೨-ಡಿಜಿ ಔಷಧ ಅಧಿಕೃತ ಬಿಡುಗಡೆ

Share

ನವದೆಹಲಿ,ಮೇ೧೭: ಕೊರೊನಾಗೆ ದೇಶಿ ಔಷಧ ೨-ಡಿಆಕ್ಸಿ-ಡಿ-ಗ್ಲುಕೋಸ್(೨-ಡಿಜಿ) ಹೆಸರಿನ ಪೌಡರ್ ಅನ್ನು ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಬಿಡುಗಡೆಗೊಳಿಸಿದರು.ಹೈದರಾಬಾದಿನ ಡಾ.ರೆಡ್ಡೀಸ್ ಲ್ಯಾಬ್ ಸಹಯೋಗದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಈ ಔಷಧವನ್ನು ಅಭಿವೃದ್ಧಿಪಡಿಸಿತ್ತು ಕಳೆದ ವಾರದ ಹಿಂದೆಯಷ್ಟೆ ಇದಕ್ಕೆ ಅನುಮೋದನೆ ನೀಡಲಾಗಿತ್ತು
ಸೋಮವಾರ ೧೦ ಸಾವಿರಕ್ಕೂ ಹೆಚ್ಚು ಡೋಸ್ ಔಷಧವನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗಿದೆ. ಇದು ಜೆನರಿಕ್ ಔಷಧವಾದ ಕಾರಣ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಬಹುದು. ಅಲ್ಲದೇ ಸಮಸ್ಯೆ ಆಗುತ್ತಿರುವ ಬೆಡ್ ಕೊರತೆಯನ್ನು ಕಡಿಮೆ ಮಾಡಬಹುದು ಎಂದು ಎಂದು ಡಿಆರ್‌ಡಿಒ ತಿಳಿಸಿದೆ.

ಹೇಗೆ ಬಳಕೆಮಾಡಬೇಕು?
ಈ ಪೌಡರ್ ಅನ್ನು ನೀರಿನಲ್ಲಿ ಕಲಕಿ ಸೇವಿಸಬಹುದು. ಕ್ಲಿನಿಕಲ್ ಪ್ರಯೋಗದ ವೇಳೆ ಈ ಪೌಡರ್ ಸೇವಿಸಿದ ಸೋಂಕಿತರು ಆಸ್ಪತ್ರೆಯಿಂದ ಬಹಳ ಬೇಗ ಚೇತರಿಕೆ ಕಾಣುತ್ತಿದ್ದಾರೆ. ಪ್ರತಿದಿನ ೨ ಪ್ಯಾಕ್ ೨ಜಿಡಿ ಔಷಧ ಪಡೆದ ಶೇ.೪೨ರಷ್ಟು ರೋಗಿಗಳು ಕೇವಲ ೩ ದಿನದಲ್ಲಿ ಆಕ್ಸಿಜನ್ ಸಪೋರ್ಟ್ ನಿಂದ ಹೊರ ಬಂದಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪರಿಣಾಮಕಾರಿಯಾಗಲಿದೆಯೇ?
ಈ ಔಷಧ ಕೊರೊನಾ ವೈರಸ್ ಅನ್ನು ಕೊಲ್ಲುವುದಿಲ್ಲ. ವೈರಸ್ ಜೀವಕೋಶದ ಒಳಗಡೆ ಸಂಗ್ರಹಗೊಂಡು ದ್ವಿಗುಣಗೊಳ್ಳುವುದನ್ನು ತಡೆದು ಆದರ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಈ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಡಿಆರ್‌ಡಿಒ ತಿಳಿಸಿದೆ.
ಕೋವಿಡ್ ಮೊದಲ ಅಲೆ ಹೆಚ್ಚಾದ ಸಮಯದಲ್ಲಿ ಪ್ರಧಾನಿ ಮೋದಿ ಅವರ ಸಲಹೆಯ ಮೇರೆ ಡಿಆರ‍್ಡಿಒದ ವಿಭಾಗವಾದ ದಿ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸನ್ ಆಂಡ್ ಅಲೈಡ್ ಸೈನ್ಸಸ್ ಸಂಸ್ಥೆ ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯೂಲರ್ ಆಂಡ್ ಮಾಲಿಕ್ಯುಲರ್ ಬಯೋಲಜಿ ಸಹಯೋಗದಲ್ಲಿ ಈ ಔಷಧವನ್ನು ಮೊದಲ ಪ್ರಯೋಗಕ್ಕೆ ಬಳಸಿತ್ತು.
ಪ್ರಯೋಗದ ಸಮಯದಲ್ಲಿ ಸಾರ್ಸ್-ಕೋವ್-೨ ವೈರಸ್ ಮೇಲೆ ಪರಿಣಾಮಕಾರಿಯಾಗಿದ್ದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ೨೦೨೦ರ ಮೇ-ಅಕ್ಟೋಬರ್ ವೇಳೆ ಎರಡನೇ ಹಂತದಲ್ಲಿ ದೇಶದ ೧೭ ಆಸ್ಪತ್ರೆಗಳ ೧೧೦ ರೋಗಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. ೨೦೨೦ರ ಡಿಸೆಂಬರ್ ನಿಂದ ೨೦೨೧ರ ಮಾರ್ಚ್ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ೧೦ ರಾಜ್ಯಗಳ ೨೭ ಆಸ್ಪತ್ರೆಗಳಲ್ಲಿ ೩ನೇ ಹಂತದ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ವೇಳೆ ಉತ್ತಮ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಈಗ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ.
ದರ ಎಷ್ಟು
ಈ ಪೌಡರ್ ಬೆಲೆ ಕಡಿಮೆ ಇರಲಿದೆ ಎಂದು ವರದಿಯಾಗಿದೆ. ಒಂದು ಪ್ಯಾಕ್ ಬೆಲೆ ೫೦೦ – ೬೦೦ ರೂ. ದರ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಔಷಧಿ ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗಲಿದೆ.

Girl in a jacket
error: Content is protected !!