ಪ್ಯಾಕೇಜ್ ಹೆಸರಿನಲ್ಲಿ ಜನರಿಗೆ ಟೋಪಿ; ಎಚ್‌ಡಿಕೆ ಟೀಕೆ

Share

ಬೆಂಗಳೂರು,ಮೇ,೧೯: ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ರಾಜ್ಯಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಜನರ ಹೆಸರಿನಲ್ಲಿ ಜನರಿಗೆ ಟೋಪಿ ಹಾಕಿದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ,
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಸಮರ್ಪಕವಾಗಿಲ್ಲ ಕಳೆದ ವರ್ಷವೂ ಕೂಡ ಇದೇ ರೀತಿ ಪ್ಯಾಕೇಜ್ ಘೋಷಿಸಿ ಜನರಿಗೆ ವಂಚಿಸಿತ್ತು ಈಗ ಮತ್ತೊಮ್ಮೆ ನಾಟಕೀಯ ಪ್ಯಾಕೇಜ್ ಘೋಷಿಸುವ ಮೂಲಕ ಜನರಿಗೆ ಟೋಪಿ ಹಾಕಿದೆಎಂದು ಟೀಕಿಸಿದ್ದಾರೆ.
ಕಳೆದ ವರ್ಷವೂ ೧,೨೦೦ ಕೋಟಿ ಪ್ಯಾಕೇಜ್ ಘೋಷಿಸಲಾಗಿತ್ತು. ಆದರೆ, ಸರಿಯಾಗಿ ಅನುಷ್ಠಾನಕ್ಕೆ ತಂದಿರಲಿಲ್ಲ. ಈ ಬಾರಿಯೂ ೧,೨೦೦ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಲಾಗಿದೆ. ರಾಜ್ಯದಲ್ಲಿ ೫೫ ಲಕ್ಷ ಶ್ರಮಿಕ ಕುಟುಂಬಗಳಿವೆ. ಆದರೆ, ಅತ್ಯಲ್ಪ ಪ್ರಮಾಣದ ಜನರಿಗೆ ನೆರವು ಘೋಷಿಸಲಾಗಿದೆ. ಯಾವ ಆಧಾರದಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆಕಳೆದ ವರ್ಷ ೭.೫ ಲಕ್ಷ ಆಟೊ ಚಾಲಕರಿಗೆ ನೆರವು ಘೋಷಿಸಲಾಗಿತ್ತು.
ಈ ಬಾರಿ ೨.೧೦ ಲಕ್ಷ ಚಾಲಕರಿಗೆ ಮಾತ್ರ ನೆರವು ಪ್ರಕಟಿಸಲಾಗಿದೆ. ನೆರವಿನ ಮೊತ್ತವನ್ನು ೫,೦೦೦ದಿಂದ ೩,೦೦೦ಕ್ಕೆ ಇಳಿಕೆ ಮಾಡಲಾಗಿದೆ. ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ನೀಡುತ್ತಿದ್ದ ಪರಿಹಾರವನ್ನು ೨೫,೦೦೦ದಿಂದ ೧೦,೦೦೦ಕ್ಕೆ ತಗ್ಗಿಸಲಾಗಿದೆ. ಈ ಪ್ಯಾಕೇಜ್‌ನಿಂದ ಯಾರಿಗೂ ಒಳಿತಾಗುವುದಿಲ್ಲ ಎಂದು ಟೀಕಿಸಿದ್ದಾರೆ ಬಿಜೆಪಿಯ ನಾಯಕರ ಮನೆಯ ಹಣ ತಂದು ಪರಿಹಾರ ನೀಡುವುದಿಲ್ಲ. ರಾಜ್ಯದ ೬.೫ ಕೋಟಿ ಜನರ ತೆರಿಗೆ ಹಣವನ್ನು ನೀಡಲಾಗುತ್ತದೆ. ಎಲ್ಲ ಕುಟುಂಬಗಳಿಗೂ ತಲಾ ೧೦,೦೦೦ ಪರಿಹಾರ ನೀಡಬೇಕು. ನಿಗಮ, ಮಂಡಳಿಗಳ ನೇಮಕಾತಿ ರದ್ದುಗೊಳಿಸಿ ಆ ಹಣವನ್ನೂ ಪ್ಯಾಕೇಜ್‌ಗೆ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

Girl in a jacket
error: Content is protected !!