ಮೈಸೂರು ಜಿಲ್ಲಾ ಆಡಳಿತದಲ್ಲಿ ಅಯೋಮಯ-ಉಸ್ತುವಾರಿ ಸಚಿವರ ವೈಫಲ್ಯ

Share

ಬೆಂಗಳೂರು,ಜೂ,೦೪: ಮೈಸೂರು ಜಿಲ್ಲಾ ಆಳಿತ ವ್ಯವಸ್ಥೆಯೇ ಹದಗೆಟ್ಟಿದೆ, ಅಸಮರ್ಥ ಉಸ್ತುವಾರಿ ಸಚಿವರಿಂದ ಇಡೀ ವ್ಯವಸ್ಥೆ ಹಾಳುಗೆಟ್ಟಂತಿದೆ.
ಮೈಸೂರಿನಲ್ಲಿ ಕಳೆದ ಆರು ತಿಂಗಳಿನಿಂದಲೂ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ನಿರಂತರವಾಗಿ ಮಾತಿನ ಸಮರಗಳು. ಏಟಿಗೆ-ಎದುರೇಟು ನಡೆಯುತ್ತಲೇ ಇದೆ ಇದರ ಮುಂದುವರೆದ ಭಾಗವಾಗಿ ಈಗ ಪಾಲಿಕೆ ಆಯುಕ್ತರೇ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಇದರಲ್ಲಿ ಉಸ್ತುವಾರಿ ಸಚಿವ ಸೋಮಶೇಖರ್ ಅವರ ವೈಫಲ್ಯವಂತೂ ಎದ್ದು ಕಾಣುತ್ತದೆ.
ಇದು ಕಳೆದ ಎರಡು ತಿಂಗಳಿನಿಂದಲೂ ಇಬ್ಬರಲ್ಲೂ ಆಂತರಿಕ ಕಚ್ಚಾಟ ನಡೆಯುತ್ತಿತ್ತು, ಜೊತೆಗೆ ಜನಪ್ರತಿನಿಧಿಗಳು ರೋಹಿಣಿ ವಿರುದ್ಧ ಆರೋಪಗಳನ್ನು ಮಾಡುತ್ತಲೆ ಬಂದಿದ್ದರು ಅದಕ್ಕೆ ಅವರು ಸಮರ್ಥ ಉತ್ತರವನ್ನು ಕೊಡುತ್ತಲೆ ಬಂದಿದ್ದರು.ಒಂದು ರೀತಿ ಮೈಸೂರು ಜಿಲ್ಲಾಡಿತದಲ್ಲಿ ಗದ್ದಲದ ವಾತವಾಣ ನಿರ್ಮಾಣವಾಗಿತ್ತು ಇಷ್ಟಾದರೂ ಆ ವ್ಯವಸ್ಥೆಯನ್ನು ತಹಬಂದಿಗೆ ತರಲಿಕ್ಕಾಗಲಿಲ್ಲ ಎಂದರೆ ಅವರು ಉಸ್ತುವಾರಿ ಸಚಿವ ಸೋಮಶೇಖರ್ ಅವರ ವೈಫಲ್ಯವಂತೂ ಕಾಣುತ್ತಿದೆ.


ಒಬ್ಬ ನಿಷ್ಠಾವಂತ ಉಸ್ತುವಾರಿ ಸಚಿವರಾಗಿದ್ದರೆ ಈ ಆಂತರಿಕ ಕಚ್ಚಾಟಗಳನ್ನು ಬಹಿರಂಗ ಹೇಳಿಕೆ ಹೇಳಿಕೆಗಳ ವಾಗ್ದಾಳಿಯ ಕುರಿತು ಏನಾಗಿದೆ ಯಾಕೆ ಹೀಗೆ ಎನ್ನುವ ಕುರಿತು ವಿಚಾರಣೆ ನಡೆಸಿ ಎಲ್ಲರನ್ನೂ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಿತ್ತು ಆದರೆ ಅವರು ಮಾಡುತ್ತಿರುವ ಕೆಲಸ ಏನು. ಇಂದು ನೋಡಿ ನಾಳೆ ನೋಡಿ.ಇನ್ನೂ ಮೂರು ದಿನ ನೋಡಿ ..ಈ ನೋಡಿ ಎಂದು ಹೇಳಲು ಇಷ್ಟು ಸಮಯ ಬೇಕಿತ್ತೆ ಕಳೆದ ಆರು ತಿಂಗಳಿನಿಂದಲೂ ನಡೆಯುತ್ತಿರುವ ಈ ವ್ಯವಸ್ಥೆ ಅದಗೆಟ್ಟು ಹೋಗಿದೆ ಈಗ ಪಾಲಿಕೆ ಆಯುಕ್ತರು ರಾಜೀನಾಮೆ ಬಿಸಾಡಿ ಬಂದಿದ್ದಾರೆ ಎಂದರೆ ಅದರ ಅರ್ಥ ಏನು ಪರಿಸ್ಥಿತಿ ಎಲ್ಲಿಗೆ ಹೋಗಿದೆ ಎನ್ನುವ ಒಂದಿಷ್ಟು ಪರಿಜ್ಞಾನವೂ ಇದ್ದಂತಿಲ್ಲ .


ಒಬ್ಬ ಐಎಎಸ್ ಅಧಿಕಾರಿ ಮನನೊಂದು ರಾಜೀನಾಮೆ ಕೊಡುತ್ತಾರೆ ಎಂದರೆ ಏನರ್ಥ ಇಬ್ಬರು ಐಎಎಸ್ ಅಧಿಕಾರಿಗಳ ನಡುವೆ ನಡೆದಿದ್ದಾರೂ ಏನು ಅದು ಉಸ್ತುವಾರಿ ಸಚಿವರಿಗೂ ಗೊತ್ತಿದೆ ಗೊತ್ತಿದ್ದರೂ ಶೋಆಪ್ ಕೊಟ್ಟುಕೊಂಡು ಹೋಡಾಡಿದರೆ ಸಾಲದು ಇಬ್ಬರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆದಿಲ್ಲ ಎನ್ನುವುದಂತು ಇಲ್ಲಿ ಎದ್ದು ಕಾಣುತ್ತಿದೆ.
ಆಯುಕ್ತರ ರಾಜೀನಾಮೆ ಹಿಂದೆ ರಾಜಕಾರಣ ಅಡಗಿದೆ ಎನ್ನುವುದರಲ್ಲಿ ಎರಡು ಮಾತಲಿಲ್ಲ. ಇಡೀ ಜನಪ್ರತಿನಿಧಿಗಳು ಅವರ ಪರ ನಿಂತು ಈ ಕೆಲಸ ಮಾಡುವ ಮೂಲಕ ಜಿಲ್ಲಾದಿಕಾರಿ ರೋಹಿಣಿಯನ್ನು ಕಟ್ಟಿಹಾಕುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದನ್ನು ಬಹಿರಂಗವಾಗಿ ಹೇಳಬೇಕಿಲ್ಲ.


ಜಿಲ್ಲಾಧಿಕಾರಿ ರೋಹಿಣಿ ಮೈಸೂರು ಜನಪ್ರತನಿಧಿಗಳ ಲ್ಯಾಂಡ್‌ಮಾಪೀಯವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನವೇ ಆಕೆಯ ವಿರುದ್ಧ್ ಇಷ್ಟೆಲ್ಲಾ ನಡೆಯುತ್ತಿವೆ ಎನ್ನುವುದು ಸತ್ಯ ಒಬ್ಬ ದಕ್ಷ ಅಧಿಕಾರಿಯ ವಿರುದ್ಧ ಇಷ್ಟೊಂದು ಜನ ಮುಗಿಬಿದ್ದು ಹಂತ ಹಂತವಾಗಿ ಆ ಹೆಣ್ಣಿನ ಕೆಲಸಗಳನ್ನು ನಿಷ್ಕ್ರಿಯೇ ಮಾಡುತ್ತಿದ್ದಾರೆ ಎಂದರೆ ನಿಜಕ್ಕೂ ಜನಪ್ರತಿನಿಧಿಗಳು ಕರಾಳಮುಖಗಳು ಹೇಗಿರಬೇಡ.

Girl in a jacket
error: Content is protected !!