ನವೀನ್‌ಕುಮಾರ್
ಸದ್ಯ ಜನರಿಗೆ ಮನೆಗಳಲ್ಲೇ ಮನೊರಂಜನೆ ಎಂದರೆ ಟಿವಿ..ಅದಲ್ಲೂ ಧಾರವಾಹಿಗಳ ಸಂಖ್ಯೆಯೇ ಹೆಚ್ಚು ಹೀಗಿರುವಾಗ ಧಾರವಾವಹಿಗಳು ಲಾಕ್‌ಡೌನ್‌ನಿಂದ ಆತಂಕದ ಛಾಯೆ ಮೂಡಿತ್ತು ಆದರೆ ಇದಕ್ಕೆ ಪರ್ಯಾಯ ಮಾರ್ಗ ಹುಡುಕಿರುವ ಟಿವಿ ಆಡಳಿತಾಧಿಕಾರಿಗಳು ಧಾರವಾಹಿಗಳ ಶೂಟಿಂಗ್‌ಗಳನ್ನು ಹೈದರಾಬಾದ್‌ನಲ್ಲಿ ನಡಡೆಸಲಿವೆ ಹೀಗಾಗಿ ಅಲ್ಲಿಂದಲೇ ಧಾರವಾಹಿಗಳು ಬರಲಿವೆ.
ಕಳೆದ ಎರಡು ದಿನಗಳ ಹಿಂದೆ ಟಿವಿ ಮನೊರಂಜನೆಗಳ ಮುಖ್ಯಸ್ಥರುಗಳು ಸಭೆ ನಡೆಸಿ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿವೆ ಇದರ ಪರಿಣಾಮ ಸದ್ಯ ಲಾಕ್‌ಡೌನ್ ಇದ್ದರೂ ಕೂಡ ಧಾರವಾಹಿಗಳು ಅರ್ಧಕ್ಕೆ ನಿಲ್ಲುವುದಿಲ್ಲ ಅಥವ ಲಾಕ್‌ಡೌನ್ ಆದಮೇಲೆ ಮುಂದುವರೆಯುವುದಿಲ್ಲ ಅವು ಎಂದಿನಂತೆ ಪ್ರಸಾರವಾಗಲಿವೆ.
ಕಲರ್ಸ್ ಕನ್ನಡ ಚಾನೆಲ್‌ನ ಕನ್ನಡತಿ, ಗಿಣಿರಾಮ್ ಮತ್ತು ಮಂಗಳ ಗೌರಿ ಮದುವೆ ಧಾರಾವಾಹಿಗಳ ತಂಡಗಳು , ಜೀ ಕನ್ನಡದ ಜೊತೆ ಜೊತೆಯಲಿ, ನಾಗಿಣಿ ಮತ್ತು ಗಟ್ಟಿಮೇಳ ತಂಡಗಳು ಆಗಲೇ ಹೊರಡುವ ತಯಾರಿಯಲ್ಲಿವೆ. ಏಷ್ಯಾನೆಟ್ ಸುವರ್ಣ ಚಾನೆಲ್‌ನ ಜೀವ ಹೂವಾಗಿದೆ, ಇಂತಿ ನಿಮ್ಮ ಆಶಾ ಮತ್ತು ಸರಸು ತಂಡಗಳು ಈಗ ಹೈದರಾಬಾದ್ ಸೇರಿಕೊಂಡಿದ್ದು ಅಲ್ಲಿ ಚಿತ್ರೀಕರಣ ಆರಂಭಿಸಿವೆ.
ಈ ಎಲ್ಲಾ ಧಾರಾವಾಹಿಗಳಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗವಿದೆ. ಕಳೆದ ಬಾರಿ ಅನಿವಾರ್ಯವಾಗಿ ಧಾರಾವಾಹಿಗಳ ಶೂಟಿಂಗ್ ದೀರ್ಘಕಾಲದವರಗೆ ನಿಂತು ಅದರಿಂದ ತಯಾರಕರು ಸಾಕಷ್ಟು ನಷ್ಟ ಅನುಭವಿಸಿದ್ದರು. ವೀಕ್ಷಕರು ಕೂಡಾ ನೆಚ್ಚಿನ ಸೀರಿಯಲ್ ಕತೆ ಏನಾಯ್ತು ಅನ್ನೋ ಕುತೂಹಲಕ್ಕೆ ಯಾವುದೇ ಉತ್ತರ ಸಿಗದೆ ಬೇಸರಿಸಿಕೊಂಡೇ ಸುಮ್ಮನಾಗಿದ್ದರು. ಆದರೆ ಈ ಬಾರಿ ಅಂಥಾ ದೊಡ್ಡ ಹೊಡೆತಗಳು ಬಾರದಂತೆ ತಡೆಯಲು ಚಾನೆಲ್‌ಗಳು ಹೈದರಾಬಾದ್ ಮಾರ್ಗ ಹಿಡಿದಿವೆ.
ಮೊದಲಿಗೆ ೧೫ ದಿನಗಳ ಶೆಡ್ಯೂಲ್ ಪ್ಲಾನ್ ಮಾಡಿಕೊಂಡು ಧಾರಾವಾಹಿ ತಂಡಗಳು ಹೈದರಾಬಾದ್ ಹೋಗುತ್ತಿವೆ. ೧೫ ದಿನಗಳ ಶೂಟಿಂಗ್ ಮಾಡಿದ್ರೆ ಕನಿಷ್ಟ ೧ ತಿಂಗಳಿಗಾಗುಷ್ಟು ಎಪಿಸೋಡ್‌ಗಳು ರೆಡಿಯಾಗುತ್ತವೆ. ಧಾರಾವಾಹಿಯ ಕತೆ ಮತ್ತು ಚಿತ್ರಕತೆಗಳನ್ನು ಇದಕ್ಕೆ ತಕ್ಕಂತೆ ಬದಲಿಸಿಕೊಳ್ಳಲಾಗಿದೆ. ತಂಡದ ಯಾರಿಗೆ ಸೋಂಕು ತಗುಲಿದೆ, ಯಾವ ಪಾತ್ರಧಾರಿಯ ಆರೋಗ್ಯ ಹೇಗಿದೆ ಎನ್ನುವುದರ ಆಧಾರದ ಮೇಲೆ ಕತೆ ಹೆಣೆಯಲಾಗುತ್ತಿದೆ.
ಅತ್ಯಂತ ಅಗತ್ಯವೆನಿಸುವ ಕೆಲವೇ ಕೆಲವು ಜನರನ್ನೊಳಗೊಂಡ ತಂಡಗಳು ಇದರಲ್ಲಿ ಇರಲಿವೆ. ಪ್ರತೀ ತಂಡದ ಎಲ್ಲಾ ಸದಸ್ಯರೂ ಇಲ್ಲಿಂದ ಹೊರಡುವ ೪೮ ಗಂಟೆಗಳ ಮುಂಚೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ಜೊತೆಗೆ ಹೊರಡುತ್ತಾರೆ. ಅಲ್ಲಿಂದ ವಾಪಸ್ ಬರುವ ೪೮ ಗಂಟೆಗಳ ಮುನ್ನ ಮತ್ತೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ರಿಪೋರ್ಟ್ ಜೊತೆಗೇ ಮರಳುತ್ತಾರೆ. ಇಲ್ಲದಿದ್ದರೆ ಎರಡೂ ರಾಜ್ಯಗಳ ಗಡಿಗಳನ್ನು ದಾಟುವುದು ಸಾಧ್ಯವಾಗುವುದಿಲ್ಲ.
ಧಾರಾವಾಹಿ ತಯಾರಕರಿಗೆ ಇದು ಸ್ವಲ್ಪ ಹೆಚ್ಚಿನ ಖರ್ಚು ಬೀಳುತ್ತದೆ. ಅಂದಾಜಿನ ಪ್ರಕಾರ ಒಂದಕ್ಕೆ ಒಂದೂವರೆ ಪಟ್ಟಿನಷ್ಟು ಖರ್ಚಾಗುತ್ತದೆ. ಆದರೂ ಸಂಪೂರ್ಣ ಕೆಲಸ ನಿಲ್ಲಿಸುವ ಬದಲು ಇದು ಅತ್ಯಂತ ಸೂಕ್ತ ಬದಲಿ ಮಾರ್ಗವಾಗಿದೆ. ಹೈದರಾಬಾದ್‌ಗೆ ಹೋಗುವ ತಂಡದ ಉಳಿಯುವ ವ್ಯವಸ್ಥೆ, ಊಟ-ತಿಂಡಿ ಮುಂತಾದ ಎಲ್ಲಾ ವ್ಯವಸ್ಥೆಗಳಿಗೆ ಹೆಚ್ಚು ಖರ್ಚಾಗಲಿದೆ. ಜೊತೆಗೆ ಅಗತ್ಯವಿದ್ದಷ್ಟು ಮಾತ್ರ ಪರಿಕರಗಳನ್ನು ಬಳಸಲು ನಿರ್ಧರಿಸಲಾಗಿದೆ.