ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

Share

ಚೆನ್ನೈ, ಮೇ ೨೭; ತಮಿಳುನಾಡಿನಲ್ಲಿ ಯಾವುದೇ ಸರ್ಕಾರಗಳು ಬಂದರು ಮೊದಲು ಕರ್ನಾಟಕದ ಆಣೆಕಟ್ಟುಗಳ ಮೇಲೆಯೇ ಕಣ್ಣು, ಕಾವೇರಿ,ಮೇಕೆದಾಟು ಹೀಗೆ ಕರ್ನಾಟಕದ ಯೋಜನೆಗಳನ್ನು ವಿರೋಧಿಸುತ್ತಲೇ ಅಲ್ಲಿನ ಜನರ ವಿಶ್ವಾಸ ಪಡೆಯುವ ತಂತ್ರಗಾರಿಕೆ ಮಾಡುತ್ತವೆ ಹೀಗೂ ಕೂಡ ಅದೇ ದಾರಿಯಲ್ಲಿ ಹೊಸ ಸರ್ಕಾರ ಸಾಗಿದೆ ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿರುವ ಹೊಸ ಸರ್ಕಾರ ಯಾವುದೆ ಕಾರಣಕ್ಕೂ ಆಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಖ್ಯಾತೆ ತಗೆದಿದೆ
ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಈ ಕುರಿತು ಮಾತನಾಡಿದ್ದಾರೆ. ಮೇಕೆದಾಟು ಬಳಿ ಅಕ್ರಮವಾಗಿ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ ಎಂದು ಮಂಗಳವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಹೇಳಿತ್ತು.
ಅಕ್ರಮ ನಿರ್ಮಾಣ ಚಟುವಟಿಕೆ ಕುರಿತು ಪರಿಶೀಲನೆ ನಡೆಸಿ ಜುಲೈ ೫ರೊಳಗೆ ವರದಿ ಸಲ್ಲಿಸಲು ಜಂಟಿ ಸಮಿತಿಯನ್ನು ಎನ್‌ಜಿಟಿ ಮಂಗಳವಾರ ರಚನೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶದ ಬಳಿಕ ತಮಿಳುನಾಡು ಯೋಜನೆ ಬಗ್ಗೆ ಮಾತನಾಡಿದೆ.
ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗಿ ಸಮುದ್ರ ಸೇರುವ ಕಾವೇರಿ ನದಿ ನೀರನ್ನು ಸಂಗ್ರಹ ಮಾಡಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದೆ. ತಮಿಳುನಾಡು ಸರ್ಕಾರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲನ್ನು ಏರಿದೆ.
ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್, “ಸರ್ಕಾರ ಕಾನೂನು ತಜ್ಞರ ಜೊತೆ ಈ ಕುರಿತು ಸಮಾಲೋಚನೆ ನಡೆಸಲಿದೆ. ತಮಿಳುನಾಡು ಕರ್ನಾಟಕಕ್ಕೆ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಅಣೆಕಟ್ಟು ಕಟ್ಟಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ.

Girl in a jacket
error: Content is protected !!