ಬೆಂಗಳೂರು,ಮೇ,೧೪: ಕೆಲವು ಬಾರಿ ಹೀಗೆಯೇ ಯಾವಾಗಲೋ ಆದ ಘಟನೆಗೆ ಸಂಕಷ್ಟಗಳು ಎದುರಾದಾಗ ಮತ್ತೆ ಹಳೆ ಘಟನೆಗಳ ಶನಿ ಬೆನ್ನುಹತ್ತಿಬಿಡುತ್ತವೆ ಈಗ ಸಂಜನಾ ಗಲ್ರಾನಿ ಕತೆಯೂ ಹಾಗೆಯೇ ಆಗಿದೆ.
ಹೌದು ಹಳೆಯ ಪ್ರಕರಣವೊಂದು ಈಗ ಮತ್ತೆ ಅವರ ಬೆನ್ನುಬಿದ್ದಿದೆ ಅದು ಡ್ರಗ್ ಪ್ರಕರಣದ ಸಂದರ್ಭದಲ್ಲೆ ಇದೊಂದು ಸೇರ್ಪಡೆಯಾಗಿದೆ.
ಮಾಡೆಲ್ ವಂದನಾ ಜೈನ್ ದೂರಿನ್ವಯ ಕೋರ್ಟ್ ಆದೇಶದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೨೦೧೯ ರಲ್ಲಿ ಲ್ಯಾವೆಲ್ಲಿ ರಸ್ತೆಯ ಕ್ಲಬ್‌ನಲ್ಲಿ ವಂದನಾ ಜೈನ್ ಸ್ನೇಹಿತನೊಂದಿಗೆ ಮಾತುಕತೆ ವೇಳೆ ಸಂಜನಾ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳನ್ನು ಬಳಸದಂತೆ ವಂದನಾ ಜೈನ್ ಸೂಚನೆ ನೀಡಿದ್ದಾರೆ. ಬಳಿಕ ವಂದನಾ ಮುಖಕ್ಕೆ ಮಧ್ಯ ಎರಚಿ ಸಂಜನಾ ಹಲ್ಲೆ ಮಾಡಿದ್ದಾರೆ. ಇದರಿಂದ ವಂದನಾ ಜೈನ್ ಕಣ್ಣಿಗೆ ಗಾಯವಾಗಿದೆ. ಘಟನೆ ಬಳಿಕ ಸಂಜನಾ ವಂದನಾಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕೇಸ್ ದಾಖಲಾಗಿದೆ ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಂಜನಾ ವಿರುದ್ಧ ಹಲ್ಲೆ ಕೇಸ್ ದಾಖಲು
Share