ನಾಳೆ ಒಂದೇ ದಿನ ಚಂದ್ರಗ್ರಹಣ,ಬ್ಲಡ್ ಮೂನ್ ಗೋಚರ!

Share

ನವದೆಹಲಿ, ಮೇ ೨೫: ನಾಳೆ ಈ ವರ್ಷದ ಮೊದಲ ಚಂದ್ರಗ್ರಹಣ ಗೋಚರಿಸಲಿದ್ದು ಇದರ ಜೊತೆಗೆ ಬ್ಲಡ್ ಮೂರನ್ ಕೂಡ ಗೋಚರವಾಘಲಿದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ.
ಹುಣ್ಣಿಮೆಯ ದಿನವಾದ ನಾಳೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ ಹಾಗೆಯೇ ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನು ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭಿಸಲಿದೆ ಎಂದು ಹೇಳಿದೆ.


ಭಾರತದ ಈಶಾನ್ಯ ಭಾಗಗಳು (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ ೨೬ ರಂದು ಭಾಗಶಃ ಚಂದ್ರ ಗ್ರಹಣ ಗೋಚರಿಸುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ.
ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಇದು ಗೋಚರಿಸುತ್ತದೆ.


ಸೂಪರ್ ಮೂನ್ ಈ ವರ್ಷದ ಅತಿ ಸಮೀಪದ ಸೂಪರ್ ಮೂನ್. ಈ ದಿನ ಚಂದ್ರ ಭೂಮಿಗೆ ಸುಮಾರು ೩,೫೭,೪೬೨ ಕಿ.ಮೀ. ಹತ್ತಿರ ಬರಲಿದ್ದಾನೆ.
ಸೂಪರ್ ಮೂನ್ ಕುರಿತು ಮಾಹಿತಿ
ಭೂಮಿಯ ಸನಿಹಕ್ಕೆ ಚಂದ್ರ ಬಂದಿ ಎಂದಿಗಿಂತ ದೊಡ್ಡದಾಗಿ ಕಾಣುವುದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಇದು ಹುಣ್ಣಿಮೆಯ ದಿನ ಘಟಿಸುತ್ತದೆ. ಭೂಮಿಯ ನೆರಳು ಹುಣ್ಣಿಮೆಯ ದಿನ ಚಂದ್ರನ ಏಲೆ ಬಿದ್ದಾಗ ಚಂದ್ರ ಮರೆಯಾಗುತ್ತಾನೆ, ಇದನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಭೂಮಿಯ ಸಂಪೂರ್ಣ ನೆರಳಿನಿಂದ ಚಂದ್ರ ಆವೃತ್ತವಾಗಿ ಕೆಂಪುಬಣ್ಣ ಗೋಚರವಾದರೆ ಅದನ್ನು ಬ್ಲಡ್ ಮೂನ್ ಎಂದು ಕರೆಯುತ್ತಾರೆ.
ಗ್ರಹಣ ಕಾಲ
ಗ್ರಹಣದ ಭಾಗಶಃ ಹಂತವು ಮಧ್ಯಾಹ್ನ ೩.೧೫ ರ ಸುಮಾರಿಗೆ ಪ್ರಾರಂಭವಾಗುತ್ತದೆ ಮತ್ತು ೬.೨೩ರವರೆಗೆ ಇರಲಿದೆ ಎಂದು ಸಚಿವಾಲಯ ತಿಳಿಸಿದೆ. ಸಂಜೆ ೫.೩೮ರಿಂದ ಪೋರ್ಟ್ ಬ್ಲೇರ್‌ನಿಂದ ೪೫ ನಿಮಿಷಗಳ ಕಾಲ ಗ್ರಹಣ ವೀಕ್ಷಿಸಬಹುದು, ಸಂಜೆ ೬.೨೧ರಿಂದ ಪುರಿ ಮತ್ತು ಮಾಲ್ಡಾದಿಂದ ನೋಡಬಹುದು, ಆದರೆ ಎರಡು ನಿಮಿಷ ಮಾತ್ರ ಕಾಣಿಸುತ್ತದೆ. ಸಂಪೂರ್ಣ ಚಂದ್ರಗ್ರಹಣ ಸಂಜೆ ೪.೩೯ಕ್ಕೆ ಪ್ರಾರಂಭವಾಗಿ ಸಂಜೆ ೪.೫೮ಕ್ಕೆ ಕೊನೆಗೊಳ್ಳಲಿದೆ.೦
ಫೆಸಿಫಿಕ್ ಸಾಗರದ ಮಧ್ಯಭಾಗ, ಆಸ್ಟ್ರೇಲಿಯಾ, ಏಷ್ಯಾದ ಪೂರ್ವ ಕರಾವಳಿ, ಅಮೆರಿಕದ ಪಶ್ಚಿಮ ಕರಾವಳಿ, ಈಶಾನ್ಯ ಭಾರತದಲ್ಲಿ ಚಂದ್ರಗ್ರಹಣ, ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ಕಾಣಿಸಲಿದೆ.

ಮುಂದಿನ ಚಂದ್ರಗ್ರಹಣ
ಮುಂದಿನ ಚಂದ್ರಗ್ರಹಣವು ನವೆಂಬರ್ ೧೯ ರಂದು ಭಾರತದಿಂದ ಗೋಚರಿಸುತ್ತದೆ ಮತ್ತು ಇದು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಈಶಾನ್ಯ ಭಾಗಗಳಿಂದ ಚಂದ್ರೋದಯದ ನಂತರ ಭಾಗಶಃ ಹಂತದ ಅಂತ್ಯವು ಬಹಳ ಕಡಿಮೆ ಅವಧಿಗೆ ಗೋಚರಿಸುತ್ತದೆ.

Girl in a jacket
error: Content is protected !!