ಸಿಎಂ ಬದಲಾವಣೆ ಮಾಡುವಷ್ಟು ಶಕ್ತಿ ನನಗಿಲ್ಲ-ಯೋಗೇಶ್ವರ್

Share

ಬೆಂಗಳೂರು, ಮೇ ೨೭; ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ ಇದಕ್ಕೆ ಪುಷ್ಟಿ ನೀಡುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದು ಚರ್ಚೆಗೆ ಮತ್ತಷ್ಟು ಗ್ರಾಸವಾಗಿತ್ತು ಆದರೆ ಯೋಗೇಶ್ವರ್ ಅವರು ಈಗ ದೆಹಲಿ ಭೇಟಿ ಕುರಿತು ವಿವರಣೆ ನೀಡಿದ್ದಾರೆ.
ನಮ್ಮ ಉದ್ದೇಶ ಮುಖ್ಯಮಂತ್ರಿ ಬದಲಾವಣೆ ಯಲ್ಲ ಅವರನ್ನು ಬದಲಾಯಿಸುವಷ್ಟು ಶಕ್ತಿಯೂ ನನ್ನಲ್ಲಿಲ್ಲ ಆದರೆ ಅವರ ಪುತ್ರ ಅವತ ಹಸ್ತಕ್ಷೇಪ ಕುರಿತು ನಮ್ಮ ಅಸಮಾಧಾನ ಎಂದಿದ್ದಾರೆ.
ದೆಹಲಿಗೆ ನನ್ನ ವೈಯಕ್ತಿಕ ವಿಚಾರಕ್ಕೆ ಆಗಾಗ ಹೋಗುತ್ತಿರುತ್ತೇನೆ. ಪಕ್ಷದ ಚೌಕಟ್ಟಿನಲ್ಲಿ ನಾನು ವರಿಷ್ಠರ ಜೊತೆ ಚರ್ಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನಗೆ ಅಸಮಾಧಾನವಿದೆ. ಕೆಲವೊಂದು ನೋವುಗಳಿವೆ. ಹೀಗಾಗಿ ದೆಹಲಿಗೆ ಹೋಗಿದ್ದೇನೆ. ದೆಹಲಿಗೆ ಹೋಗುವುದಲ್ಲಿ ತಪ್ಪೇನಿದೆ?, ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದರು.
“ಮುಖ್ಯಮಂತ್ರಿಗಳ ಬದಲಾವಣೆ ನನ್ನ ಉದ್ದೇಶವಲ್ಲ. ಆ ಶಕ್ತಿ ಸಹ ನನಗೆ ಇಲ್ಲ” ಎಂದು ಸ್ಪಷ್ಟಪಡಿಸಿದರು.”ವರಿಷ್ಠರ ಮುಂದೆ ಹೇಳಬೇಕಾಗಿದ್ದನ್ನು ಹೇಳಿದ್ದೇನೆ. ನನಗೆ ಕೆಲವೊಂದು ವಿಚಾರದಲ್ಲಿ ಅಸಮಾಧಾನವಿದೆ. ನನ್ನ ಖಾತೆಯನ್ನು ನನ್ನ ಮಗ ನಿರ್ವಹಣೆ ಮಾಡಬಾರದು” ಎಂದು ಹೇಳುವ ಮೂಲಕ ಬಿ. ವೈ. ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಆಪ್ತರಿಗೆ ಟಾಂಗ್
“ಜವಾಬ್ದಾರಿ ಕೊಡದಿದ್ದರೂ ನನಗೆ ಬೇಸರವಿಲ್ಲ. ಆದರೆ ಹಸ್ತಕ್ಷೇಪವನ್ನು ಸಹಿಸಲ್ಲ. ನನ್ನ ವಿರುದ್ಧ ಮಾತನಾಡುವವರಿಗೆ ನಾನು ಉತ್ತರ ಕೊಡುತ್ತೇನೆ” ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

Girl in a jacket
error: Content is protected !!