ಈ ದೇಶ ಕಂಡರಿಯದ ಭೀಕರ ಸವಾಲು ಕೊರೊನಾ; ರಘುರಾಮ್

Share

ನವದೆಹಲಿ, ಮೇ,16:ಈ ದೇಶದಲ್ಲಿ ಎಂದೂ ಕಂಡರಿಯದ ಭೀಕರ ಸವಾಲುಗಳನ್ನು ಎದುರಿಸುತ್ತಿದೆ.ಒಂದು ಕಡೆ ಚಿಕಿತ್ಸೆ ಸಿಗದೆ ಕೊರೊನಾ ರೋಗಿಗಳು ಸಾಯಿತ್ತಿದ್ದರೆ ಇನ್ನೊಂದೆಡೆ ಸಣ್ಣ ಮತ್ತು ಮಧ್ಯಮ ಕ್ಷೇತ್ರಗಳು ದಿವಾಳಿಯತ್ತ ಸಾಗುತ್ತಿವೆ ಎಂದು ರಿಜರ್ವ್‌ಬ್ಯಾಂಕು ಮಾಜಿ ಗೌವರ್ನರ್ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ.
ಚಿಕಾಗೋ ವಿಶ್ವವಿದ್ಯಾನಿಲಯ ದೆಹಲಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.. ಹಲವಾರು ಕಡೆ ಕೊರೊನಾ ರೋಗಿಗಳಿಗೆ ಕನಿಷ್ಠ ಚಿಕಿತ್ಸೆ ಸಿಗದೆ ಒದ್ದಾಡುತ್ತಿದ್ದಾರೆ ಇಂತವರ ಪಾಲಿಗೆ ಸರ್ಕಾರ ಇಲ್ಲವೇ ಇಲ್ಲ ಎಂಬ ಭಾವನೆ ಬಂದಿದ್ದರೆ ಅದು ಸತ್ಯ.ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಲೇ ಇವೆ .ಚಿಕಿತ್ಸೆ ಸಿಗದೆ ಹಲವು ಜೀವಗಳು ಬಲಿಯಾಗುತ್ತಿವೆ ಎಂದು ಅವರು ಹೇಳಿದರು.

‘ಸ್ವಾತಂತ್ರ್ಯ ಹೋರಾಟದ ನಂತರ ಭಾರತ ಸರ್ಕಾರ ಎದುರಿಸುತ್ತಿರುವ ದೊಡ್ಡ ಸವಾಲು ಕೋವಿಡ್-19 ಸಾಂಕ್ರಾಮಿಕ ರೋಗವಾಗಿದೆ. ಸಾಂಕ್ರಾಮಿಕದಿಂದಾಗಿ ದೇಶದ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕ್ಷೇತ್ರಗಳ ಬಹುತೇಕ ಸಂಸ್ಥೆಗಳು ದಿವಾಳಿತನದತ್ತ ಸಾಗಿವೆ. ಭಾರತವು ಸಂದಿಗ್ಧತೆಯನ್ನು ಎದುರಿಸುತ್ತಿದೆ. ಭಾರತದಲ್ಲಿ ದಿನಕ್ಕೆ ಸರಾಸರಿ 3 ಲಕ್ಷ ಜನರಲ್ಲಿ ಕೊರೋನಾ ಸೋಂಕು ವರದಿಯಾಗುತ್ತಿದೆ. ಸಾವಿನ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಈ ಕೊರೋನಾ ಅವಧಿಯಲ್ಲಿ ವಿವಿಧ ಕಾರಣಗಳಿಗಾಗಿ ಜನರಿಗೆ ಸಹಾಯ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಇದು ಕೂಡ ಒಂದು ರೀತಿಯ ಕೊರೋನಾ ಪರಿಣಾಮ ಎಂದು ನಾನು ಹೇಳಬಯಸುತ್ತೇನೆ.
‘ಕೊರೋನಾ ಹಾನಿಯನ್ನು ತಡೆಗಟ್ಟಲು ಸರ್ಕಾರಗಳು ಜಾರಿಗೆ ತಂದಿರುವ ಲಾಕ್‌ಡೌನ್‌ಗಳಿಂದಾಗಿ ಭಾರತ ಮತ್ತೊಮ್ಮೆ ದೊಡ್ಡ ಆರ್ಥಿಕ ಸವಾಲನ್ನು ಎದುರಿಸುತ್ತಿದೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಇದ್ದರೂ, ಮಹಾರಾಷ್ಟ್ರ ಸರ್ಕಾರವು ರೋಗಿಗಳಿಗೆ ಆಮ್ಲಜನಕ ಹಾಸಿಗೆಗಳ ಉತ್ತಮ ನಿರ್ವಹಣೆಯನ್ನು ಒದಗಿಸುತ್ತಿದೆ. ಅನೇಕ ಸ್ಥಳಗಳಲ್ಲಿ ಸರ್ಕಾರಗಳು ಒಂದು ನಿರ್ದಿಷ್ಟ ಮಟ್ಟವನ್ನು ಮೀರಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿವೆ. ಸುಧಾರಣೆಯು ಪಾರದರ್ಶಕವಾಗಿರಬೇಕು, ಸೂಚ್ಯವಾಗಿರಬಾರದು ಎಂದು ಅವರು ಹೇಳಿದರು.

Girl in a jacket
error: Content is protected !!