ಹಾಸನ,ಜೂ,೦೩:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾಸನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ. ಸಿ.ಎಂ ಮತ್ತು ಗೃಹಸಚಿವರು ಎರಡು ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ರಮೇಶ್ ಜಾರಕಿಹೊಳಿಯನ್ನ ರಕ್ಷಣೆ ಮಾಡುತ್ತಿದ್ದಾರೆ ಎಂದು. ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಇನ್ನು ಸರ್ಕಾರ ಆನ್ ಲೈನ್ ಮೂಲಕ ಲಸಿಕೆ ನೋಂದಣಿ ನಿಲ್ಲಿಸಿದೆ. ೧೮ ರಿಂದ ೪೫ ವರ್ಷದವರಿಗೆ ಲಸಿಕೆ ನೀಡಲು ಸರ್ಕಾರದ ಬಳಿ ಲಸಿಕೆ ಇಲ್ಲ. ಹೀಗಾಗಿ ಕೈಮುಗಿದ್ದು ಕೇಳಿಕೊಳ್ಳುತ್ತೇವೆ. ಭಿಕ್ಷೆ ಬೇಡುತ್ತೇವೆ. ಲಸಿಕೆ ಕೊಡಿ. ಜನರ ಜೀವ ಉಳಿಸಿ. ಚಿಕ್ಕಮಕ್ಕಳು ಯುವಕರಿಗೆ ಲಸಿಕೆ ನೀಡಿ ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
ಸಿಡಿಪ್ರಕರಣ ಮುಚ್ಚುವ ಯತ್ನ-ರಾಜ್ಯಾದ್ಯಂತ ಪ್ರತಿಭಟನೆ:ಡಿಕೆಶಿ
Share