175ವೇಗದಲ್ಲಿ ಅಪ್ಪಳಿಸಲಿದೆ ತೌಕ್ಟೆ ಚಂಡಮಾರುತ

Share

ನವದೆಹಲಿ,ಮೇ,15: ಅರಬ್ಬಿಸಮುದ್ರದಲ್ಲಿವಾಯುಭಾರ ಕುಸಿತದಿಂದ ಗುಜರಾತ್ ಗೆ ತೌಕ್ಟೆ ಚಡ್ಡಮಾರುತ ಅಪ್ಪಳಿಸಲಿದ್ದು ಕಡಲತೀರವನ್ನು ದಾಟಿಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಬೆಳಿಗ್ಗೆಯಿಂದಲೇ ತೌಕ್ಟೆ ಚಂಡಮಾರುತ ತೀವ್ರಗೊಳ್ಳಲಿದ್ದು ಇದೇ 16-19ವರೆಗೂ ಪ್ರತಿ ಗಂಟೆಗೆ160ರಿಂದ ಆರಂಭವಾಗಿ 175 ಕಿ.ವೇಗದಲ್ಲಿ ಚಂಡಮಾರುತ ಸಂಚರಿಸಲಿದೆ.

ಮೇ.15 ರಂದು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಮೇ.15 ರಂದು ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಇನ್ನು ಕರ್ನಾಟಕದ ಕಡಲ ತೀರದ ಜಿಲ್ಲೆಗಳು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೇ.15-16 ರಂದು ಮಧ್ಯಮ, ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದ್ದು ಕೊಂಕಣ, ಗೋವಾ, ಗುಜರಾತ್ ನ ಸೌರಾಷ್ಟ್ರ ಜಿಲ್ಲೆಗಳಲ್ಲೂ ಮಳೆಯಾಗಲಿವೆ.

Girl in a jacket
error: Content is protected !!