ಲಸಿಕೆ ನೀಡುವಲ್ಲಿ ವಿಫಲ-ಸರ್ಕಾರದ ವಿರುದ್ಧ ತರಾಟೆಗೆ ತಗೆದುಕೊಂಡ ಕೋರ್ಟ್

Share

ಬೆಂಗಳೂರು, ಮೇ. ೧೩: ರಾಜ್ಯದ ಜನತೆಗೆ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರದ ವಿರುದ್ಧ ಹೈಕೋರ್ಟ್ ತರಾಟೆಗೆ ತಗೆದುಕೊಂಡಿದೆ.
ಜನರು ಕೊರೊನಾ ಎರಡನೇ ಅಲೆಗೆ ತತ್ತರಿಸಿದ್ದಾರೆ ಅವರಿಗೆ ವ್ಯಾಕ್ಸಿನ್ ಕೊಡಲು ನಿಮಗೆ ಆಗುತ್ತಿಲ್ಲ ಎಂದರೆ ಹೇಗೆ? ೩೧ ಲಕ್ಷ ಮಂದಿಗೆ ಯಾವಾಗ ಎರಡನೇ ಡೋಸ್ ನೀಡುತ್ತೀರಾ ನಿಮಗೆ ಸಾಧ್ಯವಿಲ್ಲ ಎಂದಾದರೆ ಹಾಗೆಯೇ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೊರ್ಟ್ ಚಾಟಿ ಏಟು ಬೀಸಿದೆ.
೫ ವರ್ಷ ಮೇಲ್ಪಟ್ಟವರಿಗೆ ೨ನೇ ಡೋಸ್ ನ ಲಸಿಕೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ವಿಚಾರಣೆ ನಡೆಸಿರುವ ರಾಜ್ಯ ಹೈಕೋರ್ಟ್ ಪೀಠ, ಈವರೆಗೂ ಶೇಕಡ ಒಂದರಷ್ಟು ಜನರಿಗೂ ಲಸಿಕೆ ಹಾಕಿಲ್ಲ. ಇದೇನಾ ನಿಮ್ಮ ಲಸಿಕಾ ಆಭಿಯಾನ ಎಂದು ತರಾಟೆಗೆ ತೆಗೆದುಕೊಂಡಿದೆ. ಇನ್ನೆರಡು ದಿನದಲ್ಲಿ ಲಸಿಕೆ ಒದಗಿಸುವ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದೆ.
ಈಗಾಗಲೇ ಮೊದಲ ಹಂತದ ಲಸಿಕೆ ಪಡೆದವರು ಎರಡನೆ ಡೋಸ್ ಪಡೆಯಲು ೩೧ ಲಕ್ಷ ಕಾದು ಕುಳಿತಿದ್ದಾರೆ. ಲಸಿಕೆ ಒದಗಿಸಲು ನಿಮ್ಮಿಂದಾಗದಿದ್ದರೆ ಹೇಳಿ. ರಾಜ್ಯದಲ್ಲಿ ೬ ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಅವರಲ್ಲಿ ಸರ್ಕಾರ ಶೇ.೧ರಷ್ಟು ಮಂದಿಗೂ ಲಸಿಕೆ ಹಾಕಿಲ್ಲ. ಕನಿಷ್ಠ ಎರಡನೇ ಡೋಸ್ ಗಾಗಿ ಕಾದುಕುಳಿತವರಿಗಾದರೂ ಎರಡು ದಿನದಲ್ಲಿ ಲಸಿಕೆ ಒದಗಿಸಿ ಎಂದು ತಾಕೀತು ಮಾಡಿದೆ.
ಒಂದನೇ ಡೋಸ್ ತೆಗೆದುಕೊಂಡ ಮೇಲೆ ೨ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ. ರಾಜ್ಯದಲ್ಲಿ ೨೬ ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಈ ಕೊರತೆಯನ್ನು ಹೇಗೆ ಸರಿಪಡಿಸುತ್ತೀರಿ. ನಿಗದಿತ ಸಮಯದಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳದಿದ್ದರೆ ಮೊದಲನೇ ಡೋಸ್ ವ್ಯರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದು, ಈಗ ಎಷ್ಟು ಉತ್ಪಾದನೆಯಾಗುತ್ತಿದೆ, ಕರ್ನಾಟಕಕ್ಕೆ ಎಷ್ಟು ಪೂರೈಕೆ ಹಂಚಿಕೆ ಮತ್ತು ಪೂರೈಕೆಯಾಗಿದೆ ಎಂದು ಎಂದು ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದಕ್ಕೆ ಉತ್ತರ ನೀಡಿದ ಕೇಂದ್ರ ಸರ್ಕಾರದ ಪರ ಅಡಿಷನಲ್ ಸಾಲಿಸಿಟರ್ ಜನರಲ್ ಅಭಿಯೋಜಕರಾದ ಐಶ್ವರ್ಯಾ ಭಾಟಿ ಅವರು, ಎರಡನೇ ಡೋಸ್ ವಿಳಂಬವಾದರೂ ಮೊದಲ ಡೋಸ್ ವ್ಯರ್ಥವಾಗುವುದಿಲ್ಲ. ಕೊವ್ಯಾಕ್ಸಿನ್ ಒಂದನೇ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಪಡೆಯಲು ೬ ವಾರ ಕಾಲಾವಕಾಶವಿದೆ. ಕೊವಿಶೀಲ್ಡ್ಗೆ ೮ ವಾರಗಳ ಕಾಲಾವಕಾಶವಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದ್ದು, ೨ ದಿನದಲ್ಲಿ ನ್ಯಾಯಾಲಯಕ್ಕೆ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು.

Girl in a jacket
error: Content is protected !!