ಬೆಂಗಳೂರು,ಮೇ,೧೯: ಕೊರೊನಾ ಎರಡನೇ ಅಲೆ ತೀವ್ರವಾಗಿ ಬಾದಿಸಿದ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಲಾಗಿತ್ತು ಹೀಗಾಗಿ ಹಲವು ಅಸಂಘಿಟಿತ ವಲಯಗಳ ಕಾರ್ಮಿಕರಿಗೆ ರೈತರಿಗೆ ದಿನಗೂಲಿ ನೌಕರರಿಗೆ,ಬಡವರು ಹಾಗೂ ನಿರ್ಗತಿಕರಿಗೆ ರಾಜ್ಯ ಸರ್ಕಾರ ೧,೨೫೦ ಕೋಟಿ ರೂ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.
ಬುಧವಾರ ಬೆಳಿಗ್ಗೆ ಹಿರಿಯ ಸಚಿವರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ವಿವಿಧ ಅಸಂಘಟಿತ ವಲಯಗಳಿಗೆ ಆರ್ಥಿಕ ಪ್ಯಾಕೇಜ್ ನೀಡಲಾಗುವುದು ಎಂದು ಹೇಳಿದರು.
ಆಟೋ,ಕ್ಯಾಬ್ ಚಾಲಕರಿಗೆ ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ತಲಾ ೩೦೦ ರೂ. ಹೂ ಬೆಳೆಗಾರರು ಮತ್ತು ತೋಟಗಾರಿಕೆ ಕೃಷಿಕರಿಗೆ ೧೦ ಸಾವಿರು ರೂ. ಬೀದಿ ವ್ಯಪಾರಿಗಳಿಗೆ ೨೦೦೦ ರೂ ಆರ್ತಿಕ ನೆರವು ನೀಡಲಾಗಿದೆ. ಹಾಗೆಯೇ ಅಸಂಘಟಿತ ವಲಯದ ಕಾರ್ಮಿಕರಾದ ತೊಳೆಯುವವರು,ಕುಂಬಾರರು,ಕ್ಷೌರಿಕರಿಗೆ ಚರ್ಮದ ಕೆಲಸಗಾರರಿಗೆ ಮೆಕ್ಯಾನಿಕ್ ಇತ್ಯಾದಿ ವರ್ಗಗಳಿಗೆ ಕೂಡ ಆರ್ಥಿಕ ಪ್ಯಾಕೇಜ್ ನೀಡಿದೆ.
ಅಲ್ಲದೆ ಕಲಾವಿದರು ರಿಗೂ ೩೦೦೦ ರೂ ಸಹಾಧನ ಘೋಷಣೆ ಮಾಡಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ೫ ಕೆಜಿ ಅಕ್ಕಿ ನೀಡಲಾಗುವುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ಕೊಡಲಾಗುತ್ತದೆ. ಅಲ್ಲದೆ ಮೇ, ಜೂನ್ ರೇಷನ್ ಕೊಡಲಾಗುತ್ತೆ. ಸಾಲ ಮರುಪಾವತಿಗೆ ೩ ತಿಂಗಳ ಅವಕಾಶ ಇದ್ದು, ೩ ತಿಂಗಳ ಬಡ್ಡಿ ಸರ್ಕಾರವೇ ಭರಿಸಲಿದೆ. ಪ್ಯಾಕೇಜ್ ನಲ್ಲಿ ಕಳೆದ ವರ್ಷದಂತೆ ಲೋಪ ಆಗದಂತೆ ಕ್ರಮವಹಿಸಲಾಗುತ್ತೆ. ಲಾಕ್ ಡೌನ್ ವಿಸ್ತರಣೆ ಬಗ್ಗೆ ೨೩ ರಂದು ತೀರ್ಮಾನ ಮಾಡ್ತೀವಿ ಎಂದು ಸಿಎಂ ತಿಳಿಸಿದರು.
ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ. ಈವರೆಗೆ ೨.೬ ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಇದಕ್ಕಾಗಿ ೯೫೬ ಕೋಟಿ ಖರ್ಚು ಮಾಡಲಾಗುತ್ತದೆ. ಪ್ರತಿ ಪಂಚಾಯತಿಗೆ ಕೋವಿಡ್ ನಿರ್ವಹಣೆಗೆ ೫೦ ಸಾವಿರ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಲೈನ್ ಮ್ಯಾನ್, ಗ್ಯಾಸ್ ತಲುಪಿಸೋರು, ಶಿಕ್ಷಕರು ಫ್ರಂಟ್ ಲೈನ್ ವರ್ಕರ್ಸ್ ಅಂತ ಸಿಎಂ ಘೋಷಣೆ ಮಾಡಿದರು.