ಹೌದು. ವಿಶೇಷವೆಂದರೆ ಈ ಚಿತ್ರದ ಮೂಲಕ ಚಿ.ಉದಯಶಂಕರ್ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದೇ ಅಲ್ಲದೆ, ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡಚಿತ್ರರಂಗ ಪ್ರವೇಶಿಸಿದರು.ನಟಡಾ.ವಿಷ್ಣುವರ್ಧನ್ಅವರ ಸಹೋದರರವಿ ಈ ಚಿತ್ರದಲ್ಲಿ ಬಾಲನಟರಾಗಿ ಅಭಿನಯಿಸಿದ್ದರು.
ಮೊದಲತೇದಿಕಪ್ಪು-ಬಿಳುಪು ಸಾಮಾಜಿಕ ಚಲನಚಿತ್ರ ೧೯೫೫ರಲ್ಲಿ ಬಿಡುಗಡೆಗೊಂಡಿತು. ಪಂತುಲುಅವರೊಂದಿಗೆ ನಿರ್ಮಾಣ ಸಹಕಾರಹಸ್ತಚಾಚಿದ್ದ ಪ.ನೀಲಕಂಠನ್ಅವರು ‘ಮೊದಲ ತೇದಿ‘ ಚಿತ್ರದ ನಿರ್ದೇಶಕರು. ಈ ಚಿತ್ರದಗುಮಾಸ್ತೆ ಶಿವರಾಂ ಪಾತ್ರದಲ್ಲಿ ಬಿ.ಆರ್.ಪಂತುಲು, ನಾಯಕಿ ಪಾರ್ವತಿ ಪಾತ್ರದಲ್ಲಿ ಎಂ.ವಿ.ರಾಜಮ್ಮ ಅಭಿನಯಿಸಿದರು. ಡಿಕ್ಕಿ ಮಾಧವರಾವ್, ರೇವತಿ, ಬಿ. ಸದಾಶಿವಯ್ಯ, ಎಸ್.ಆರ್.ರಾಜನ್, ಮಾ.ಹಿರಣ್ಣಯ್ಯ, ಹೆಚ್.ಆರ್.ಶಾಸ್ತ್ರಿ, ಚಿ. ಉದಯಶಂಕರ್, ಸಿ.ವಿ.ವಿ. ಪಂತುಲು, ರವಿಕುಮಾರ್ನಟಿಸಿದರು.
ದಾದಾಮಿರಾಸೆಚಿತ್ರಕ್ಕೆಕಥೆ ಬರೆದರು. ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ನಲ್ಲಿ ಶಿಕ್ಷಕರಾಗಿದ ಚಿ.ಸದಾಶಿವಯ್ಯ ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು.ಇಂದಿಗೂ ಜನಪ್ರಿಯಾಗಿರುವ ‘ಒಂದರಿಂದಇಪ್ಪತ್ತರವರೆಗೂಉಂಡಾಟ-ಉಂಡಾಟ‘ ಅಚ್ಚುಮೆಚ್ಚಿನಗೀತೆಯಾಗಿತ್ತು.ರಂಗಭೂಮಿಕಲಾವಿದಡಿಕ್ಕಿ ಮಾಧವರಾವ್ ಈ ಹಾಡನ್ನು ಹಾಡಿದ್ದಾರೆ.ಚಿ.ಸದಾಶಿವಯ್ಯನವರು ‘ಮೊದಲತೇದಿ‘ ಚಲನಚಿತ್ರದಲ್ಲಿಸಿಕ್ಕ ಅವಕಾಶ ಪರೀಕ್ಷಿಸಲುಕೆಲಸಕ್ಕೆ ಆರು ತಿಂಗಳು ರಜೆ ಹಾಕಿ, ಮದರಾಸಿಗೆ ತೆರಳಿದರು.ಮೊದಲ ತೇದಿ ಚಿತ್ರಕ್ಕಾಗಿ ಸಾಹಿತ್ಯರಚನೆಯೇಅಲ್ಲದೆ, ಸಹಾಯಕ ನಿದೇಶಕರಾಗಿಯೂ ಕೆಲಸ ನಿರ್ವಹಿಸಿ, ಚಿತ್ರ ಪೂರ್ಣಗೊಂಡ ನಂತರ ಮರಳಿ ಬೆಂಗಳೂರಿಗೆ ಬಂದು ಶಿಕ್ಷಕ ವೃತ್ತಿಯಲ್ಲಿತೊಡಗಿಕೊಂಡರು.ಟಿ.ಜಿ.ಲಿಂಗಪ್ಪ ಈ ಚಿತ್ರಕ್ಕೆ ಸಂಗೀತ ನೀಡಿದರು.
ಆರು ಹಾಡುಗಳನ್ನು ಅಳವಡಿಸಿದ್ದು, ದಂಡಪಾಣಿ ದೇಶಿಕರ್, ಟಿ.ವಿ.ರತ್ನಂ, ಎ.ಪಿ.ಕೋಮಲ, ರಾಣಿ ಹಿನ್ನಲೆದನಿಯಾಗಿದ್ದಾರೆ. ‘ಮೊದಲ ತೇದಿ‘ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಏಕ ಕಾಲಕ್ಕೆ ಸಿದ್ಧಗೊಂಡಿತು.ತಮಿಳಿನ ‘ಮುದಲ್ತೇಥಿ‘ ಚಿತ್ರದಲ್ಲಿ ಶಿವಾಜಿ ಗಣೇಶನ್ ಹಾಗೂ ಅಂಜಲಿದೇವಿ ಅಭಿನಯಿಸಿದ್ದರು. ಈ ಚಿತ್ರ ಹಿಂದಿಯಲ್ಲಿತೆರೆಕಂಡಿದ್ದ ‘ಪೆಹಲಿ ತಾರೀಖ್‘ ಚಿತ್ರದ ಪುನರವತರಣಿಕೆಯಾಗಿತ್ತು.ವಿ.ರಾಮಮೂರ್ತಿಛಾಯಾಗ್ರಹಣ, ಹರಿಬಾಬು ಮತ್ತುಎ.ರಾಮದಾಸ್ ಪ್ರಸಾಧನ, ಎ.ಕೆ.ಶೇಖರ್ ಕಲೆ ಇದ್ದ ಈ ಚಿತ್ರಕ್ಕೆಸೋಹನ್ ಲಾಲ್-ಸಂಪತ್ ನೃತ್ಯ ನಿರ್ದೇಶನ ಮಾಡಿದ್ದರು. ಮದರಾಸಿನ ರೇವತಿ ಸ್ಟುಡಿಯೊದಲ್ಲಿ ಚಿತ್ರೀಕರಣಗೊಂಡಿತು.೧೪,೯೮೦ ಅಡಿ ಉದ್ದದ ಈ ಚಿತ್ರ ೧೯೫೫ರ ಏಪ್ರ್ರಿಲ್ ೪ರಂದು ಸೆನ್ಸಾರ್ಗೊಂಡಿತು.
ಶಿವರಾಂ ಸರ್ಕಾರಿಕಛೇರಿಯೊಂದರಲ್ಲಿಗುಮಾಸ್ತ.ಬಡ ಮಧ್ಯಮ ವರ್ಗದಕುಟುಂಬ. ಹಲವಾರು ಸಮಸ್ಯ- ಸಂಕಷ್ಟಗಳನಡುವೆಶಿವರಾಂ ಕೆಲಸಕಳೆದುಕೊಳ್ಳುತ್ತಾನೆ. ಸಂಸಾರ ನಡೆಸುವುದುಅತ್ಯಂತದುಸ್ತರವಾಗುತ್ತದೆ. ತಾನು ಸತ್ತರೆ ಬರುವ ವಿಮಾ ಹಣದಿಂದಲಾದರೂತನ್ನಕುಟುಂಬನೆಮ್ಮದಿಯಿಂದಿರಬಹುದುಎಂದು ಭ್ರಮಿಸಿ ಶಿವರಾಮ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಬಂದ ಹಣಕಳ್ಳತನವಾಗಿ ಶಿವರಾಂ ಪತ್ನಿಸಮಸ್ಯೆಗಳನ್ನು ಎದುರಿಸುತ್ತಾಳೆ. ಪುತ್ರಿಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.ಪಾರ್ವತಿತಾನೂಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.ಶಿವರಾಮನ ಕನಸುಗಳೆಲ್ಲಾ ಸತ್ತು ಹೋಗುತ್ತವೆ.ಇದುಚಿತ್ರದಕಥ.
ಪಂತುಲುಅವರು ನಿರ್ಮಿಸಿದ ಮೊದಲ ಕನ್ನಡಚಿತ್ರಕ್ಕೆ ಪ್ರೇಕ್ಷಕರಿಂದ ಮಾತ್ರವಲ್ಲ, ಕನ್ನಡ ನಾಡಿನ ಪ್ರಮುಖ ಪತ್ರಿಕೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಮೂಡಿ ಬಂದಿತು.ಅಂದಿನ ದಿನಗಳಲ್ಲಿ ಜನಪ್ರಿಯವಾಗಿದ್ದ ಪ್ರಜಾವಾಣಿ, ಡೆಕ್ಕನ್ಹೆರಾಲ್ಡ್, ಜನವಾಣಿ, ವಿಶ್ವಕರ್ನಾಟಕ, ತಾಯಿನಾಡು, ಚಿತ್ರಗುಪ್ತ ಹಾಗೂ ಚಲಚ್ಚಿತ್ರ ಪತ್ರಿಕೆಗಳಲ್ಲಿ ಬರೆದ ವಿಮರ್ಶೆಗಳು ಈ ಚಿತ್ರಉತ್ತಮ ಮೌಲ್ಯಗಳಿಂದ ಕೂಡಿದಚಿತ್ರಎಂಬುದಕ್ಕೆಕೈಗನ್ನಡಿಯಾಯಿತು.