ಬೆಂಗಳೂರು,ಮೇ,೩೦: ತನ್ನ ಎದುರಾಳಿ ತಂಡದ ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ರೌಡಿಶೀಟರ್ ಗಳಾದ ಸೋಮ, ಮಧು, ಸುಮಂತ್ ಹಾಗೂ ಮುನಿಮಲ್ಲಪ್ಪ ಬಂಧಿತ ಆರೋಪಿಗಳು.
ಬಂಧಿತರು ವಿರೋಧಿ ಬಣದಲ್ಲಿದ್ದ ರೌಡಿಶೀಟರ್ ರೋಹಿತ್ ಹತ್ಯೆಗೆ ಸಂಚುರೂಪಿಸಿದ್ದರು. ರೋಹಿತ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು. ವರ್ತೂರು ಕೆರೆ ಕೊಡಿ ಬಳಿ ರೋಹಿತ್ ಬರಲಿದ್ದಾನೆ ಎಂಬ ಮಾಹಿತಿ ಅರಿತ ಆರೋಪಿಗಳು ಮಾರಕಾಸ್ತ್ರ ಹಿಡಿದು ಕೊಲೆಗೆ ಸಂಚು ರೂಪಿಸಿದ್ದರು. ಈ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಕೊಲೆ ಯತ್ನ-ನಾಲ್ವರು ರೌಡಿಶೀಟರ್‌ಗಳ ಬಂಧನ
Share