ದೇಹ ಮತ್ತು ದೇಶ

Share

 

ದೇಹ ಮತ್ತು ದೇಶ
ಮೋಜು ಮಸ್ತಿಯಿಂದ ಶುರುವಾಗುವ ಕುಡಿತವು ಕ್ರಮೇಣ ಅದನ್ನು ಬಿಡಲಾರದ ಸ್ಥಿತಿಗೆ ಮನುಷ್ಯನನ್ನು ಕೊಂಡೊಯ್ಯುತ್ತದೆ. ಇದು ಗಂಡಸರೊಬ್ಬರನ್ನೇ ಅಲ್ಲ ಈಗೀಗ ಕೆಲವು ಹೆಂಗಸರು ಸಹ ಇದನ್ನು ತಮ್ಮ ಬದುಕಿನಲ್ಲಿ ಆರಂಭಿಸಿರುವುದು ದುರದೃಷ್ಟವೇ ಸರಿ. ಯಾವುದೋ ಒತ್ತಡಕ್ಕೆ ಮಣಿದೋ, ಅಥವಾ ತಮ್ಮ ಸ್ಟೇಟಸ್ ಗೆ ಇರದಿದ್ದರೆ ಹೇಗೆ? ಎಂದೋ, ಒತ್ತಡಗಳನ್ನು ಹತ್ತಿಕ್ಕಲೆಂದೋ ಶುರುವಾಗುವ ಇದು ಯಾವುದೇ ಲಿಂಗಬೇಧವಿಲ್ಲದೆ, ವರ್ಗಬೇಧವಿಲ್ಲದೆ, ಎಲ್ಲರ ಬದುಕನ್ನೂ ಮತ್ತು ಜೀವನಶೈಲಿಯನ್ನೂ ಹಾಳು ಮಾಡುತ್ತದೆ. ಕುಟುಂಬಗಳಲ್ಲಿ ಜಗಳ, ಕುಟುಂಬಕ್ಕೆ ಕೆಟ್ಟ ಹೆಸರು ಬಂದು ಗೌರವವೂ ಬೀದಿಗೆ ಬೀಳುವಂತಾಗುತ್ತದೆ. ಇದೇ ಜಗಳದಿಂದ ಮನೆಯ ಒಡತಿ ಮತ್ತು ಮಕ್ಕಳು ಅಸಹನೆಯಿಂದ ಮನೆಯನ್ನು ತೊರೆದೂ ಸಹ ದೂರಾಗುವ ಸನ್ನಿವೇಶಗಳನ್ನೂ ಕಾಣಬಹುದು. ಕುಡಿತದ ಕೆಡಕುಗಳನ್ನು ಅರಿತು ಅದನ್ನು ವಿಷದಂತೆ ಕಂಡು ದೂರವಿಡದೆ ಇದ್ದರೆ ಮನುಷ್ಯನಿಗೆ ಸ್ನಾಯು ದೌರ್ಬಲ್ಯ, ಬಿಪಿ, ಹೃದಯಾಘಾತ, ಹೇಪಟೈಟಿಸ್ ಹೊಟ್ಟೆಯಲ್ಲಿ ಹುಣ್ಣು, ನರಗಳ ದೌರ್ಬಲ್ಯ, ಮೂರ್ಚೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದು ಕೆಲವೊಮ್ಮೆ ಪ್ರಾಣಾಪಾಯವೂ ಸಹ ಘಟಿಸುತ್ತದೆ.


ನನ್ನ ಬಾಲ್ಯದ ಊರಿನ ನೆನಪು. ಎಷ್ಟು ಸುಂದರವಾದ ಆ ಊರ ಸುತ್ತಲೂ ಅಚ್ಚ ಹಸುರಿನ ಮರಗಳು.. ಶುದ್ಧ ನೀರು..ಗಾಳಿ.. ಬಸ್ ಕಾರುಗಳ ಕಾರುಬಾರಿಲ್ಲ. ಆ ಊರಿನ ವಿಶೇಷವೇನೆಂದರೆ ಕಲ್ಲಿನಿಂದ ಅನೇಕ ದೇವರುಗಳ ವಿಗ್ರಹಗಳನ್ನು ಸುಂದರವಾಗಿ ಕೆತ್ತಿ ಇಡೀ ಭಾರತದ ಎಲ್ಲಾ ರಾಜ್ಯಗಳಿಗೂ ತಲುಪಿಸಿರುವ ಹೆಮ್ಮೆ. ಊರ ಮಧ್ಯದಲ್ಲಿ ರಾಮನ ದೇವಾಲಯ ಅದರ ಹಿಂದೆಯೇ ದೊರೆಬಾವಿ ಎಂದು ಕರೆಯುವ ಕಲ್ಯಾಣಿ. ಆ ಕಲ್ಯಾಣಿಯ ನೀರು ಶುದ್ಧವಿರಲಿಲ್ಲ ಪಾಚಿಯುಕ್ತ ನೀರಿರುತ್ತಿತ್ತು. ಅದರಲ್ಲಿ ಊರ ದನಗಳನ್ನು ತೊಳೆಯುತ್ತಿದ್ದರು. ದನಗಳಿಗೆ ತಂದ ಹುಲ್ಲಿನಲ್ಲಿ ಮಣ್ಣಿದ್ದರೆ ಅದರಲ್ಲಿಯೇ ತೊಳೆಯುತ್ತಿದ್ದರು. ಒಟ್ಟಲ್ಲಿ ಇಡೀ ಆ ಕಲ್ಯಾಣಿಯ ನೀರು ಹಸಿರು ಕಪ್ಪು ನೀರಂತೆ ಕಾಣುತ್ತಿತ್ತು. ಅಲ್ಲಿಂದ ಸ್ವಲ್ಪ ಕೆಲಗಡೆ ನಡೆದರೆ ಶಿಲ್ಪಿಗಳ ಬೀದಿ, ಇನ್ನೂ ಮುಂದೆ ಬಂದರೆ ಶೆಟ್ಟರ ಮನೆಗಳು, ಪಕ್ಕದಲ್ಲೇ ಮಸೀದಿ, ನಂತರ ಒಂದೆರಡು ಸಣ್ಣಮನೆಗಳು, ಪಕ್ಕದಲ್ಲೇ ನಮ್ಮ ಶಾಲೆ.
ನಾವು ಬೇಸಿಗೆ ರಜೆ ಬಂದರೆ ಮರಗಳ ಕೆಳಗೆ ಮತ್ತು ಶಿಶುವಿಹಾರದ ಅಂಗಳದಲ್ಲಿ ನಮ್ಮ ಮರಿ ಸೈನ್ಯ ಬೀಡುಬಿಡುತ್ತಿತ್ತು. ಪ್ರಾಥಮಿಕ ಶಾಲೆಯ ಗೇಟಿಗೆ ಬೀಗ ಹಾಕಿದ್ದಾಗ ಶಾಲೆಯ ವರಾಂಡದಲ್ಲಿ ಆಡುವ ಮನಸ್ಸಿನಿಂದ ಶಾಲೆಯ ಮುಂದಿನ ವಿಶಾಲವಾದ ಅಂಗಳಕ್ಕೆ ಹಾಕಿದ್ದ ಕಳ್ಳಿಯ ಗಿಡದ ಬೇಲಿಯಲ್ಲಿ ನಾವೇ ಚಿತ್ರದುರ್ಗದಲ್ಲಿನ ಕೋಟೆಯ ಒಳಗೆಮೊಸರು ಮಾರುವವಳು ಹೋಗುವ ಕಿಂಡಿಯಂತೆ ಒಂದು ಸುರಂಗ ಮಾರ್ಗ ಕಂಡು ಹಿಡಿದಿದ್ದೆವು. ಆಟ ಮುಗಿದ ನಂತರ ಹೊರಗಡೆ ಬಂದ ಮೇಲೆ ಆ ಕಿಂಡಿಯು ಯಾರಿಗೂ ಕಾಣದಂತೆ ಬೇರೆ ಹಸಿರು ಗಿಡಗಳಿಂದ ಬಂದ್ ಮಾಡುತ್ತಿದ್ದೆವು. ಇದು ಗಿರಿಜಾ, ಮೈಥಿಲಿ, ನಾಗು, ನನಗೆ ಮಾತ್ರ ಗೊತ್ತಿತ್ತು. ಸಂಜೆಯ ಸಮಯದಲ್ಲಿ ಮರಗಳ ಕೆಳಗೆ ಕುಂಟುಬಿಲ್ಲೆ, ಗುಲ್ಟೋರಿ, ಚಲೋಮಿಲೋ ಆಟಗಳನ್ನು ಆಡುತ್ತಿದ್ದೆವು.


ಹೀಗೆ ಶಂತವಾಗಿ ಸಾಗಿದ್ದ ನಮ್ಮ ಚಿಣ್ಣರ ಬದುಕಿಗೆ ಇದ್ದಕ್ಕಿದ್ದಂತೆ ಭಯದ ವಾತಾವರಣ ಬಂದು ಒದಗಿತ್ತು. ಅದೇನೆಂದರೆ ಮಿಲಟರಿಯಿಂದ ವಾಪಸ್ಸಾಗಿದ್ದ ವೆಂಕಟರಮಣ! ಭಾರತೀಯ ಸೇನೆ ಎಂದರೆ ಏನೋ ಒಂದು ರೋಮಾಂಚನ. ಗಡಿಯಲ್ಲಿ ನುಸುಳುವ ವೈರಿಗಳ ಗುಂಡಿನ ಮಳೆಗೆ ಎದೆಯೊಡ್ಡಿ ದೇಶಕ್ಕಾಗಿ ಪ್ರತಿದಾಳಿ ನಡೆಸುವ ಸೈನಿಕರನ್ನು ನೆನೆದಾಗ ಅವರ ಉಡುಪು, ತಲೆಮೇಲಿನ ಕವಚ ನೆನಪಾಗಿ ಮೈ ನವಿರೇಳುತ್ತದೆ. ದೇಶದಲ್ಲಿ ಭೂಕಂಪವಾಗಲಿ, ಚಂಡಮಾರುತವಾಗಲಿ, ನೆರೆ ಮುಂತಾದ ಪ್ರಕೃತಿ ವಿಕೋಪಗಳೆದುರಾಗ ನಮ್ಮ ನೆರವಿಗೆ ಬರುವ ಸೇನಾ ಯೋಧರೆಂದರೆ ಎಲ್ಲರಿಗೂ ಗೌರವವೇ.

ಆದರೆ ನಾನು ಹೇಳಲು ಹೊರಟಿರುವ ವೆಂಕಟರಮಣ ಊರಿಗೆ ಸೇವೆ ಮುಗಿಸಿ ಬಂದನೋ ಅಥವ ಆತನನ್ನು ತೆಗೆದುಹಾಕಲಾಗಿತ್ತೋ ಗೊತ್ತಿಲ್ಲ. ಆತನ ರೂಪ ಕಣ್ಣಲ್ಲಿ ಇನ್ನೂ ಮಸಕುಮಸಕಾಗಿದೆ ಎತ್ತರದ ಮೈಕಟ್ಟು, ಬಿಳಿಬಣ್ಣ, ಠೀವಿಯಿಂದ ಇಟುತ್ತಿದ್ದ ಹೆಜ್ಜೆ. ನಾವು ಮಕ್ಕಳೆಲ್ಲಾ ಅವನ ಮುಂದೆ ಲಿಲ್ಲೀಪುಟ್ಸ್ ತರ ಇರುತ್ತಿದ್ದೆವು. ಆತ ನಮ್ಮೂರಿನ ಬೀದಿಯಲ್ಲಿ ದಿನದ ಒಂದು ಸಾರಿಯಾದರೂ ದಾರಿಯಲ್ಲಿ ಹಾದು ಹೋಗುತ್ತಿದ್ದನು. ಅವನು ರೋಡಿಗೆ ಬಂದರೆ ಆಟವನ್ನು ಬಿಟ್ಟು ನಾವೆಲ್ಲಾ ಎಲ್ಲೆಲ್ಲೋ ಓಡಿಹೋಗಿ ಅಡಗಿ ಕೂಡುತ್ತಿದ್ದೆವು. ಯಾಕೆಂದರೆ ಆತ ಕುಡಿತಕ್ಕೆ ದಾಸನಾಗಿದ್ದನು. ಅಕಸ್ಮಾತ ಆತನ ದೃಷ್ಟಿ ಯಾರ ಮೇಲಾದರೂ ಬಿದ್ದು ಆತ ದುರುಗುಟ್ಟಿಯೋ.. ಲೈಟ್ ಆಗಿ ಯಾವುದೋ ಮೂಡಲ್ಲಿ ಸ್ಮೈಲ್ ಮಾಡಿಯೋ.. ಅಥವಾ ಓಯ್.. ಎಂದರೆ ಸಾಕು.. ಅಂದು ನಮ್ಮ ಚಿಣ್ಣರ ಗುಂಪು ಇಡೀ ದಿನ ಅದೇ ಒಂದು ಅಡ್ವೆಂಚರ್ ಎನ್ನುವಂತೆ ಹೇಳಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ಅವನ ಸರಿ ಸಮಾನವಾದ ವಯಸ್ಸಿನವರೊಂದಿಗೆ ಹೊಡೆದಾಟವೂ ಆಗುತ್ತಿತ್ತು. ಅವನ ಈ ಕುಡಿತದ ಅವತಾರ ನೋಡಲಾರದೆ ಆತನ ಸುಂದರ ಹೆಂಡತಿಯೂ ತವರಿಗೆ ಹೋದ ಸುದ್ಧಿಯೂ ಹರಿದಾಡಿತ್ತು. ಒಟ್ಟಿನಲ್ಲಿ ಚಿಕ್ಕವರಿಗೆ ಆತನ ಹೆಸರು ಹೇಳಿದರೆ ಸಾಕು ಹೆದರಿಕೊಳ್ಳುವಂತಾಗಿದ್ದೆವು.
ಒಂದು ಹಳ್ಳಿಯಿಂದ ಸೇನೆಗೆ ಆಯ್ಕೆಯಾದ ಅಥವಾ ಸೇನೆಯಲ್ಲಿ ಕಾರ್ಯನಿರ್ವಹಿಸುವ ಒಬ್ಬ ವ್ಯಕ್ತಿಯಿಂದ ಆ ಊರಿಗೆ ಒಂದು ಕಳೆ, ಸಾಮಾಜಿಕ ಗೌರವ ಇರುತ್ತದೆ. ಆದರೆ ಈ ವೆಂಕಟರಮಣನ ಉಪದ್ರವ ಎಲ್ಲರಿಗೂ ತಲೆನೋವಾಗಿತ್ತು. ಕುಡಿತಕ್ಕೆ ಸರಕಾರದ ಹಣ ಹೇಗೂ ಇತ್ತು , ಸಹೋದರರ ಮಾತು ಸಹ ಕೇಳದೆ ಬಸವನಂತೆ ಓಡಾಡುತ್ತಿದ್ದ. ಯಾರಿಗೂ ತೊಂದರೆ ಕೊಡದಿದ್ದರೂ ಅವನ ಈ ವರ್ತನೆಗೆ ಬುದ್ದಿ ಹೇಳಿದವರಿಗೆ ಕಪಾಳಮೋಕ್ಷವನ್ನೂ ಒಮ್ಮೊಮ್ಮೆ ಮಾಡಿದ್ದೂ ಇದೆ.


ಒಂದು ದಿನ ಊರಿನ ಜನರಲ್ಲೆಲ್ಲಾ ಬೇಸರದ ಮತ್ತು ದುಃಖದ ವಿಷಯ ಹರಿದಾಡುತ್ತಿತ್ತು. ರಾತ್ರಿಪೂರ ಕುಡಿದು ಚಿತ್ತಾಗಿದ್ದ ವೆಂಕಟರಮಣ ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿ ಊರಿನ ಹೊರಗಡೆ ಇದ್ದ ಗಡೆಯಾರ ಬಾವಿಯಲ್ಲಿ ಕಾಲುತೊಳೆಯಲು ಹೋಗಿ ಜಾರಿಬಿದ್ದು ಕುಡಿತದ ನಶೆಗೆ ಮೇಲೇಳಲಾಗದೆ ಹೆಣವಾಗಿ ಹೋಗಿದ್ದ. ಒಂದು ವಾರ ಆತನ ವಿಷಯವೇ ಎಲ್ಲರ ಬಾಯಲ್ಲಿ. ನಂತರ ಆತ ನಮ್ಮ ಚಿಣ್ಣರ ಗುಂಪಿನಲ್ಲಿ ಭೂತವಾಗಿಯೂ ಸ್ವಲ್ಪದಿನ ಕಾಡಿದ್ದ. ನಾವೆಲ್ಲರೂ ಸೇರಿದಾಗ ಪ್ರಾಣಿಗಳ ಆಸ್ಪತ್ರೆ ಕಂಬದ ಮೇಲೆ ಕೂತಂತೆ, ಆಂಜನೇಯ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕೂತಂತೆ, ದಾಪುಗಾಲಿಟ್ಟು ಶಾಲಾ ಮೈದಾನದಲ್ಲಿ ನಡೆದುಹೋದಂತೆ ಏನೇನೋ ಕಲ್ಪಿಸಿಕೊಳ್ಳುತ್ತಿದ್ದೆವು. ಸತ್ಯವಲ್ಲದಿದ್ದರೂ ಕಲ್ಪಿಸಿಕೊಂಡು ಕಾಲಕಳೆಯುತ್ತಿದ್ದೆವು. ಹಿರಿಯರಾದಂತೆ ಮರೆತುಹೋಯಿತು. ಆದರೂ ಆ ಬಾಲ್ಯದ ಆಗಿಹೋಗಿದ್ದ ಕಾಲ ಮಾತ್ರ ಮನದ ಒಂದು ಮೂಲೆಯಲ್ಲಿ ಎಂದಾದರೂ ಮಿನುಗಿ ಮಾಯವಾಗುತ್ತಲೇ ಇರುತ್ತದೆ. ಐದು ವರ್ಷದ ಹಿಂದಿನ ಕೆಲವು ವಿಷಯಗಳನ್ನು

Girl in a jacket
error: Content is protected !!