ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆ

Share

*ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆ*

ಚಿತ್ರದುರ್ಗ,ಏ,21-ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆಂದು ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಹೇಳಿದರು.

ಮಠದ ಕುರುಬರಹಟ್ಟಿ ಗ್ರಾಮದ ಶ್ರೀ ದುರುಗಮ್ಮ ದೇವಸ್ಥಾನದ ಬಳಿ ವಿಮುಕ್ತಿ ವಿದ್ಯಾ ಸಂಸ್ಥೆ ,ಧಮ್ಮ ಕೇಂದ್ರ ಮತ್ತು ಶಾಂತಿ ಮತ್ತು ಸೌಹಾರ್ದ ವೇದಿಕೆವತಿಯಿಂದ
ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆ ಅಂಗವಾಗಿ ಸಂವಿಧಾನ ಜಾಗೃತಿ ಮತ್ತು ಸೌಹಾರ್ದ ಯಾತ್ರೆ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ,ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ರವರು ಜಾತಿ,ಮತ,ಧರ್ಮ ಗಳನ್ನು ವಿಂಗಡಿಸದೇ ಪ್ರತಿಯೊಬ್ಬರು ಸಮಾನರು ಅಂತ ಪರಿಗಣಿಸಿ ಸಂವಿಧಾನದ ಮೂಲಕ ಹಕ್ಕು ನೀಡಿದ್ದು.ಇಲ್ಲಿ ಮೇಲು,ಕೀಳುಗಳಿಗೆ ಅವಕಾಶವಿಲ್ಲದೆ ಎಲ್ಲರೂ ಸಮಾನರು ಅಂತ ಹೇಳಿದ್ದಾರೆ.

ಭಾರತದ ಸಂವಿಧಾನವೂ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದು.ವಿಶೇಷವಾಗಿ ಮಹಿಳೆಯರಿಗೆ ಮತದಾನದ ಹಕ್ಕು ನೀಡುವ ಮುಖಾಂತರ ಪುರುಷರಷ್ಟೇ ಸಮಾನರು ಅಂತ ಪರಿಗಣಿಸಲಾಗಿದೆ.ಎಂದರು.

ದಲಿತರು,ಶೋಷಿತರಿಗೆ ಶಿಕ್ಷಣ ಪಡೆದುಕೊಳ್ಳುವುದರೊಂದಿ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಟ್ಟಿರುವ ಬಾಬಾಸಾಹೇಬರು ಪ್ರತಿಯೊಬ್ಬರನ್ನು ಸಮಾನತೆಯಿಂದ ನೋಡುವ ಪ್ರಯತ್ನ ಮಾಡಿದ್ದಾರೆ ಎಂದರು.

ವಿಮುಕ್ತಿ ವಿದ್ಯಾ ಸಂಸ್ಥೆಯ ಮೂಲಕ ಕಿಶೋರಿಯರ ರೂಪಕ ತಂಡ ಸಂವಿಧಾನ ಪೀಠಿಕೆಯನ್ನು ನೃತ್ಯ ರೂಪಕದ ಮೂಲಕ ಪ್ರದರ್ಶನ ಮಾಡಿ ಜನಸಾಮಾನ್ಯರಿಗೆ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅರ್ಥೃೆಯಿಸುವ ಪ್ರಮಾಣಿಕ ಪ್ರಯತ್ನವನ್ನು ನಡೆಸಿದರು.

ಅಂಬೇಡ್ಕರ್ ರವರ ವಿಚಾರಧಾರೆಯನ್ನು ಪಂಚಾಯಿತಿ ಮಟ್ಟದಲ್ಲಿ ಪ್ರದರ್ಶನ ಮಾಡುವುದರೊಂದಿಗೆ ಅಂಬೇಡ್ಕರ್ ರನ್ನು ಹಳ್ಳಿಗೆಯವರೆಗೂ ತಲುಪಿಸುವಲ್ಲಿ ಧಮ್ಮ ಕೇಂದ್ರ,ಶಾಂತಿ ವೇದಿಕೆಯ ಶ್ರಮ ಸಾರ್ಥಕತೆ ಕಂಡುಕೊಂಡಿದೆ.

ಮಠದ ಕುರುಬರಹಟ್ಟಿ ಗ್ರಾಮದ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಣೇಶ್,ಈಶಣ್ಣ,ವಿ.ಕೆ.ಶಂಕರಪ್ಪ,ಮಾಜಿ ಗ್ರಾಮ ಪಂ ಅಧ್ಯಕ್ಷರಾದ ಸುಶೀಲಮ್ಮ,ಅಧ್ಯಕ್ಷರಾದ ಅನ್ನಪೂರ್ಣ,ನಿರ್ದೇಶಕರಾದ ವಿಶ್ವ ಸಾಗರ್,ನಾಗರತ್ನಮ್ಮ ,ಬೀಬಿಜಾನ್,ಅರಣ್ಯ ಸಾಗರ್,ನಾಗಪ್ಪ,ಹೆಚ್.ಕುಮಾರ್ ,ರಮೇಶ್ ಮುಂತಾದವರು ಹಾಜರಿದ್ದರು

Girl in a jacket
error: Content is protected !!