ಬೆಂಗಳೂರು,ಮೇ,೨೧;ನಾಡಿನ ಹಿರಿಯ ಮುತ್ಸುದ್ದಿ ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಅವರು ಇಂದು ನಿಧರಾಗಿದ್ದಾರೆ.
ಅವರಿಗೆ೮೧ ವರ್ಷ ವಯಸ್ಸಾಗಿತ್ತು. ಲಿವರ್ ಕ್ಯಾನ್ಸ್ರ್ನಿಂದ ಬಳಲುತ್ತಿದ್ದ ಅವರು ಚೈನೈ ಆಪಲೋಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗಿದೆ ಅಸುನೀಗಿದ್ದಾರೆ.
ಪತ್ನಿ ಇಂದ್ರಮ್ಮ,ಪುತ್ರಿಮಂಜುಳಾ ಅಳಿಯ ಶ್ರೀಧರ್ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಎಸ್.ಆರ್.ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರೇಷ್ಮೆ ಸಚಿವರಾಗಿದ್ದ ಕೃಷ್ಣ ಮೂರು ಅವಧಿಕೆ ಕೆ.ಆರ್. ಪೇಟೆ ಶಾಸಕರಾಗಿದ್ದರು. ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಕೆ,ಆರ್.ಪೇಟೆ ಕೃಷ್ಣ ಎಂದೇ ಪ್ರಸಿದ್ದರಾಗಿದ್ದ ಅವರು ಜನತಾ ಪರಿವಾರದಲ್ಲಿ ನಿರಂತರವಾಗಿ ಗುರುತಿಸಿಕೊಂಡು ಬಂದವರು.ತಮ್ಮ ಆತ್ಮೀಯ ಗೆಳೆಯ ಸಿದ್ದರಮಯ್ಯ ಜನತಾ ದಳಕ್ಕೆ ರಾಜೀನಾಮೆ ಕೊಡುವ ಸಂದರ್ಭದಲ್ಲಿ ಕೃಷ್ಣ ಅವರು ಸ್ಪೀಕರ್ ಆಗಿದ್ದರೂ ಸಹ ವಿಧಾನಸಭೆಯಲ್ಲಿ ಭಾಷಣ ಮಾಡಲು ಸಿದ್ದರಮಯ್ಯನವನರಿಗೆ ಅವಕಾಶ ನಿರಾಕರಿಸಿದದ್ದರು
ನಂತರ ದಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಗಲು ಸಾಕ್ಷಿಯಾಗಿದ್ದರಲ್ಲದೆ ನಲ್ವತ್ತು ಶಾಸಕರನ್ನು ಉಚ್ಚಾಸುವಂತೆ ದೇವೇಗೌಡರ ಪತ್ರಕ್ಕೆ ಕಿಮ್ಮತ್ತು ನೀಡಿರಲಿಲ್ಲ.
ಮುಂದೆ ಕೆಆರ್ ಪೇಟೆಗೆ ಬಾಂಬೆ ನಾರಾಯಣ ಗೌಡರಿಗೆ ಟಿಕೇಟ್ ನೀಡಿದ ಪರಿಣಾಮ ಕೃಷ್ಣ ಅವರು ರಾಜಕಾರದಿಂದ ಹಿಂದೆ ಸರಿದರೂ ಹಿರಿಯರಾದ ಎಚ್.ಎಸ್. ದೊಎಸ್ವಾಮಿ ಎ.ಟಿ ರಾಮಸ್ವಾಮಿ ಅವರೊಂದಿಗೆ ಸಾಮಾಜಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು
ಸಂತಾಪ:
ಹಿರಿಯ ಮುತ್ಸುದ್ದಿ ಆದರ್ಶ ರಾಜಕಾರಣಕ್ಕೆ ಹೆಸರಾಗಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ,ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ,ಡಾ.ಆಶ್ವತ್ಥ್ ನಾರಾಯಣ,ಲಕ್ಷ್ಮಣ್ ಸವದಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಮುರಗೇಶ್ ನಿರಾಣಿ, ನಾರಾಯಣಗೌಡ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಮಾಜಿ ಸ್ಪೀಕರ್ ಕೃಷ್ಣ ನಿಧನ-ಕಂಬನಿ ಮಿಡಿದ ಗಣ್ಯರು
Share