ಬೆಂಗಳೂರು,ಅ,16-ಪಾಲನೇತೃ ಅವರು ಜಾತಿ ಮತ್ತು ರಾಜಕಾರಣದಿಂದ ದೂರವಿರುವಿದ್ದು ಕನ್ನಡವೇ ಜಾತಿ ಎಂದು ಬದುಕುತ್ತಿರುವವರು ಎಂದು ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗಾ ಸ್ವಾಮಿಗಳು ಅಭಿಪ್ರಾಯಪಟ್ಟರು.
ಕನ್ನಡಪರ ಚಿಂತಕ, ಹೋರಾಟಗಾರ ಪಾಲನೇತ್ರರವರಿಗೆ ಅಭಿನಂದನಾ ಸಮಾರಂಭ ಮತ್ತು ಕನ್ನಡ ಜಂಗಮ ಪುಸ್ತಕ ಲೋಕರ್ಪಣೆ, ಕನ್ನಡ ಪರ ಹೋರಾಟಗಾರರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ. ಉದ್ಟಾಟಿಸಿ ಮಾತನಾಡಿದರು.
ಅಭಿಮಾನಿಗಳು ಗಟ್ಟಿಯಾಗಿ ನಿಲ್ಲುತ್ತಾರೆ. ಕುಗ್ರಾಮದಲ್ಲಿ ಹುಟ್ಚಿದ ಪಾಲನೇತ್ರರವರು ಬೆಂಗಳೂರಿಗೆ ಬಂದು ಕನ್ನಡ ಚಳುವಳಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ.
ಕುಮಾರವ್ಯಾಸ ಹೇಳುತ್ತಾರೆ ಮದುವೆ ಎಂಬುದು ಮುಖ್ಯವಲ್ಲ ಬಂಧು, ಬಳಗದವರು ಸೇರುತ್ತಾರೆ ಅದು ಮುಖ್ಯ. ನೀರು ಎಲ್ಲಿ ಹಾಕಿದರು ಒಂದೇ ಆಕಾರ ಅದರಂತೆ ಪಾಲನೇತ್ರರವರು.ಜಾತಿ ಮತ್ತು ರಾಜಕಾರಣದಿಂದ ದೂರವಿರುವ ಪಾಲನೇತ್ರ, ಕನ್ನಡವೇ ಜಾತಿ ಎಂದು ಬದುಕುತ್ತಿದ್ದಾರೆ.
ಪಾಲನೇತ್ರ ಸಂಪತ್ತು ಗಳಿಸಲ್ಲಿಲ, ಬರಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅಭಿಮಾನ ಎಂದು ಹಳಿಸಿಹೋಗವುದಿಲ್ಲ, ಮಾಸಿಹೋಗುವುದಿಲ್ಲ ನಿಮ್ಮ ಅಭಿಮಾನ ಪಾಲನೇತ್ರನ ಮೇಲಿದೆ ಎಂದರು.
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ ನಡವಳಿಕೆ, ದೂರದೃಷ್ಟಿ ಚಿಂತನೆ ಇದ್ದಾಗ, ಜಾತಿ, ಧರ್ಮ ಬರವುದಿಲ್ಲ. ಪಾಲನೇತ್ರ ಕನ್ನಡ ಪರ ಹೋರಾಟಗಾರ.
ಸ್ವಾಭಿಮಾನಿ, ಕೃತಜ್ಞತೆ ಇರುವ ವ್ಯಕ್ತಿತ್ವ, ಕನ್ನಡ ಪರ ಹೋರಾಟದಲ್ಲಿ ಪಾಲನೇತ್ರನಿಗೆ ಪಾಲನೇತ್ರನೆ ಸಾಟಿ ಎಂದು ಹೇಳಿದರು.
ಗುರಿಯಿಟ್ಟು ಕೆಲಸ ಮಾಡಬೇಕು ಆಗ ಸಾಧನೆ ಮಾಡಲು ಸಾಧ್ಯ. ನಾಡು, ನುಡಿಯ ಅವಿರತ ಸೇವೆಯಿಂದ ಪಾಲನೇತ್ರರವರು ಕನ್ನಡದ ಕಟ್ಟಾಳುವಾಗಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದ ಪಾಲನೇತ್ರರವರ ಕನ್ನಡಿಗನಾಗಿ, ತಾಯಿ ಭುವನೇಶ್ವರಿ ಆಶೀರ್ವಾದದಿಂದ ಕನ್ನಡ ಪರ ಕೆಲಸಗಳು ಮಾಡಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪಡೆದಿದ್ದಾರೆ ಎಂದರು.
ಪಾಲನೇತ್ರ ಅವರು ಮಾತನಾಡಿ 4ದಶಕಗಳ ಕಾಲ ಕನ್ನಡ ಪರ ಹೋರಾಟದಲ್ಲಿ ನನಗೆ ಸಹಕಾರಿ, ಬೆಂಬಲಿಸಿದ ಎಲ್ಲ ಕನ್ನಡ ಹೋರಾಟಗಾರರಿಗೆ ಋಣಿಯಾಗಿದ್ದೇನೆ.
ಕನ್ನಡ ಪರ ಹೋರಾಟಗಾರರು ನನ್ನ ಸಂಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತಿದ್ದಾರೆ. ಕನ್ನಡಿಗರು ಎಲ್ಲರು ಒಟ್ಟಾಗಿ ಸಂಘಟಿತರಾಗಿ ಉಳಿಯೋಣ ಎಂದು ಹೇಳಿದರು.
ಸಮಾರಂಭದಲ್ಲಿ ದೇಗುಲಮಠದ ಡಾ.ಚನ್ನಬಸವ ಸ್ವಾಮೀಜಿಗಳು, ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣರವರು ಮತ್ತು ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜ ಸೋಮಣ್ಣರವರು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಕನ್ನಡ ಪರ ಹೋರಾಟಗಾರ ಡಾ.ಬೈರಮಂಗಲ ರಾಮೇಗೌಡ, ಗುರುನಾಥ ಹೊಳ್ಳರು, ಅಭಿನಂದನಾ ಸಮಿತಿ ಅಧ್ಯಕ್ಷರಾದ ಶಿವರಾಮೇಗೌ ಹಾಜರಿದ್ದರು.
ಇದೇ ವೇಳೆ,ಕನ್ನಡ ಪರ ಸಾಧಕರಾದ ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಎ.ಅಮೃತ್ ರಾಜ್, ಡಾ.ತಲಕಾಡು ಚಿಕ್ಕರಂಗೇಗೌಡ, ಕೆ.ಮಂಜನಾಥದೇವ, ವ.ಚ.ಚನ್ನೇಗೌಡ, ನಾ.ಶ್ರೀಧರ್, ಗೋ.ಮೂರ್ತಿ ಯಾದವ್, ಜಿ.ಗುರುಪ್ರಸಾದ್, ಬಿ.ಆರ್.ಶಿವಕುಮಾರ್, ಎಂಜಿ.ವಿಜಯಲಕ್ಷ್ಮಿ ರವರಿಗೆ ಗೌರವಿಸಿ, ಸನ್ಮಾನಿಸಲಾಯಿತು.