ಬೆಂಗಳೂರು,ಜೂ. ೨೯-ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಬಿಬಿಎಂಪಿ ಕಸದ ಲಾರಿಯಲ್ಲಿ ಬಿಸಾಡಿದ್ದ ಮಹಿಳೆಶವ ಈಗ ಗುರುತು ಸಿಕ್ಕಿದ್ದು ಆಕೆಯ ಹೆಸರು ಪುಷ್ಪ ಎಂದು ಗೊತ್ತಾಗಿದೆ.
ಮುಸ್ಲಿಂ ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಈಕೆಯನ್ನು ಮದುವೆಯಾಗಿದ್ದು ಪತಿಯೇ ಈಕೆಯನ್ನು ಕೊಲೆಮಾಡಿ ಇಲ್ಲಿ ಬಿಸಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ನಗರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಅನಾಮಿಕ ಮಹಿಳೆಯ ಶವ ಕೇಸ್‌ಗೆ ಟ್ವಿಸ್ಟ್‌ಗೆ ಸಿಕ್ಕಿದೆ. ಕೊಲೆಯಾದ ಮಹಿಳೆ ಹುಳಿಮಾವು ನಿವಾಸಿ ಪುಷ್ಪ ಅಲಿಯಾಸ್ ಆಶಾ ಎಂದು ಪೊಲೀಸರು ಗುರುತಿಸಿದ್ದಾರೆ. ಮಹಿಳೆ ಹಿಂದೂ ಧರ್ಮದವಳಾಗಿದ್ದು, ಕೆಲ ವರ್ಷಗಳ ಹಿಂದೆ ಮುಸ್ಲಿಂ ವ್ಯಕ್ತಿಯೊಂದಿಗಿನ ಪ್ರೀತಿಗೆ ಮಣಿದು ಮದುವೆಯಾಗಿದ್ದರು.
ಮದುವೆಯ ನಂತರ ಇಬ್ಬರೂ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ವಾಸವಿದ್ದು, ದಾಂಪತ್ಯ ಜೀವನ ನಡೆಸುತ್ತಿದ್ದರು. ಆದರೆ, ಇವರ ನಡುವೆ ವಿಚ್ಛೇದನದಂತೆ ಆಗಾಗ ತೊಂದರೆಗಳೂ ನಡೆದಿದ್ದವು ಎಂದು ವರದಿಗಳು ತಿಳಿಸುತ್ತವೆ. ಮಹಿಳೆಯ ಮೃತದೇಹವನ್ನು ಸಿ ಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಚನ್ನಮ್ಮನಕೆರೆಯ ಬಳಿ ಬಿಸಾಡಲಾಗಿದ್ದು, ಶವವನ್ನು ದ್ವಿಚಕ್ರ ವಾಹನದಲ್ಲಿ ತಂದು ಬಿಸಾಡಲಾಗಿದೆಯೆಂದು ಶಂಕೆ ವ್ಯಕ್ತವಾಗಿದೆ. ಶವವು ನಿರ್ವಸ್ತ್ರ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅತ್ಯಾಚಾರ ನಡೆದಿರಬಹುದೆಂಬ ಶಂಕೆಯೂ ಇದ್ದು, ತನಿಖೆ ಈಗ ಈ ಕೌಟುಂಬಿಕ ಕಲಹದಿಂದ ಹೀಗಾಗಿರಬಹುದು ಎಂದು ಅಂದಾಜಿಸಲಾಗಿದೆ.
ಆಕೆಯ ಗಂಡನೇ ಈ ಭೀಕರ ಕೃತ್ಯ ಮಾಡಿರಬಹುದು ಎಂಬ ಅನುಮಾನ ಪೊಲೀಸ್ ಅಧಿಕಾರಿಗಳಿಗೆ ಬಂದಿದೆ. ಹುಳಿಮಾವು ಪ್ರದೇಶದಲ್ಲಿ ಮಹಿಳೆಯನ್ನು ಕೊಲೆ ಮಾಡಿ ಬಳಿಕ ಶವವನ್ನು ಇತರೆ ಪ್ರದೇಶಕ್ಕೆ ತಂದು ಬಿಸಾಡಿರುವ ಸಾಧ್ಯತೆಯೂ ಇರಬಹುದು ಎಂದು ತಿಳಿದುಬಂದಿದೆ. ಪೊಲೀಸರು ಈಗಾಗಲೇ ಶಂಕಿತ ಗಂಡನಿಗಾಗಿ ಬಲೆ ಬೀಸಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ದೂರವಾಣಿ ಲೊಕೆಷನ್ ಟ್ರ್ಯಾಕಿಂಗ್ ಮುಂತಾದ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಕಸದ ಲಾರಿಯಲ್ಲಿ ದೊರೆತಿದ್ದ ಶವ ಹೆಸರು ಪತ್ತೆ,ಗಂಡನೆ ಕೊಲೆ ಶಂಕೆ!
Share