- ಲೇಖಕರ ಪರಿಚಯ:
ಡಾ|| ಆರೂಢ ಭಾರತೀ ಸ್ವಾಮೀಜಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಲ್ಲೂಕಿನ ಹುಣಸ್ಯಾಳ ಪಿ.ಬಿಯಲ್ಲಿ ಬಸಗೊಂಡಪ್ಪ ಮತ್ತು ಶಾವಂತ್ರವ್ವ ದಂಪತಿಯ ಪುತ್ರರಾಗಿ ೧೯೬೮ ಜೂನ್ ೩೦ರಲ್ಲಿ ಜನಸಿದ್ದು, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಸಂಸ್ಕೃತ ಹಾಗೂ ಪ್ರೌಢಶಾಲೆ ಕಲಿತು ಅಲ್ಲಿಂದ ಆದಿಚುಂಚನಗಿರಿಯಲ್ಲಿ ಸಂಸ್ಕೃತ ಅಧ್ಯಯನ ಮುಂದುವರೆಸಿದರು ಆನಂತರ ಬೆಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ಮಂದಿರದಲ್ಲಿದ್ದು ಶ್ರೀಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವ್ಯಾಕರಣ,ಅದ್ವೈತವೇದಾಂತ,ಅಲಂಕಾರ ತರ್ಕಶಾಸ್ತ್ರಗಳಲ್ಲಿ ಎಂಎ ವಿದ್ಯವತ್ ಪೂರೈಸಿದರು.ಅಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಎಂ.ಎಂ. ಹಾಗೂ ಸಂಸ್ಕೃತದಲ್ಲಿ ಪಿಎಚ್.ಡಿ ವಿದ್ವತ್ ಪಡೆದ ಇವರು ಎಂ.ಎಯಲ್ಲಿ ಸುವರ್ಣ ಪದಕ ಪಡೆದಿದ್ದಾರೆ.೨೦೧೬ರಲ್ಲಿ ಹುಬ್ಬಳ್ಳಿಯಲ್ಲಿ ಸನ್ಯಾಸತ್ವ ಸ್ವೀಕರಿಸಿದ ಅವರು ಈ ಮುನ್ನವೇ ೧೯೯೮ರಲ್ಲಿ ಬೆಂಗಳೂರಿನಲ್ಲಿ ಸಿದ್ದಾರೂಢ ಮಷನ್ ಸ್ಥಾಪಿಸಿದ್ದರು, ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ದರೂಢರ ಹೆಸರಿಡುವಲ್ಲಿ ಮಹತ್ವದ ಪಾತ್ರ ವಹಿಸಿದವರು.
ಬೆಂಗಳೂರಿನ ರಾಮೊಹಳ್ಳಿಯಲ್ಲಿ ಶ್ರೀಸಿದ್ಧಾರೂಢ ಮಿಷನ್ ಸ್ಥಾಪಿಸಿರುವ ಇವರು ಇದರ ಅಧ್ಯಕ್ಷರೂ ಅಲ್ಲದೆ ಶ್ರೀ ಸಿದ್ಧಾರೂಢ ಅಂತರಾಷ್ಟ್ರೀಯ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಅಧ್ಯಕ್ಷರೂ ಕೂಡ ಅಲ್ಲದೆಗೌರಿಬಿದನೂರಿನ ಶ್ರೀ ಸಿದ್ಧಾರೂಢ ಸೇವಾಶ್ರಮ ಮತ್ತು ಕೊಡಗಿನ ಚೇರಾಂಬಾಣೆಯ ಶ್ರೀ ಸಿದ್ಧಾರೂಢ ಸೇವಾಶ್ರಮದ ಅಧ್ಯಕ್ಷರೂ ಕೂಡ.
ಇವರು ಅಖಿಲ ಭಾರತ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಕೇಂದ್ರ ಸರ್ಕಾರದಿಂದ ಸುವರ್ಣ ಪದಕ ಪಡೆದಿದ್ದು ರಾಷ್ಟ್ರ-ರಾಜ್ಯಮಟ್ಟದಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ.ಶ್ರೀ ರಾಮಕೃಷ್ಣ ಭಾಗವತಮ್,ಸ್ವಾಮಿ ವಿವೇಕಾನಂದ ಸೂತ್ರಶತಕಂ ಸಂಸ್ಕೃತದಿಂದ ಕನ್ನಡಕ್ಕೆ ಅನುವಾಧಿಸಿದ್ದಾರೆ ಅಲ್ಲದೆ ವೀರಶೈವ ಪಾರಿಭಾಷಿಕ ಪದಕೋಶದ ಸಂಪಾಕರಾಗಿಯೂ ಕೆಲಸ ಮಾಡಿದ್ದಾರೆ . ಇವರು ‘ಜ್ಞಾನದೀಪ್ತಿ’ಅಂಕಣದಲ್ಲಿ ಬರೆಯುತ್ತಾರೆ. -
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧ ಬಾಲಕನು ಬಾಲ್ಯದಲ್ಲಿ ಮನೆಯಲ್ಲಿ ಚಿಕ್ಕಗಡಿಗೆಯಿಂದ ಎಳ್ಳಿನ ರಾಶಿಯನ್ನೇ ಸುರಿಸುವನು. ಆದರ ತಾತ್ವಿಕ ಅರ್ಥವನ್ನು ಹೀಗೆ ವಿವರಿಸುವನು: ಗಡಿಗೆ ಎಂಬುದು ಜ್ಞಾನಿಯ ಶರೀರ ಅಲ್ಲಿಂದ ಹೊರಹೊಮ್ಮುವ ಎಳ್ಳುಗಳು ಜ್ಞಾನಿಯ ಉಪದೇಶ- ಎಂದು ಜ್ಞಾನಿಯ ನೋಡಲು ಎಲ್ಲಾ ಸಾಮಾನ್ಯ. ಅದರೆ ಆತನಲ್ಲಿ ಹುದುಗಿದ ಶಕ್ತಿ ಅಸಾಮಾನ್ಯ ಸಣ್ಣ ಕಣ ಅಣು! ನೋಡಲು ಲೆಕ್ಕ್ಕಿಲ್ಲ ಆದರೂ ಅದರಲ್ಲಿ ಹುದುಗಿಹುದು ಅದ್ಭುತಶಕ್ತಿ! ಅಣುನಿರ್ಮಿತ ಅಣುಬಾಂಬ್ ಎಸೆದರೆ ಅಣು ಅನಂತ ಹಾದಿ! ಅಂಥ ಅದ್ಭುತ ಶಕ್ತಿ ಅಡಗಿದೆ ಪುಟ್ಟ ಅಣುಬಾಂಬ್‌ನಲ್ಲಿ ಅಂತೆಯೇ ಸಾಮಾನ್ಯನಂತಿರುವ ಜ್ಞಾನಿಯ ಅಂತರಂಗದಲ್ಲಿ ಅಡಗಿದೆ ಅತ್ಯದ್ಭುತ ದಿವ್ಯಶಕ್ತಿ! ಆತನ ಮುಖದಿಂದ ಹೊರಹೊಮ್ಮುವವು ದಿವ್ಯಾಮೃತ ಸಂದೇಶ ವಾಕ್ಯಗಳು ! ಅವು ಕೇಳುಗರಿಗೆಲ್ಲರ ಅಜ್ಞಾನ ಕತ್ತಲೆಯನು ಹೊಡೆದೋಡಿಸುವ ಭವ್ಯ ಸೂರ್ಯಕಿರಣಗಳು ಒಬ್ಬ ಜ್ಞಾನಿ ಒಬ್ಬರನ್ನು ಮಂತ್ರ ಉದ್ದಾರಿಸುತ್ತಾನೆಂದಲ್ಲ ಲಕ್ಷ ಲಕ್ಷ ಜನರನ್ನು ಉದ್ಧರಿಸುವ ಸಾಮರ್ಥ್ಯೆ ಆ ಉಪದೇಶಕ್ಕೆ, ಉಪದೇಶ ಹೊರ ಹೊಮ್ಮಿದಂತೆ ಉಪದೇಶ ಮುಗಿಯುವ- ಸವಕಲಾಯಿತು ಎಂದಿಲ್ಲ! ಅವು ಮುಗಿಯುವಂಥವಲ್ಲ! ಸವಕಲಾಗುವಂಥಲ್ಲ! ಉಪದೇಶ ಹೊರಹೊಮ್ಮದಂತೆ ಹೊಸವಿಚಾರ, ಹೊಸದೃಷ್ಟಿಕೋನ ತೆರೆದುಕೊಳ್ಳತ್ತೆ,ಹೊಸ ಹೊಸ ಉಪದೇಶಗಳು ಹೊರಹೊಮ್ಮುತ್ತದೆ! ವಿದ್ಯೆಯ ಸ್ವಭಾವ ಅದು!
ನಚೋರಹಾರ್ಯಂ
ನ ಭ್ರಾತೃಭಾಜ್ಯಂ ನಚಭಾರಕಾರಿ|
ವ್ಯಯೇ ಕೃತೇ ವರ್ಧತೇವನಿತ್ಯಾಂ||
ವಿಧ್ಯೆಯನ್ನು ಕಳ್ಳರು ಕದಿಯಲಾಗದು, ಸರ್ಕಾರ ಅದಕ್ಕೆ ತೆರಿಗೆ ವಿಧಿಸಲಾಗದು! ಸಹೋದರ ಸಹೋದರಿಯರ ಭಾಗಕೇಳಲಿಕ್ಕಾಗದು! ವಿಧ್ಯೆ ಹೆಚ್ಚಿತೆಂದು ತೆಲೆಗೆ ಭಾರವಾಗದು! ಬಳಸಿದೆಂತೆಲ್ಲ ಅದು ಅನುಭವದ ರಸಪಾಕವಾಗಿ ಇಮ್ಮಡಿ ನೂರ್ಮಡಿಯಾಗಿ ಹೆಚ್ಚುವುದು! ಲೋಕದ ಇತರ ಯಾವ ಸಂಪತ್ತೂ ಇದಕ್ಕೆ ಸರಿಸಾಟಿಯಾಗದು! ಉಳಿದ ಸಂಪತ್ತಿನಿಂದ ಆಪತ್ತು ! ಆದರೆ ವಿದ್ಯಾಸಂಪತ್ತಿನಿಂದ ಆಪತ್ತಿನ ನಿವಾರಣೆ! ಉಳಿದ ಸಂಪತ್ತು ನಮ್ಮ ಹೊರಗೆ ನಮ್ಮಿಂದ ಆಚೆ! ಅದೆಂದಿಗೂ ನಮ್ಮನ್ನು ಬಿಟ್ಟು ಕದಲದು! ಅಗಲಿ ದೂರಸರಿಯದು! ಹಣ-ಸಂಪತ್ತು ಬೇಕು,ಅದರೆ ವಿದ್ಯೆ ಅದರಪ್ಪ ಎಂದು ತಿಳಿದಿರಬೇಕು! ಹಣ-ಆಸ್ತಿಗಿಂತ ಬೆಲೆಯುಳ್ಳದ್ದು ವಿದ್ಯೇ! ನಾವೆಲ್ಲ ವಿದ್ಯಗೆ ಬೆಲೆ ಕೊಡೋಣ! ತಲೆಬಾಗಿಸೋಣ! ವಿದ್ಯೇ ಕಲಿತು ವಿದ್ಯಾವಂತರಾಗೋಣ!!
ಜ್ಞಾನಿಗಳ,ವಿದ್ಯಾವಂತರ,ಅನುಭವಿಗಳ ಬಲ್ಲವರ ಹಿರಿಯ ಸಂಗಮಾಡೋಣ! ಅವರಿಗೆ ನೆರವಾಗೋಣ ಸೇವೆಸಲ್ಲಿಸೋಣ, ಅವರ ಉಪದೇಶವನ್ನು ಮನಸಾಸರೆ ಕೇಳಿ, ಅಜ್ಞಾನ ತೊರೆದು ಸುಜ್ಞಾನದಲ್ಲಿ ನೆಲೆ ನಿಂತು ಧನ್ಯರಾಗೋಣ!
ಸಿದ್ಧಬಾಲಕನಿಗೆ ಐದು ವರ್ಷ ತಂದೆ ತಾಯಿಗಳು ಆತನನ್ನು ಶಾಲೆಗೆ ಕಳುಹಿಸಲು ಮುಂದಾಗುವರು ಸಿದ್ಧ ಒಪ್ಪುವುದಿಲ್ಲ ಸರಸ್ವತಿ ಶಾಲೆಗೆ ಹೋಗಿ ವಿದ್ಯೆ ಕಲಿತಳೆ? ಎನ್ನುವನು, ವಿದ್ಯೆ ಎರಡುವಿಧ ಒಂದು ಲೌಕಿಕವಿದ್ಯೆ ಮತ್ತೊಂದು ಅಲೌಕಿಕ ವಿದ್ಯೆ.ಅನ್ನ-ವಸ್ತ್ರ-ವಸತಿ-ವಸ್ತು-ವಹನ-ಭೂ-ಕಟ್ಟಡ ಸಂಪತ್ತು ಲೌಕಿಕಸ್ಥಾನಮಾನ ಉದ್ಯೋಗ ಒದಗಿಸುವ ವಿದ್ಯೆ ಲೌಕಿಕವಿದ್ಯೆ. ಜೀವಾತ್ಮ-ಪರಮಾತ್ಮ-ಜೀವ-ಜಗತ್ತುಗಳ ಸೃಷ್ಟಿ-ಸ್ಥಿತಿ-ಲಯಸ್ವೂಪಗಳನ್ನು ಅರಿಯುವ ವಿದ್ಯೆ ಅಲೌಕಿಕ ವಿದ್ಯೆ.ಬಹಿರಂಗ ಘೋಷಣೆಗೆ ಲೌಕಿಕವಿದ್ಯೆ ಅಂತರಂಗ ತೃಪ್ತಿಗೆ ಅಲೌಕಿಕ ವಿದ್ಯೆ ನಾಣ್ಯದ ಎರಡು ಮುಖವಿದ್ದಂತೆ. ಈ ಬದುಕು ಒಂದು ಮುಖ ಬಿಟ್ಟು ಇನ್ನೊಂದು ಇರಲಾರದು. ಒಂದಿಲ್ಲದ ಒಂದು ಮುಖಕ್ಕೆ ಬೆಲೆ ಇಲ್ಲ.ಬದುಕಿನ ಅಂತರಂಗ ಬಹಿರಂಗಗಳೆರಡನ್ನೂ ಅಲ್ಲಗೆಳೆಯುವಂತಿಲ್ಲ. ನಿರ್ಲಕ್ಷಿಸುವಂತಿಲ್ಲ! ಚೈತನ್ಯವಿಲ್ಲದ ದೇಹ ಶವ! ದೇಹವಿಲ್ಲದೇ ಚೈತನ್ಯದ ಅಭಿವೃಕ್ತಿ ಇಲ್ಲ! ಹೀಗಿದ್ದೂ ಬಹುತೇಕರು ನಾವು ಗಮನಹರಿಸುವುದು ಲೌಕಿಕ ಬದುಕಿನತ್ತ,ಲೌಕಿಕ ವಿದ್ಯೆಯತ್ತ! ಉಣ್ಣು-ತಿನ್ನುವ ಕುಡಿಯುವ, ಮುಟ್ಟುವ, ಮೂಸುವ ಉಡುವ- ತೊಡುವ ಬಗ್ಗೆ ಎಲ್ಲಿಲ್ಲದ ಆಸಕ್ತಿ! ಧ್ಯಾನ-ಜಪ-ತಪಸ್ಸು-ಯೋಗ-ವೇದಾಂತ ಶ್ರವಣ-ಅಧ್ಯಯನ ಗುರುದೇವ ಅದೆಷ್ಟು ಜನರಿಗೆ ಇಷ್ಟ? ಲೌಕಿಕ ಭೋಗ- ಭಾಗ್ಯ ನೀಡುವ ಲೌಕಿಕವಿದ್ಯೆ ಎಲ್ಲರಿಗೂ ಪ್ರಿಯವಾಗಿರುವುದರಿಂದಲೇ ಲೌಕಿಕವಿದ್ಯೆಯನ್ನು ‘ಪ್ರೇಯಃ-ಎಂದು ಕರೆಯಲಾಗಿದೆ ಲೌಕಿಕಿ ವಿದ್ಯೆ ಉದಾಸೀನಕ್ಕೊಳಗಾಗಿದ್ದರೂ ಅದಿಲ್ಲದೇ ನಿಜತೃಪ್ತಿಯಿಲ್ಲ! ಸಕಲ ಭೋU-ಭಾಗ್ಯ ಇದ್ದಾಗ್ಯೂ ಅಂತರಂಗಿಕ ತಿಳುವಳಿಕೆಯ ಕೊರತ ಇದ್ದಲ್ಲಿ ಜೀವನ ಸುಖಮಯವಾಗಿರುವುದಿಲ್ಲ.ಹತಾಶೆ ಗೊಂದಲ ತಳಮಳಗಳು ಗೂಡಕಟ್ಟುತ್ತವೆ, ಆಗ ಹಿರಿಯರ, ಬಲ್ಲವರ,ಜ್ಞಾನಿಗಳ ಶಾಸ್ತ್ರಗಳ ಸದ್ಗ್ರಂಥಗಳುಪದೇಶದದ ಮಾತುಗಳು ಮನಸ್ಸಿಗೆ ಸಮಾಧಾನ ತರುತ್ತವೆ, ಮುದುನೀಡುತ್ತವೆ ಇದೇ ವೇದಾಂತದ ತಿರುಳು! ಇದರಿಂದಲೇ ನಿಜ ಶ್ರೇಯಸ್ಸು! ಆದ್ದರಿಂದ ಅಲೌಕಿಕ ವಿದ್ಯೆಯನ್ನು ‘ಶ್ರೇಯಃ-ಎಂದುಕರೆಯಲಾಗಿದೆ.
ಕಠೋಪನಿಷತ್ತಿನ ಎರಡನೇಯ ವಲ್ಲಿಯಲ್ಲಿ ಯಮಧರ್ಮನು ನಚಿಕೇತನಿಗೆ ಹೀಗೆ ಹೇಳುವನು:
ಅದ್ಯಚ್ಛ್ರೇಯೋನ್ಯದುತೈವಪ್ರೇಯ-
ಸ್ತೇ ಉಭೇ ನಾನಾರ್ಥೇ ಪುರುಷಂಸಿನೀತಃ|
ತಯೋಃ ಶ್ರೇಯ ಆದಾದಾನಸ್ಯ ಸಾಧು
ಭವತಿ ಹೀಯತೇರ್ಥಾತ್‌ಯವುದೇಯೋ ವೃಣೀತೇ||
‘ಶ್ರೇಯಃ ಪ್ರೇಯಃ ಎರಡೂ ಬೇರೆ ಬೇರೆ ಇವರೆರಡೂ ಮಾನವನಿಗೆ ಬೇರೆ ಬೇರೆ ಫಲನೀಡುತ್ತವೆ ಶ್ರೇಯಸ್ಸು ಪ್ರವೃತ್ತಿಯನ್ನುಂಟುಮಾಡುತ್ತದೆ.ಅದರ ಬೆನ್ನುಹತ್ತಿ ಹೋದಂತೆಲ್ಲ ಇಷ್ಟು-ಅಷ್ಟು-ಮತ್ತಷ್ಟು ಆಸೆಗಳು ಚಿಗುರುತ್ತಲೇ ಸಾಗುತ್ತವೇ! ತೃಪ್ತಿ ಎಂಬುದು ಹಗಲಗನಸ್ಸು,ಮೃಗ ಮರೀಚಿಕೆಯಾಗುತ್ತದೆ,ಶ್ರೇಯಸ್ಸು ನಿವೃತ್ತಿಯನ್ನುಂಟುಮಾಡುತ್ತವೆ. ಒಂದು ಕಟ್ಟುತ್ತದೆ, ಮತ್ತೊಂದು ಕೆಡುವುತ್ತದೆ, ಹೀಗೆ ಈ ಎರಡು ನಿದ್ಯೆಗಳು ಮೇಲ್ನೋಟಕ್ಕೆ ಪರಸ್ಪರ ವಿರುದ್ಧ ದಿಕ್ಕಿನವುಗಳೂ! ಬುದ್ಧಿವಂತನು ಶ್ರೇಯಸ್ಸನ್ನು ತೊರೆದು ಶ್ರೇಯಸ್ಸನ್ನು ಅನುಸರಿಸುವನು ಇದರಿಂದ ಆತ ತೃಪ್ತಿ-ಸಮಾಧಾನ-ಒಳಿತನ್ನೇ ಅನುಭವಿಸುವುನು ದೂರದರ್ಶಿಯಲ್ಲದವನು ತಾತ್ಕಾಲಿಕ ಪ್ರಯೋಜನ್ಕೆ ಅಸೆಬಿದ್ದು ಶ್ರೇಯಸ್ಸನ್ನು ಅನುಸರಿಸುವನು ಶ್ರೇಯಸ್ಸನ್ನು ದೂರತಳ್ಳುವನು! ಇದರಿಂದ ಆತನ ಶಾಶ್ವತಫಲದಿಂದ ವಂಚಿತನಾಗುವನಲ್ಲದೇ ಪ್ರಾಪಂಚಿಕ ಗೊಂದಲ-ಸಂಕಟಗಳಿಗೆ ಸಿಲುಕಿ ಒದ್ದಾಡುವನು.
ವಾಸ್ತವಿಕವಾಗಿ ಈ ಎರಡು ಮಾನವನಿಗೆ ಬೇಕಾದವುಗಳೇ! ಮುಂದುವರೆದು ಯಮಧರ್ಮರಾಯ ಹೀಗೆ ಹೇಳುತ್ತಾನೆ;
ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಃ
ತೌ ಸಂಪರೀತ್ಯ ವಿವಿನಕ್ತಿ ಧೀರಂ|
ಶ್ರೇಯೋ ಹಿ ಧೀರೋಭಿಪ್ರೇಯಸೋವೃಣೀತೇ
ಪ್ರೇಯೋ ಮಂದೋ ಯೋಗಕ್ಷೇಮಾತ್‌ವೃಣಿತೇ||
ಶ್ರೇಯಸ್ಸು ಮತ್ತು ಪ್ರೇಯಸ್ಸು ಎರಡು ಮನುಷ್ಯನಿಗೆ ಒದಗಿ ಬರುತ್ತವೆ. ಧೀರನಾದವನು ಎರಡನ್ನೂ ಸರಿಯಾಗಿ ತಿಳಿದುಕೊಳ್ಳುತ್ತಾನೆ ಅಗತ್ಯ-ಅನಿವಾರ್ಯ ಶ್ರೇಯಸ್ಸನ್ನು ಆಶ್ರಯಿಸಿಯೂ ಶ್ರೇಯಸ್ಸನ್ನು ತೊರೆಯುವುದಿಲ್ಲ.
ಪ್ರೇಯಸ್ಸಿಗಿಂತ ಶ್ರೇಯಸ್ಸಿಗೆ ಹೆಚ್ಚಿನ ಮನ್ನಣೆಯನ್ನು ನೀಡಿದವನು. ಆದರೆ ಮುದ ಬುದ್ಧಿಯವನು ತನ್ನ ಯೋಗಕ್ಷೇಮಕ್ಕೆ ಪ್ರಾಪಂಚಿಕ ಬದುಕಿಗೆ ಹೆಚ್ಚಿನ ಮನ್ನಣೆ ನೀಡುವುದರಿಂದ ಪ್ರೇಯಸ್ಸನ್ನೇ ಅನುಸರಿಸುವನು ಶ್ರೇಯಸ್ಸನ್ನು ಕಡೆಗಣಿಸಿ,ಧಿಕ್ಕರಿಸಿ ದೂರ ತಳ್ಳುವನು ಜೀನದಲ್ಲಿ ನಿಜಸುಖವನ್ನು ಪರಿಪೂರ್ಣತೃಪ್ತಿಯನ್ನು ಅನುಭವಿಸಲಾರ.
ಸಿದ್ಧಬಾಲಕ ಬಾಲ್ಯದಿಂದಲೇ ಅನೇಕ ಲೀಲೆ ತೋರಿದವ. ಬೆಳೆಯುವ ಸಿರಿ ಮೊಳೆಕೆಯಲ್ಲಿ ನೋಡು ಎಂಬಂತೆ ಬಾಲ್ಯದಲ್ಲಿಯೇ ಸಿದ್ಧನಲ್ಲಿ ಅದ್ಬುತ ಜ್ಞಾನಶಕ್ತಿ ಹುದುಗಿತ್ತು! ವಟುವೃಕ್ಷದ ಬೀಜದಲ್ಲಿ ವಟುವೃಕ್ಷ ಅಡಗಿದಂತೆ! ಇಂತ ಜ್ಞಾನ ಸಿದ್ಧನಿಗೆ ೫ ವಯಸ್ಸಿನಲ್ಲಿಯೇ ಲೌಕಿಕ ವಿದ್ಯೆ ಬೇಡವೆನಿಸಿತು! ಲೋಕಜನತೆಗೆ ಆಧ್ಯಾತ್ಮಜ್ಞಾನವ ಉಣಬಡಿಸಲು ಬಂದ ತನಗೇಕೆ ಈ ಶಾಲೆಯ ಕಲಿಕೆ? ಎಂದ.ಸಿದ್ಧನ ಈ ವಾದವನ್ನು ತಂದೆ-ತಾಯಿ, ಹಿರಿಯರು ಒಪ್ಪಲಿಲ್ಲ ಶಾಲೆಗೆ ಹೋಗಲೇಬೇಕೆಂದು ಒತ್ತಡ ಹೇರಿದರು ಹಿರಿಯರ ಮನನೋಯಿಸಬಾರದೆಂದು ಸಿದ್ಧ ಶಾಲೆಗೆ ಹೊರಡಲು ಒಪ್ಪಿದ!.
(ಮುಂದುವರೆಯುವುದು)