ಬೆಂಗಳೂರು, ಜು,30-ಭಯೋತ್ಪಾದನಾ ಸಂಘನೆಗಳೊಂದಿಗೆ ಸಂಬಂಧ ಹೊಂದಿರುವವರ ವಿರುದ್ಧ ಸಮರ ಸಾರಿರುವ ವಿಶೇಷ ತನಿಖಾ ದಳ ಬೆಂಗಳೂರಿನಲ್ಲಿ ನೆಲಸಿದ್ದನ್ನು ಪತ್ತೆ ಹಚ್ಚಿದೆ.
ಆಪರೇಷನ್ ಸಿಂಧೂರ ನಂತರ ದೇಶದಲ್ಲಿ ಉಗ್ರರ ಜೊತೆ ನಂಟು ಹೊಂದಿ ವಿವಿಧ ರಾಜ್ಯಗಳಲ್ಲಿ ನೆಲಸಿ ಮಾಹಿತಿ ಸಂಗ್ರಹಿದ್ದವರನ್ನು ಬಂಧಿಸುತ್ತಾ ಬಂದಿದೆ.
ಗುಜರಾತ್ ಎಟಿಎಸ್ ಬೆಂಗಳೂರಿನ ಮಹಿಳೆಯನ್ನು ಬಂಧಿಸಿದೆ, ಅವರು ಭಯಾನಕ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಜೊತೆ ಸಂಬಂಧ ಹೊಂದಿದ್ದಾರೆಂದು ಹೇಳಲಾಗುತ್ತದೆ.
ಮಹಿಳೆಯ ಹೆಸರು ಶಮಾ ಪರ್ವೀನ್, ಈಕೆಗೆ 30 ವರ್ಷ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಗುಜರಾತ್ ಎಟಿಎಸ್ ಬೆಂಗಳೂರಿನಿಂದ ಸಮಾಳನ್ನು ಬಂಧಿಸಿದೆ.
ಗುಜರಾತ್ ಎಟಿಎಸ್ ಡಿಐಜಿ ಸುನಿಲ್ ಜೋಶಿ ಈ ಮಾಹಿತಿಯನ್ನು ನೀಡಿದ್ದಾರೆ. ಅವರ ಪ್ರಕಾರ, ಶಮಾ ಪರ್ವೀನ್ ಭಾರತದಲ್ಲಿ ಅಲ್ ಖೈದಾದ ಮಾಸ್ಟರ್ ಮೈಂಡ್ ಆಗಿದ್ದರು. ಅವರು ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವಾರ, ಪೊಲೀಸರು ಅಲ್ ಖೈದಾದ 3 ಭಯೋತ್ಪಾದಕರನ್ನು ಹಿಡಿದಿದ್ದರು. ವಿಚಾರಣೆಯ ಸಮಯದಲ್ಲಿ, ಪೊಲೀಸರಿಗೆ ಶಮಾ ಪರ್ವೀನ್ ಬಗ್ಗೆ ತಿಳಿದುಕೊಂಡರು ಮತ್ತು ಪೊಲೀಸರು ಆಕೆಯನ್ನು ಬೆಂಗಳೂರಿನಲ್ಲಿಯೇ ಬಂಧಿಸಿದರು.
ಜಾರ್ಖಂಡ್ ಮೂಲದ ಶರ್ಮಾ ಪರ್ವಿನ್ ಬೆಂಗಳೂರಿನಲ್ಲಿ ನೆಲೆಸಿದ್ದಳು. ಉಗ್ರ ಸಂಘಟನೆ ಬಲಗೊಳಿಸಲು ಈಕೆ ಕೆಲಸ ಮಾಡುತ್ತಿದ್ದಳು. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಈಕೆಯನ್ನು ಬಂಧಿಸಲಾಗಿದೆ. ಸದ್ಯ ಮನೆಯಲ್ಲಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕೂಡ ಜಪ್ತಿ ಮಾಡಲಾಗಿದೆ. 3 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಈಕೆ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಸಹೋದರನ ಮನೆಯಲ್ಲಿ ನೆಲೆಸಿದ್ದಳು.