ಬೆಂಗಳೂರು, ಮೇ,೧೫: ಕೋವಿಡ್-೧೯ ಚಿಕಿತ್ಸೆಗಾಗಿ ಆಕ್ಸಿಜನ್ ಕೊರತೆ ಮುಂದುವರೆದಿದ್ದು ಕೇಂದ್ರ ಸರ್ಕಾರ ೨ನೆ ಬಾರಿ ರಾಜ್ಯಕ್ಕೆ ಆಕ್ಸಿಜನ್ ರವಾನೆ ಮಾಡಿದೆ.
೧೨೦ ಮೆಟ್ರಿಕ್ ಟನ್ ಆಕ್ಸಿಜನ್ ಶನಿವಾರ ಬೆಳಿಗ್ಗೆ ಎಕ್ಸ್ ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ತಲುಪಿತು. ಕಳಿಂಗ ನಗರದಿಂದ ಬೇಂಗಳೂರಿಗೆ ಬೆಳಗಿನ ಜಾವ೩.೨೦ಕ್ಕೆ ತಲುಪಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ತಲಾ ೨೦ ಟನ್ ಆಕ್ಸಿಜನ್ ಸಾಮರ್ಥ್ಯದ ಒಟ್ಟು ಆರು ಕಂಟೇನರ್ ಗಳಲ್ಲಿ ಸುಮಾರು ೧೨೦ ಮೆಟ್ರಿಕ್ ಟನ್ ನಷ್ಟು ತೂಕದ ಆಮ್ಲಜನಕ ಹೊತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಆಗಮಿಸಿದೆ. ಈ ಹಿಂದೆ ಅಂದರೆ ಮೇ ೧೧ರಂದು ಇದೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಟಾಟಾನಗರದಿಂದ ೧೨೦ ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಕರ್ನಾಟಕ ತಲುಪಿತ್ತು.
ಇಂದಿನ ರವಾನೆಯೂ ಸೇರಿದಂತೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಕರ್ನಾಟಕಕ್ಕೆ ಬಂದ ಆಕ್ಸಿಜನ್ ಪ್ರಮಾಣ ೨೪೦ ಟನ್ ಗೆ ಏರಿಕೆಯಾಗಿದೆ.
ಇದೇ ಟಾಟಾನಗರದಿಂದ ೧೨೦ ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಹೊರಟಿರುವ ಕರ್ನಾಟಕದ ಮೂರನೇ ಆಕ್ಸಿಜನ್ ರೈಲು ಶೀಘ್ರ ಬೆಂಗಳೂರು ತಲುಪಲಿದೆ ಎಂದು ತಿಳಿಸಿದೆ.
೨ನೇ ಕಂತಿನ ಆಮ್ಲಜನಕ ಹೊತ್ತು ತಂದ ಎಕ್ಸ್ ಪ್ರೆಸ್ ರೈಲು
Share