ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು…

Share

ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು…

ಕರೊನಾವನ್ನು ಒಳಗೊಂಡಂತೆ ಸಿಡುಬು,ಮೈಲಿ,ದಢಾರ,ಮೊದಲಾದ ಸಂಕ್ರಾಮಿಕ ರೋಗಗಳೆಲ್ಲಾ ಯಾಕೆ ನಮ್ಮ ನಾಡಿನೊಳಗೆ ಸ್ತ್ರೀ ಹೆಸರನ್ನ ಹೊತ್ತು ನಿಲ್ಲುತ್ತವೆ? ಕೊರೊನಾ ಮಹಾ ಮಾರಿ,ಕೊರೊನಾ ಹೆಮ್ಮಾರಿ ಎಂದೆಲ್ಲಾ ಕರೆಸಿಕೊಂಡಿರುವ ಇದರ ಎರಡನೇ ಅಲೆಯಲ್ಲಿ ಕೊಚ್ಚಿಹೋದವರೆಲ್ಲಾ ಬಹುತೇಕ ಯುವಕರು.ತೀವ್ರ ಅಸಡ್ಡೆ,ಹುಂಬತನ,ಅಶಿಸ್ತಿನಿಂದಾಗಿ ಇಲ್ಲವೇ ದುರಬ್ಯಾಸಗಳಿಂದಾಗಿ, ಇತರರನ್ನ ರಕ್ಷಿಸಲು ಹೆಣಗಿದಾಗ,ಸದ್ದಿಲ್ಲದೇ ಬಲಿಯಾದವರ ಬಗೆ ಬಗೆದಂತೆ ಬಹುರೂಪಿಯಾಗಿದೆ.
” ತಾಯಿ ರಕ್ಕಸಿಯಾದಂತೆ” ಕಾಣುವ ಈ ವೈರಸ್ ದಾಳಿಯು ಈಗ ಹೆಚ್ಚು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗಗಳನ್ನ ಬಾಧಿಸುತ್ತಿರುವುದರ ಹಿನ್ನೆಲೆಯೇನು? ಉತ್ತರ ಸರಳವಿಲ್ಲ.ಆಧುನಿಕತೆ ಇವರನ್ನ ದೇಸೀತನದಿಂದ ದೂರ ಮಾಡಿರುವ ಕ್ರಮವೂ ಇವರ ರೋಗ ನಿರೋಧಕ ಶಕ್ತಿ ಕುಂದಲು ಕಾರಣವಾಗಿರುವುದಂತೂ ಸತ್ಯ.ಆಧುನಿಕತೆ ತಂದ ಕಾಂಕ್ರೀಟ್ ಕಾಡು, ಬಗೆ ಬಗೆಯ ಪರಿಸರ ನಾಶ,ವ್ಯವಸ್ಥೆಯ ಜೊತೆ ಜೊತೆಗೆ ಜನರ ಅಪಾರ ಅಸಡ್ಡೆ ತಂದಿತ್ತ ತೆರಿಗೆಯಂತೆ ಈ ರೋಗ ಕಾಣುತ್ತಿದೆ.ನಗರಗಳಲ್ಲಿ ಸೆಲೆಬ್ರೆಟಿಗಳಂತೆ ಮೆರೆಯುತಿದ್ದ ಗಂಡು ದೈವಗಳು ಬಾಗಿಲು ಹಾಕಿಕೊಂಡು ಒಳಗೇ ಕುಳಿತರೆ ಹಳ್ಳಿಯ ಬಯಲ ಹೆಣ್ಣು ದೈವಗಳು ನಮಗೆದುರಾದ ಗತಿ ನಿಮಗೂ ಬಂತಲ್ಲ ಅಂತ ಮುಸಿ ಮುಸಿ ನಗುವಂತಾಗಿದೆ.


ಎಲ್ಲಾ ಜಾತಿ ಮತ್ತು ಎಲ್ಲಾ ವರ್ಗಗಳನ್ನ ಆವರಿಸಿದ ಜನಪ್ರಿಯ ದೈವ ಹನುಮಂತ .ಹನುಮನಿಲ್ಲದ ಊರಿಲ್ಲ ಎಂಬಂತೆಯೇ ಭೀಮನಿಲ್ಲದ ಕುಲವಿಲ್ಲ ಎಂಬಂತೆ ಎಲ್ಲಾ ಸಮುದಾಯದೊಳಗೂ ಇಬ್ಬರೂ ಆವರಿಸಿದ್ದಾರೆ.ಕುಸ್ತಿಗೆ ,ದೇಹ ಶಿಸ್ತಿಗೆ ಹೆಸರಾದ ಈ ಪಾತ್ರಗಳು ಗರಡಿ ಮನೆಗಳ ಮುಖ್ಯ ಆಕರ್ಷಣೆಗಳು. ಗರಡಿ ಮನೆಗಳ ಕಥನಗಳು ಜಾತ್ಯಾತೀತ ಭಾರತದ ಚಲುವನ್ನ ಹೊತ್ತು ನಿಂತಂತೆ ಕಾಣುತ್ತವೆ.ಕೃಷ್ಣ-ಬಲರಾಮ,ವಾಲಿ-ಸುಗ್ರೀವ,ಹನುಮಂತ,ಜಾಂಬವಂತ,ಭರತ-ಬಾಹುಬಲಿ,ಮಯೂರ,ಪುಲಕೇಶಿ,ಮದಕರಿ, ದೇವರಾಯ,ಕೃಷ್ಣದೇವರಾಯ,ರಣಧೀರ ಕಂಠೀರವ,ಸಂಗೊಳ್ಳಿ ರಾಯಣ್ಣ,ಚಂದ್ರಶೇಖರ್ ಆಜಾದ್,ಗಾಮ,ಧಾರಾಸಿಂಗ್ ಮೊದಲಾದವರ ಹೆಸರುಗಳು ಗರಡಿ ಕಥನಗಳ ಚರಿತ್ರೆಯಂತೆ ಕಾಣುತ್ತವೆ.ಕಾವ್ಯಗಳಲ್ಲೂ ಮಲ್ಲಯುದ್ದ ಅರವತ್ತನಾಲ್ಕು ವಿದ್ಯೆಗಳಲ್ಲಿ ಒಂದೆಂದು ಇದನ್ನ ರಾಜನಾದವ ಕಲಿಯಬೇಕಿತ್ತೆಂದು ಹೇಳುತ್ತವೆ.ಜನರ ಹೀರೋಗಳಂತೆ ಕಾಣುತಿದ್ದ ಸಂತರೂ ಈ ಗರಡಿಯ ಕಲೆಯ ಪ್ರವೀಣರೆಂಬುದನ್ನ ಶರೀಫ,ಹರಿಹರ,ಭರತೇಶನ ಕಥನಗಳು ಹೇಳುತ್ತವೆ.ಹರಿಹರನ ಮುಂಡಿಗೆಯ ಪವಾಡ,ಭರತೇಶನ ಕಿರುಬೆರಳ ಮಣಿಸುವ ಪ್ರಸಂಗ ಪವಾಡದ ಕಥನಗಳಂತೆ ಕಂಡರೂ ಅವು ಮೂಲದಲ್ಲಿ ಗರಡಿ ಶಕ್ತಿಯ ಕಲ್ಪನೆಗಳಾಗಿವೆ.
ಭಾರತದಲ್ಲಿ ಮುಸ್ಲಿಮರೆಂದರೆ ಅನುಮಾನಿತ ಚರಿತ್ರೆಯನ್ನೇ ಬಿಚ್ಚುವ ಈ ಹೊತ್ತಿನಲ್ಲಿ ಅವರ ಸಾಧಕ ಕಥೆಗಳು ಈ ಗರಡಿ ಕಲೆಯಲ್ಲಿರುವುದನ್ನ ಕಾಣಬಹುದಾಗಿದೆ.ಭಾರತದ ಕುಸ್ತಿ ಪರಂಪರೆಯಲ್ಲಿ ದೊಡ್ಡ ಹೆಸರು ಪೈಲ್ವಾನ್ ಗಾಮನದು.ಗಾಮ ಭಾರತಕ್ಕೆ ಕುಸ್ತಿಯಲ್ಲಿ ವಿಶ್ಬ ಚಾಂಪಿಯನ್ ಷಿಪ್ ತಂದುಕೊಟ್ಟ ಮೊದಲ ಭಾರತೀಯ.ಪಂಜಾಬ್ ನ ಅಮೃತಸರದ ಈತನ ಮೂಲ ಹೆಸರು ಗುಲಾಮ್ ಮಹಮದ್. ದೇಹ ದಂಡನೆಯೇ ಪ್ರಧಾನವಾದ ಕುಸ್ತಿಯಲ್ಲಿ ಮೈಯ್ಯನ್ನ ಬಂಡೆಯನ್ನಾಗಿಸಿಕೊಳ್ಳುವ ಹಲವಾರು ಚಿತ್ರಗಳು ನಮ್ಮ ನಮ್ಮ ಬಾಲ್ಯದ ಹಳ್ಳಿಗಳನ್ನ ನೆನೆದರೆ ಕಾಣುತ್ತವೆ.ಬಹುದೊಡ್ಡ ಗುಂಡುಗಳನ್ನ,ಪಲ್ಲಗಳ ಚೀಲಗಳನ್ನ ಹೊರುವವರು,ಇಪ್ಪತ್ತು ಮುವ್ವತ್ತು ಕೊಡದ ಹಂಡೆಗಳನ್ನ ಹೊತ್ತು ನೀರು ತರುತ್ತಿದ್ದವರು,ಟಗರು ಎತ್ತುಗಳನ್ನ ಹೊತ್ತು ಗುಡ್ಡ ಇಳಿಯುತ್ತಿದ್ದವರು,ಮತ್ತೊಬ್ಬರನ್ನ ಮೈಮೇಲೆ ಇರಿಸಿಕೊಂಡು ನೂರಾರು ದಂಡ ಹೊಡೆಯುತ್ತಿದ್ದವರು,ವಿಸ್ಮಯ ಹುಟ್ಟಿಸುವಂತಹ ಇವರ ಊಟಗಳ ಪ್ರಸಂಗ ಅಲ್ಲಮನೆದುರ ಬಂದ ಗೋರಕ್ಷನನ್ನ ನೆನಪಿಸುತ್ತದೆ.ಈ ದೇಹ ಸಿರಿಯಿಂದಲೇ ರಾಮ ಕದ್ದು ಬಾಣ ಬಿಡಬೇಕಾಯಿತೇನೋ? ಕೃಷ್ಣ ಇಂತಹ ಹಲವರನ್ನ ಯಾಮಾರಿಸಿ ಮಣಿಸಬೇಕಾಯಿತು.ಇಲ್ಲಿ ಜನಪದರ ಶಕ್ತಿಗಿಂತ ಯುಕ್ತಿಮೇಲು ಎಂಬ ಯುಕ್ತಿಯೂ ಇವರನ್ನ ಮೇಲ್ಪಂಕ್ತಿಗೇರಿಸಿದೆ. ಕುಸ್ತಿಯ ಐಕಾನ್ ನಂತೆ ಕಾಣುತಿದ್ದ ಗಾಮ ಚಚ್ಚಿ ತಿನ್ನುವ ಬದಾಮಿ ಕಾಯಿಯನ್ನ ಬೆರಳುಗಳಿಂದಲೇ ಹೊಸಕಿ ಸಿಪ್ಪೆ ತೆಗೆದು ತಿನ್ನುತ್ತಿದ್ದನಂತೆ!,ಕಬ್ಬಿಣದ ಮಳೆಗಳನ್ನ ಅಂಗೈಲಿ ಹಿಡಿದು ಬಾಗಿಸುತ್ತಿದ್ದನಂತೆ.ಹತ್ತು ಕೆ.ಜಿ. ಹೊರಲಾರದ ನಗರದವರೆದುರು ಈ ಸಂಗತಿಗಳು ಕಲ್ಪನೆಗಳಂತೆಯೇ ಕಾಣುತ್ತವೆ.ಗಾಮನನ್ನ ವಿಶ್ವ ಚಾಂಪಿಯನ್ ಮಾಡಿದವನು ಬಂಗಾಲದ ಶ್ರೀಮಂತ ಸನತ್ ಕುಮಾರ್ ಮಿಶ್ರ.ಇಂಗ್ಲೆಂಡಿನಲ್ಲಿ ನಡೆದ ಈ ಚಾಂಪಿಯನ್ ಷಿಪ್ ನಲ್ಲಿ ಗಾಮ ಎತ್ತರ ಮತ್ತು ತೂಕದಲ್ಲಿ ಕಡಿಮೆ ಇದ್ದಾನೆಂದು ತಿರಸ್ಕರಿಸಲಾಯಿತು.ಈ ನಿರಾಕರಣಕ್ಕೆ ಕೋಪಗೊಂಡ ಗಾಮ ನಮ್ಮ ಜಾತ್ರೆಗಳಲ್ಲಿ ಪರ ಊರಿನ ಪೈಲ್ವಾನರು ಬಂದು ಪರಸೀ ಮಟ್ಟಿ ಕಡೇವು ಹಿಡಿದು ಅಕಾಡವನ್ನ ಮೂರು ಸುತ್ತು ಸುತ್ತಿ ಯಾರು ಬೇಕಾದರೂ ಈ ಊರಿಂದ ಕುಸ್ತಿಗೆ ಇಳಿಯ ಬಹುದು ಎಂಬಂತೆ ಅಂದು ಗಾಮ ಕೂಡಾ ಅಲ್ಲಿ ಇದೇ ರೀತಿ ಇಂಗ್ಲೆಂಡಿಗೆ ಸವಾಲು ಹಾಕಿದ. ಗಾಮನ ಸವಾಲು ಸ್ವೀಕರಿಸಿ ಎದುರು ಬಂದ ಮೂರು ಜನ ದೈತ್ಯ ಕುಸ್ತಿ ಪಟುಗಳನ್ನ ಎರಡೇ ನಿಮಿಷದಲ್ಲಿ ಚಿತ್ ಮಾಡಿದನಂತೆ ಮೊದಲದಿನ ಹೀಗೆ ಮೂವರನ್ನ ಸೋಲಿಸಿ ಅಚ್ಚರಿ ಮೂಡಿಸಿದ ಗಾಮ.ಎರಡನೇ ದಿನದಲ್ಲಿ ಹನ್ನೆರಡು ಜನರನ್ನ ಮಣ್ಣು ಮುಕ್ಕಿಸಿ ದಿಗ್ಭ್ರಮೆ ಹುಟ್ಟಿಸಿದ.ಮೂರನೇ ದಿನ ಎದುರಾದ ಅಮೇರಿಕಾದ ಪ್ರಸಿದ್ಧ ಕುಸ್ತಿ ಪಟು ಇ. ರೋಲರ್ನ ನನ್ನ ಹದಿನೈದು ನಿಮಿಷದಲ್ಲಿ ನೆಲಕಚ್ಚಿಸಿದ್ದಲ್ಲದೇ ಆಸ್ಟ್ರೇಲಿಯಾದ ಜಿಬಿಸ್ಕೋ ಗಾಮನ ಹೊಡೆತಕ್ಕೆ ತತ್ತರಿಸಿ ನೆಲಕಟ್ಟಲು ಚಿತ್ ಮಾಡಲು ಅವಕಾಶ ನೀಡದ ರೆಫರಿಗಳು ಆಟವನ್ನ ಮರುದಿನಕ್ಕೆ ಮುಂದೂಡಿದರಂತೆ ಆದರೆ ಗಾಮನ ಪೆಟ್ಟಿಗೆ ಭುಜದ ಮೂಳೆ ಮುರಿಸಿಕೊಂಡಿದ್ದ ಜಿಬಿಸ್ಕೋ ಅಕಾಡಕ್ಕೆ ಇಳಿಯಲೇ ಇಲ್ಲ.ರೆಫರಿಗಳು ಬೇರೆ ದಾರಿ ಕಾಣದೆ ಗಾಮನಿಗೆ ವಿಶ್ವ ಚಾಂಪಿಯನ್ ಪಟ್ಟ ನೀಡಲೇ ಬೇಕಾಯಿತು(೧೯೧೦).


ಕ್ರಾಂತಿಕಾರಿ ಕುಸ್ತಿ ಪಟು ಚಂದ್ರ ಶೇಖರ್ ಆಜಾದ್ ಕಥೆ ಯಾರಿಗೆ ಗೊತ್ತಿಲ್ಲ? ನನ್ನ ಹೆಸರು ಅಜಾದ್,ನನ್ನ ಮನೆ ಜೈಲು ಎಂದು ಕೂಗಿ ಹೇಳುತ್ತಿದ್ದ ಅಜಾದ್ ಬಾಲಕನಿದ್ದಾಗಲೇ ಬ್ರಿಟೀಷ್ ಅಧಿಕಾರಿಗೆ ಭಾರತ ಬಿಟ್ಟು ತೊಲಗಿ ಎಂದು ಕೂಗಿದವ.ಹುಡುಗನಿಗೆ ಒಂದು ರಾತ್ರಿ ಸೆಲ್ ಗೆ ಹಾಕಿದರೆ ಚಳಿ ಮತ್ತು ಸೊಳ್ಳೆಯ ಕಾಟಕ್ಕೆ ಬುದ್ಧಿ ಬರುತ್ತದೆ ಎಂದು ತಳ್ಳಲು ರಾತ್ರಿ ಯಿಡೀ ಸೆಲ್ ನೊಳಗೆ ಸಾಮುತೆಗೆದ ಹುಡುಗ ಬೆಳಿಗ್ಗೆ ಗೆಲುವಿನ ಕಳೆ ಹೊತ್ತು ಬಂದ ಅಧಿಕಾರಿಯನ್ನ ಸಿಂಹದಂತೆ ಸೆಟೆದು ನಿಂತು ಇನ್ನಷ್ಟೂ ಗಟ್ಟಿಯಾಗಿ ಕೂಗಿ ಮುಖ
ಕನ್ನಡ ನಾಡಿನಲ್ಲಿ ಪುರುಷರಂತೆಯೇ ಮಹಿಳಾ ಪೈಲ್ವಾನರೂ ಇದ್ದರು ಎಂಬ ಸಂಗತಿಗೆ ಸಾಕ್ಷಿಯಂತೆ ಶಿಕಾರಿಪುರದ ಶಾಸನ ಕಾಣುತ್ತದೆ.೧೪೪೬ ರ ಈ ಶಾಸನವು ತನ್ನ ತಂದೆ ಮಾದೇಗೌಡನನ್ನ ಕೊಂದವನನ್ನ ಸೋಲಿಸಿ ಹರಿಯಕ್ಕ ಸ್ವರ್ಗಸ್ಥಳಾದಳೆಂಬ ಸಂಗತಿಯನ್ನ ಹೊತ್ತಿದೆ.ಆಕೆಯ ಚಿಕ್ಕಪ್ಪ ಹಾಕಿಸಿದ ಈ ಶಾಸನವು ಹರಿಯಕ್ಕ ಕುಸ್ತಿ ಕಾಳಗಕ್ಕೆ ಹೆಸರಾಗಿದ್ದ ಮಹಿಳೆ ಎಂಬ ದಾಖಲೆಯೇ ಈಕೆಯನ್ನ ಕನ್ನಡ ನಾಡಿನ ಮೊದಲ ಮಹಿಳಾ ಕುಸ್ತಿ ಪಟು ಎಂಬ ಪಟ್ಟ ನೀಡಲಿಕ್ಕೂ ಕಾರಣವಾಗಿದೆ.ವಿಜಯ ನಗರ ಆಸ್ಥಾನದಲ್ಲಿಯೂ ಒಬ್ಬೊಬ್ಬ ರಾಣಿಯರಿಗೆ ಕುಸ್ತಿ ಪಟುಗಳಾಗಿದ್ದ ಅಂಗರಕ್ಷಕಿಯರಿದ್ದರು ಇವರು ಹನ್ನೆರಡರಿಂದ ಹದಿನಾಲ್ಕು ಜನರನ್ನ ಏಕಕಾಲಕ್ಕೇ ಮಣಿಸಬಲ್ಲ ತಾಕತ್ತು ಹೊಂದಿದ್ದರು ಎಂಬ ಸಂಗತಿಯನ್ನ ಪ್ರೊ.ದೇವರಕೊಂಡಾ ರೆಡ್ಡಿಯವರು ಉಲ್ಲೇಖಿಸಿದ್ದಾರೆ.ವಿಜಯ ನಗರ ಕಾಲದಲ್ಲಿ ಹನುಮನ ಗರಡಿಯಂತೆ ಚಂಡಿಯನ್ನ ಪೂಜಿಸುತ್ತಿದ್ದ ಮಹಿಳಾ ಗರಡಿಗಳೂ ಇದ್ದವು ಎಂಬ ಸಂಗತಿಗಳೂ ಇದಕ್ಕೆ ಪೂರಕವಾಗಿವೆ.
ಎರಡನೇ ದೇವರಾಯ ಹಾಗೂ ಕೃಷ್ಣದೇವರಾಯರ ಗರಡಿ ಕಸರತ್ತನ್ನ ಬಿಂಬಿಸುವ ಚಟುವಿಕೆಗಳನ್ನ ಇಲ್ಲಿನ ಇತಿಹಾಸದ ಪುಟಗಳು ಹೇಳುತ್ತವೆ.ಹಂಪಿಯ ನವರಾತ್ರಿ ಉತ್ಸವಗಳು ಮೈಸೂರಿನ ದಸರಾ ಉತ್ಸವಗಳು ಕುಸ್ತಿಯ ಕಾಳಗವನ್ನ ಪ್ರಮುಖ ಆಚರಣೆಯನ್ನಾಗಿಸಿಕೊಂಡಿವೆ. ಹಂಪಿಯ ನವರಾತ್ರಿ ಉತ್ಸವದ ಕುಸ್ತಿ ಮತ್ತು ಮುಷ್ಟಿ ಕಾಳಗಳ ಸಂಗತಿಗಳು ಗಮನಾರ್ಹವಾಗಿವೆ.” ನಮ್ಮ ಕುಸ್ತಿಯಂತೆ ಅವರು ಕುಸ್ತಿ ಮಾಡುವುದಿಲ್ಲ.ಅವರು ಗುದ್ದುಗಳನ್ನ ಕೊಡುತ್ತಾರೆ ಆ ಗುದ್ದುಗಳು ಎಷ್ಟು ಭಯಂಕರವಾಗಿರುತ್ತವೆಂದರೆ ಒಮ್ಮೊಮ್ಮೆ ಕಣ್ಣು, ಮುಖ, ಕಿವಿಗಳನ್ನ ಹರಿದು ಹಾಕುತ್ತವೆ” ತ.ರಾ.ಸು. ಅವರ ದುರ್ಗಾಸ್ಥಮಾನದ ಮದಕರಿಯ ಸಾಮುಗಳು ಮತ್ತು ಊಟದ ರೀತಿಯನ್ನ ,ಬಿ.ಎಲ್.ವೇಣು ಅವರ ಮತ್ತಿ ತಿಮ್ಮಣ್ಣ ನಾಯಕನ ಕುಸ್ತಿ ಕಸರತ್ತನ್ನ ಓದಿಯೇ ಸವಿಯುವಂತಿವೆ.
ಪೈಲ್ವಾನರೆಂದು,ಉಸ್ತಾದ್ ಗಳೆಂದು ಕರೆಸಿಕೊಳ್ಳುತ್ತಿದ್ದ ಇವರನ್ನ ಹಿಂದೆ ಪ್ರಭುತ್ವಗಳು ಸಾಕುತಿದ್ದವು.ಹಳ್ಳಿಗಳಲ್ಲೂ ತಾಲೂಕುಗಳಲ್ಲೂ ಇವರನ್ನ ಮನೆ ಮಕ್ಕಳಂತೆ ಕಾಣುತ್ತಿದ್ದರು ಇವರಿಗೆ ಯಾವುದೇ ಬಗೆಯ ಊಟದ ನಿರ್ಬಂಧವಿರಲಿಲ್ಲ.ಅಂಗಡಿಗಳು ಹೊಟೇಲುಗಳು ಇವರಿಗೆ ಮುಕ್ತವಾಗಿ ನೀಡುತ್ತಿದ್ದವು.ರಾಜ ಪ್ರಭುತ್ವಗಳು ಮತ್ತು ದೇಶೀ ಪ್ರಭುತ್ವಗಳು ಕರಗಿದಂತೆಲ್ಲಾ ಕುಸ್ತಿ ಪಟುಗಳೂ ಕರಗುತ್ತಾ ಬಂದರು.ಕಾರಣ ಕುಸ್ತಿ ಆಡುತಿದ್ದವರು ಬಡತನಗಳ ಹಿನ್ನೆಲೆಯಿಂದ ಬಂದವರಾಗಿದ್ದರು.ಕುಸ್ತಿ ಗೆದ್ದು ಬಂದವರನ್ನ ಆರತಿ ಬೆಳಗಿ ಛತ್ರಿ ಹಿಡಿದು ಊರವರೆಲ್ಲಾ ಅದಕ್ಕೆ ದುಡ್ಡು ಅಂಟಿಸುತ್ತ ಊರು ತುಂಬಾ ಮೆರವಣಿಗೆ ಮಾಡುತಿದ್ದ ರೀತಿ ರಿವಾಜುಗಳು ಈಗೀಗ ದೂರಾಗಿಬಿಟ್ಟಿವೆ.

Girl in a jacket
error: Content is protected !!