ಟೂಲ್ ಪ್ಲಾಜಾದಲ್ಲಿ ಕ್ಯೂ ಜಾಸ್ತಿ ಇದ್ದರೆ,ಟೂಲ್ ಕಟ್ಟಬೇಕಿಲ್ಲ

Share

ನವದೆಹಲಿ,ಮೇ,27: ವಾಹನ ಚಾಲಕರಿಗೆ ಇದೊಂದು ಗುಡ್ ನ್ಯೂಸ್, ಇನ್ನೂ ಮುಂದೆ ಟೂಲ್ ಪ್ಲಾಜಾಗಳಲ್ಲಿ ಕ್ಯೂ ಜಾಸ್ತಿ ಇದ್ದರೆ ಟೂಲ್ ಶುಲ್ಕ ಕಟ್ಟುವ ಹಾಗಿಲ್ಲ.

ಈ ಬಗ್ಗೆ ಶೀಘ್ರ ಹೊಸ ರೂಲ್ಸ್ ಜಾರಿಯಾಗಲಿದ್ದು, 100 ಮೀಟರ್ ಕ್ಯೂ ಇದ್ದರೆ ಟೋಲ್ ಶುಲ್ಕ ಕಟ್ಟಬೇಕಾಗಿಲ್ಲಟ್ರಾಫಿಕ್ ಜಾಮ್ ತಪ್ಪಿಸಲು ಈ ಮಾರ್ಗ ಹುಡುಕಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರವೇ ಹೊಸ ನಿಯಮ ಜಾರಿಗೊಳಿಸಲಿದ್ದು, ಹೆದ್ದಾರಿಗಳ ಪ್ಲಾಜಾದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಕ್ರಮ ಕೈಗೊಂಡಿದೆ. ಪ್ಲಾಜಾದಿಂದ 100 ಮೀಟರ್ ದೂರದಲ್ಲಿ ಹಳದಿ ಗೆರೆ ಎಳೆಯಲಾಗುತ್ತದೆ. ಟೋಲ್ ಹಾದು ಹೋಗುವ ವಾಹನಗಳು ಹಳದಿ ಗೆಳೆಯ ಹೊರಗೆ ನಿಂತಿದ್ದರೆ, ಗೆರೆಯಿಂದ ಒಳಗೆ ನಿಂತಿರುವ ವಾಹನಗಳು ಶುಲ್ಕ ಪಾವತಿಸದೆ ಮುಂದೆ ಸಾಗಬಹುದು ಎನ್ನಲಾಗಿದೆ.

ಟೋಲ್ ಗಳಲ್ಲಿ 10 ಸೆಕೆಂಡ್ ಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಇದ್ದಲ್ಲಿ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಲಾಗಿದೆ.

Girl in a jacket
error: Content is protected !!