ಅಖಿಲಭಾರತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾಗಿ ಕಾಶಪ್ಪನವರ್ ಆಯ್ಕೆ

Share

ಹುಬ್ಬಳ್ಳಿ, ಏ,18-ಮಹತ್ವದ ಬೆಳವಣಿಗೆಯಲ್ಲಿ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಆಯ್ಕೆಯಾಗಿದ್ದಾರೆ.
ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಶಪ್ಪನವರ್ ಪೀಠದಿಂದ ಕೆಳಗಿಳಿಸಿ ಬೇರೆಯವರನ್ನು ನೇಮಿಸುವ ಬಗ್ಗೆಯೂ ಕಿಡಿಕಾರಿದ್ದರು..
ಬಿಜೆಪಿಯಿಂದ ಉಚ್ಚಾಟಿತ ಬಸವನಗೌಡ ಪಾಟೀಲ್ ಯತ್ನಾಳ್ ಪರ ನಿಂತಿದ್ದ ಜಯಮೃತ್ಯಂಜಯ ಸ್ವಾಮೀಜಿ ಬಗ್ಗೆ ಎಚ್ಚರಿಕೆಯೂ ನೀಡಿದ್ದರು

ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಹುಬ್ಬಳ್ಳಿಯಲ್ಲಿ ಅಧ್ಯಕ್ಷರ ಆಯ್ಕೆ ಕುರಿತಾಗಿ ನಡೆದ ಸಭೆಯಲ್ಲಿ ಟ್ರಸ್ಟ್​ ಪದಾಧಿಕಾರಿಗಳಿಂದ ಕಾಶಪ್ಪನವರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಈ ಬೆಳವಣಿಗೆಯು ಇತ್ತೀಚೆಗೆ ಪಂಚಾಮಸಾಲಿ ಸಮುದಾಯದ ಸ್ವಾಮೀಜಿ ಬದಲಾವಣೆ ವಿಚಾರ, ಪಂಚಮಸಾಲಿ ಸಮುದಾಯದ ನಾಯಕರ ರಾಜಕೀಯ ವಾಕ್ಸಮರದ ಬೆಳವಣಿಗೆಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಟ್ರಸ್ಟ್ ನೇಮಿಸಿದೆ​. ಅದರ​​ ನಿಬಂಧನೆಗಳಿಗೆ ಒಳಪಟ್ಟು ಸ್ವಾಮೀಜಿ ಸಮಾಜವನ್ನು ಸಂಘಟಿಸಬೇಕು. ಅದು ಬಿಟ್ಟು ಓರ್ವ ವ್ಯಕ್ತಿ ಯತ್ನಾಳ್ ಹಾಗೂ ಪಕ್ಷವನ್ನು ಬೆಂಬಲಿಸಿ ನಿಲ್ಲುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ಸಮಾಜ ಕಟ್ಟುನಿಟ್ಟಿನ ಕಠಿಣ ಕ್ರಮ ಜರುಗಿಸಲಿದೆ. ಸ್ವಾಮೀಜಿ ಅವರನ್ನೇ ಬದಲಾಯಿಸುತ್ತೇವೆ ಎಂಬ ಮಾತನ್ನು ಆಡಿದ್ದನ್ನು ಇಲ್ಲಿ ನೆನಪಿಸಬಹುದು.

ಯತ್ನಾಳ್​ ಪರ ಸ್ವಾಮೀಜಿ ಮಾತನಾಡುತ್ತಿರುವುದು ಟ್ರಸ್ಟ್ ನಿಬಂಧನೆಗಳ ವಿರುದ್ಧವಾಗಿದೆ. ಸ್ವಾಮೀಜಿಯವರು ಟ್ರಸ್ಟ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಕೀಳುಮಟ್ಟದಲ್ಲಿ ಯತ್ನಾಳ್​ ಮಾತನಾಡಿದ್ದಾರೆ. ಅಂತವರ ಪರ ನಿಂತ ಸ್ವಾಮೀಜಿಗಳ ಪೀಠಕ್ಕೆ ಕುತ್ತು ಎಂಬ ಎಚ್ಚರಿಕೆಯನ್ನು ಕೆಲ ದಿನಗಳ ಹಿಂದೆಯಷ್ಟೇ ಕಾಶಪ್ಪನವರ್ ನೀಡಿದ್ದರು.
ಇದರ ಮೊದಲ ಮೆಟ್ಟಿಲು ಈ ಬೆಳವಣಿಗೆ ಎನಿಸುತ್ತದೆ.

Girl in a jacket
error: Content is protected !!