ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿಅಂಡರ್‌ವರ್ಲ್ಡ್ ಡಾನ್ ಚಿತ್ರ !

Share

ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಬೆಂಗಳೂರಿನ ಅಂಡರ್‌ವರ್ಲ್ಢಡಾನ್ ಚಿತ್ರ ತೆರೆಗೆ ಬರಲಿದೆ. ಹೌದು ಅಗ್ನಿ ಶ್ರೀಧರ್ ಕತೆ ಬರೆದಿರುವ ಈ ಡಾನ್ ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ.
೬೦ ಮತ್ತು ೭೦ರ ದಶಕದ ಕಥೆಗೆ ಬೆಂಗಳೂರಿನಲ್ಲಿ ಸೂಕ್ತ ಸ್ಥಳ ಹುಡುಕಾಡುವುದೇ ದೊಡ್ಡ ಸವಾಲಾಗಿದೆ ಹಾಗಾಗಿ ಸದ್ಯ ಲೊಕೇಶ್‌ನ ಹುಡುಕಾಟದಲ್ಲಿ ಚಿತ್ರನಿರ್ಮಾಣ ತಂಡ
ಬೆಂಗಳೂರಿನಲ್ಲಿ ಆ ರೀತಿಯ ಸ್ಥಳಗಳು ಸಿಗುವುದು ಕಷ್ಟ ಹೀಗಾಗಿ ನಗರದಿಂದ ಹೊರಗೆ ಅಂದರೆ ಕೋಲಾರ ಮತ್ತು ಮೈಸೂರಿನಲ್ಲಿ ಆ ಕಾಲಕ್ಕೆ ತಕ್ಕನಾದ ವಾತಾವಾರಣ ಸೃಷ್ಟಿಸಲು ಯೋಜಿಸಲಾಗುತ್ತಿದೆ.


ನಿರ್ಧಿಷ್ಟ ಸ್ಥಳ ಸಿಗದ ಹಿನ್ನೆಲೆಯಲ್ಲಿ ಸೆಟ್ ಹಾಕುವ ಪ್ಲಾನ್ ಮಾಡುತ್ತಿದ್ದೇವೆ ಎಂದು ಚೊಚ್ಚಲ ನಿರ್ದೇಶಕ ಶೂನ್ಯ ತಿಳಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಾಗಿ ನಿರ್ಧರಿಸಿರುವ ಚಿತ್ರತಂಡ ಲಾಕ್ ಡೌನ್ ಮುಂಚೆಯೇ ಶೆಡ್ಯೂಲ್ ಸಿದ್ಧಪಡಿಸಿದೆ, ಆದರೆ ಇನ್ನೂ ಸಿನಿಮಾದ ಮೂಹೂರ್ತ ನಡೆಸಿಲ್ಲ.
ಎಂಪಿ ಜಯರಾಜ್ ಜೀವನ ಚರಿತ್ರೆಯ ಕಥೆಯಲ್ಲಿ ಈಗಾಗಲೇ ಟೀನೇಜ್ ವರ್ಶನ್ ಶೂಟಿಂಗ್ ಮುಗಿದಿದೆ, ಈ ಪಾತ್ರವನ್ನು ಆಕಾಶ್ ನಟಿಸಿದ್ದಾರೆ. ಈ ಭಾಗದ ಶೂಟಿಂಗ್ ಗುಟ್ಟಹಳ್ಳಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ.
ಶೀಘ್ರದಲ್ಲೆ ಸಿನಿಮಾ ಸಂಬಂಧಿತ ಪೂರ್ಣ ವಿವರ ಮತ್ತು ಪೋಸ್ಟರ್ ರಿಲೀಸ್ ಆಗಲಿದೆ, ಕಳೆದ ವರ್ಷದ ಆಗಸ್ಟ್ ನಲ್ಲಿ ಪೋಸ್ಟರ್ ರಿಲೀಸ್ ಆಗಿತ್ತು. ಲಾಕ್ ಡೌನ್ ಮುಗಿದ ನಂತರ ಶೂಟಿಂಗ್ ಗಾಗಿ ನಟ ಧನಂಜಯ್ ಸಿದ್ಧತೆ ನಡೆಸಿದ್ದಾರೆ. ಸದ್ಯ ಧನಂಜಯ್ ಬಡವ ರಾಸ್ಕಲ್. ರತ್ನನ್ ಪ್ರಪಂಚ ಹಾಗೂ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ತಮಿಳು ಸಿನಿಮಾದಲ್ಲಿಯೂ ಧನಂಜಯ್ ನಟಿಸುತ್ತಿದ್ದಾರೆ. ಹೆಡ್ ಬುಶ್ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಕೂಡ ನಡೆದಿದೆ.

Girl in a jacket
error: Content is protected !!